ಅ.5ರಿಂದ ಪ್ರವಾಸೋದ್ಯಮ ಕುರಿತ 2 ದಿನಗಳ ರಾಷ್ಟ್ರೀಯ ಸಮ್ಮೇಳನ
ಮೈಸೂರು

ಅ.5ರಿಂದ ಪ್ರವಾಸೋದ್ಯಮ ಕುರಿತ 2 ದಿನಗಳ ರಾಷ್ಟ್ರೀಯ ಸಮ್ಮೇಳನ

September 27, 2018

ಮೈಸೂರು: – ಮಹಾ ಜನ ಸ್ನಾತಕೋತ್ತರ ಕೇಂದ್ರದ ಪ್ರವಾಸೋ ದ್ಯಮ ಮತ್ತು ಆತಿಥ್ಯ ವಿಭಾಗ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿ ಆಶ್ರಯ ದಲ್ಲಿ ಅ.5 ಮತ್ತು 6ರಂದು `ಟ್ರಾವೆಲ್ ಲಾಗ್ -18’ ಶೀರ್ಷಿಕೆಯಡಿ 2 ದಿನಗಳ `ಪ್ರವಾ ಸೋದ್ಯಮ’ ಕುರಿತ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ.ರೇಣುಕಾರ್ಯ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಮೇಟ ಗಳ್ಳಿಯ ಕೆಆರ್‍ಎಸ್ ರಸ್ತೆಯಲ್ಲಿರುವ ಸ್ನಾತ ಕೋತ್ತರ ಕೇಂದ್ರದ ಟೂರಿಸಂ ಸಭಾಂಗಣ ದಲ್ಲಿ ಈ ಎರಡು ದಿನಗಳ ಸಮ್ಮೇಳನ ನಡೆಯಲಿದೆ. ಅ.5ರಂದು ಬೆಳಿಗ್ಗೆ 9.30ಕ್ಕೆ ಸಮ್ಮೇಳನವನ್ನು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಉದ್ಘಾಟನೆ ನೆರವೇರಿ ಸಲಿದ್ದಾರೆ ಎಂದು ತಿಳಿಸಿದರು.

ಅತಿಥಿಗಳಾಗಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್, ನಿರ್ದೇಶಕ ಬಿ.ರಾಮು, ಜಿಲ್ಲಾ ಉಪ ನಿರ್ದೇಶಕ ಜನಾರ್ಧನ್ ಪಾಲ್ಗೊಳ್ಳಲಿದ್ದು, ಮಲೇಷ್ಯಾದ ಟೇಲರ್ಸ್ ವಿಶ್ವವಿದ್ಯಾನಿಲ ಯದ ಉಪ ಡೀನ್ ಡಾ.ಟೋನಿ ಕೆ.ಥಾಮಸ್ ಪ್ರವಾಸೋದ್ಯಮ ಮತ್ತು ತಂತ್ರಜ್ಞಾನದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ಸಮ್ಮೇ ಳನದಲ್ಲಿ ಪ್ರವಾಸೋದ್ಯಮದಲ್ಲಿ ಡಿಜಿಟಲ್ ತಂತ್ರಜ್ಞಾನದ ಹೊಸ ಆಯಾಮಗಳು ಮತ್ತು ಸವಾಲುಗಳನ್ನು ಕುರಿತು ಚರ್ಚೆ ಗಳು ನಡೆಯಲಿವೆ. ದೇಶದ ವಿವಿಧ ವಿಶ್ವ ವಿದ್ಯಾನಿಲಯಗಳಿಂದ ಹಲವು ಸಂಪ ನ್ಮೂಲ ವ್ಯಕ್ತಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸೋದ್ಯಮ ಕ್ಷೇತ್ರದ ಪರಿಣತರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಸೆ.28ರಂದು ಬ್ಯಾಂಕಿಂಗ್ ಕ್ಷೇತ್ರ ಕುರಿತು ವಿಚಾರ ಸಂಕಿರಣ: ಮೈಸೂರಿನ ಮಹಾ ಜನ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇ ಜಿನ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಸೆ.28ರಂದು `ಭಾರತದ

ಬ್ಯಾಂಕಿಂಗ್ ಕ್ಷೇತ್ರದ ಸಮಸ್ಯೆಗಳು : ವಾಸ್ತವ ಸಂಗತಿ ಮತ್ತು ಹಿತಾಸಕ್ತಿ’ ಕುರಿತಂತೆ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಂಸ್ಥೆಯ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಎಂ. ಭವಾನಿ ಇದೇ ವೇಳೆ ತಿಳಿಸಿದರು.
ಸ್ನಾತಕೋತ್ತರ ಕೇಂದ್ರದ ಟೂರಿಸಂ ಸಭಾಂಗಣದಲ್ಲಿ ನಡೆಯುವ ವಿಚಾರ ಸಂಕಿ ರಣವನ್ನು ಅಂದು ಬೆಳಿಗ್ಗೆ 9.30ಕ್ಕೆ ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಆಯಿಷಾ ಎಂ.ಷರೀಫ್ ಉದ್ಘಾಟಿಸಲಿದ್ದಾರೆ. ಕೊಲ್ಕ ತ್ತಾದ ಆರ್‍ಬಿಐ ನೋಟು ಮುದ್ರಣ ಕೇಂದ್ರದ ಉಪಪ್ರಧಾನ ವ್ಯವಸ್ಥಾಪಕ ಡಾ.ಎನ್.ಕೃಷ್ಣ ಸ್ವಾಮಿ ಪ್ರಧಾನ ಭಾಷಣ ಮಾಡಲಿದ್ದಾರೆ. ಮಹಾಜನ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಡಾ.ವಿಜಯಲಕ್ಷ್ಮೀ ಮುರಳೀ ಧರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾಜನ ಸಂಸ್ಥೆಯ ಅಧ್ಯಕ್ಷ ಆರ್.ವಾಸುದೇವ ಮೂರ್ತಿ, ಉಪಾಧ್ಯಕ್ಷ ಟ.ಮುರಳಿಧರ್ ಭಾಗವತ್ ಉಪಸ್ಥಿತರಿರುವರು ಎಂದರು. ಮಹಾಜನ ಎಜುಕೇಷನ್ ಸೊಸೈಟಿ ಅಧ್ಯಕ್ಷ ಆರ್.ವಾಸು ದೇವಮೂರ್ತಿ, ಕಾರ್ಯದರ್ಶಿ ಡಾ. ವಿಜಯ ಲಕ್ಷ್ಮೀ ಮುರಳಿಧರ್, ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದ ಮುಖ್ಯಸ್ಥ ಹೆಚ್.ಎನ್. ಸತೀಶ್ ಇತರರು ಗೋಷ್ಠಿಯಲ್ಲಿದ್ದರು.

Translate »