ಮೈಸೂರು ಜೈಲಿನಿಂದ 20 ಖೈದಿಗಳ ಬಿಡುಗಡೆ
ಮೈಸೂರು

ಮೈಸೂರು ಜೈಲಿನಿಂದ 20 ಖೈದಿಗಳ ಬಿಡುಗಡೆ

August 17, 2022

ಮೈಸೂರು, ಆ. 16(ಆರ್‍ಕೆ)- 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸನ್ನಡತೆ ಹಿನ್ನೆಲೆಯಲ್ಲಿ ಮೈಸೂರು ಕೇಂದ್ರ ಕಾರಾ ಗೃಹದ 20 ಮಂದಿ ಸಾಜಾ ಬಂಧಿಗಳನ್ನು ಸೋಮವಾರ ಬಿಡುಗಡೆ ಮಾಡಲಾಯಿತು.

ಕೇಂದ್ರ ಸರ್ಕಾರದ ಮಾರ್ಗಸೂಚಿಯ ನ್ವಯ ರಾಜ್ಯ ಸರ್ಕಾರದ ಆದೇಶದಂತೆ ಬಿಡುಗಡೆಯಾದ 20 ಮಂದಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಬೀಳ್ಕೊಟ್ಟರು. ಈ ಸಂದರ್ಭ ಮಾತ ನಾಡಿದ ಅವರು, ತಿಳಿದೋ, ತಿಳಿಯ ದೆಯೋ ಒಂದು ಕ್ಷಣದ ಕೋಪ ನಿಗ್ರಹಿ ಸಲಾರದೆ ಮಾಡಿದ ತಪ್ಪಿನಿಂದ ಜೈಲು ವಾಸ ಅನುಭವಿಸಿರುವ ನೀವು, ಮನಪರಿ ವರ್ತನೆಯಾಗಿ ಸನ್ನಡತೆ ಪ್ರದರ್ಶಿಸಿರುವು ದರಿಂದ ಸರ್ಕಾರ ಬಿಡುಗಡೆ ಮಾಡಿದೆ. ಜೈಲಿನಿಂದ ಹೋದ ಮೇಲೆ ಬೇರೆಯವ ರಿಗೆ ಕೆಡುಕು ಮಾಡದೇ, ವೃತ್ತಿ ಮಾಡಿ ಕೊಂಡು ಕುಟುಂಬದ ಸದಸ್ಯರೊಂದಿಗೆ ಗೌರವದಿಂದ ನೆಮ್ಮದಿ ಜೀವನ ನಡೆಸಿ ಮುಂದೆ ಎಂದೂ ಅಪರಾಧ ಕೃತ್ಯ ಮಾಡ ಬೇಡಿ ಎಂದು ಹಿತವಚನ ಹೇಳಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ಜೈಲು ಚೀಫ್ ಸೂಪರಿಂಟೆಂ ಡೆಂಟ್ ಕೆ.ಸಿ.ದಿವ್ಯಶ್ರೀ, ಸರ್ಕಾರದ ಆದೇಶ ದಂತೆ ಸನ್ನಡತೆ ಪ್ರದರ್ಶಿಸಿದ 20 ಮಂದಿ ಸಜಾ ಬಂಧಿಗಳನ್ನು ಸ್ವಾತಂತ್ರ್ಯ ಅಮೃ ತೋತ್ಸವದ ಅಂಗವಾಗಿ ಬಿಡುಗಡೆ ಮಾಡ ಲಾಗುತ್ತಿದೆ. ಅದೇ ರೀತಿ 2023ರ ಜನವರಿ 26ರಂದು ಗಣರಾಜ್ಯೋತ್ಸವದಂದೂ ಸನ್ನಡತೆ ಆಧಾರದಲ್ಲಿ ಖೈದಿಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.ಜೈಲು ಸಲಹಾ ಸಮಿತಿಯು ಕಳುಹಿಸಿ ಕೊಟ್ಟ ಪಟ್ಟಿಯನ್ನು ಸರ್ಕಾರ ಪರಿಶೀಲಿಸಿ ಬಿಡುಗಡೆಗೆ ಅರ್ಹ ಖೈದಿಗಳನ್ನು ಅನು ಮೋದಿಸುತ್ತದೆ. ಹೊರಗೆ ಹೋಗಿ ಉತ್ತಮ ವ್ಯಕ್ತಿಗಳಾಗಿ ನೆಮ್ಮದಿಯಿಂದ ಜೀವನ ನಡೆಸಲಿ ಎಂಬುದೇ ಅವಧಿಗೂ ಮುನ್ನ ಖೈದಿಗಳನ್ನು ಬಿಡುಗಡೆ ಮಾಡುವ ಉದ್ದೇಶವಾಗಿದೆ ಎಂದರು. ಜೈಲಿನಿಂದ ಹೊರಬರುತ್ತಿ ದ್ದಂತೆಯೇ ಕರೆದೊಯ್ಯಲು ಬಂದಿದ್ದ ಸಂಬಂ ಧಿಕರನ್ನು ಕಂಡು ಬಿಡುಗಡೆ ಯಾದವರ ಕಣ್ಣುಗಳಲ್ಲಿ ನೀರಾಡಿದ್ದು ಕಂಡುಬಂದಿತು. ಪರಸ್ಪರ ಆಲಿಂಗಿಸಿ, ಸಂತಸದಿಂದ ಅವ ರವರ ಊರುಗಳಿಗೆ ತೆರಳಿದರು.

Translate »