ಮೈಸೂರು: ಜೆಡಿಎಸ್ ರಾಷ್ಟ್ರಾಧ್ಯಕ್ಷರೂ ಆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಆತ್ಮಕಥೆ ಪೂರ್ಣ ಗೊಳಿಸಲು 2 ದಿನಗಳ ಕಾಲ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಅಕ್ಟೋಬರ್ ತಿಂಗ ಳಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ಮಾಡಿಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡರು, ಆತ್ಮಕಥೆಗೆ ಅಂತಿಮ ರೂಪ ನೀಡಲು ಕಳೆದ ರಾತ್ರಿಯೇ ಮೈಸೂರಿಗೆ ಆಗ ಮಿಸಿ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ತೋಟದ ಮನೆ ಯಲ್ಲಿ ಬೆಳಗಿನಿಂದಲೇ ತಮ್ಮ ಆತ್ಮಕಥೆಗೆ ಅಂತಿಮ ಸಿದ್ಧತೆ ನಡೆಸಿದ್ದಾರೆ.