ಸೈಬರ್ ಅಪರಾಧ: ಓರ್ವನ ಸೆರೆ, ನಗದು ಸೇರಿ 17.41 ಲಕ್ಷ ರೂ. ಮೌಲ್ಯದ ವಸ್ತು ವಶ
ಮೈಸೂರು

ಸೈಬರ್ ಅಪರಾಧ: ಓರ್ವನ ಸೆರೆ, ನಗದು ಸೇರಿ 17.41 ಲಕ್ಷ ರೂ. ಮೌಲ್ಯದ ವಸ್ತು ವಶ

August 17, 2022

ಮೈಸೂರು, ಆ.16(ಆರ್‍ಕೆ)-ಸೈಬರ್ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿರುವ ಸೆನ್ ಪೊಲೀಸ್ ಠಾಣೆ ಅಧಿಕಾರಿಗಳು, 15.05 ಲಕ್ಷ ರೂ. ನಗದು ಸೇರಿದಂತೆ ಒಟ್ಟು 17,41,000 ರೂ. ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

2020ರ ನವೆಂಬರ್ 1 ರಿಂದ ಡಿಸೆಂ ಬರ್ 24ರವರೆಗೆ ಯುವಕನೋರ್ವ (ಆ ವೇಳೆ ಅಪ್ರಾಪ್ತನಾಗಿದ್ದ) ವ್ಯಕ್ತಿಯೊಬ್ಬರ ಹೆಚ್‍ಡಿಎಫ್‍ಸಿ ಬ್ಯಾಂಕ್ ಖಾತೆಯ ಡೆಬಿಟ್ ಕಾರ್ಡ್ ನಂಬರ್‍ನಲ್ಲಿ 21,02,041 ರೂ. ಹಣವನ್ನು ಖಾತೆದಾರರ ಗಮನಕ್ಕೆ ಬಾರದೆ ವರ್ಗಾವಣೆ ಮಾಡಿರುವ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆ ಕೈಗೊಂಡಿದ್ದ ಪೊಲೀಸರು, ತಂತ್ರಜ್ಞಾನದ ನೆರವಿನಿಂದ ಆರೋಪಿಯು ವಸ್ತುಗಳನ್ನು ಖರೀದಿಸಿದ್ದ ಕಂಪನಿಯಿಂದ ಮಾಹಿತಿ ಪಡೆದು 2022ರ ಆಗಸ್ಟ್ 14 ರಂದು ಆರೋಪಿಯನ್ನು ಬಂಧಿಸಿದ್ದಾರೆ. ಆತ ದೂರುದಾರರಿಗೆ ಪರಿಚಯಸ್ಥನಾ ಗಿದ್ದು, ಅವರ ಡೆಬಿಟ್ ಕಾರ್ಡ್ ಮತ್ತು ಸಿವಿವಿ ನಂಬರ್ ತಿಳಿದುಕೊಂಡು ಅಮೆ ಜಾನ್‍ನಲ್ಲಿ 20 ಲಕ್ಷ ರೂ. ಬೆಲೆಬಾಳುವ ಚಿನ್ನದ ನಾಣ್ಯಗಳು ಮತ್ತು ಇತರ ವಸ್ತು ಗಳನ್ನು ಖರೀದಿಸಿದ್ದ ಎಂಬುದು ವಿಚಾ ರಣೆ ವೇಳೆ ತಿಳಿಯಿತು. ಚಿನ್ನವನ್ನು ಮಾರಾಟ ಮಾಡಿದ 15,05,000 ರೂ. ನಗದು, 2,16,000 ರೂ. ಬೆಲೆಬಾಳುವ 2 ಕ್ಯಾಮರಾ, ಟಿವಿ, ಕ್ಯಾಮರಾ ಲೆನ್ಸ್, ಟ್ರೆಡ್‍ಮಿಲ್, ಸ್ಪೀಕರ್, ಯುಪಿಎಸ್‍ಗಳು ಹಾಗೂ 4 ಗ್ರಾಂ ಚಿನ್ನದ ಸರ ಸೇರಿ ಒಟ್ಟು 17,41,000 ರೂ. ಬೆಲೆಬಾಳುವ ವಸ್ತು ಗಳನ್ನು ಪೊಲೀಸರು ಬಂಧಿತ ಆರೋಪಿ ಯಿಂದ ವಶಪಡಿಸಿಕೊಂಡಿದ್ದಾರೆ.

ಡಿಸಿಪಿ ಪ್ರದೀಪ್ ಗುಂಟಿ ನಿರ್ದೇಶನ ದಂತೆ ದೇವರಾಜ ಉಪ ವಿಭಾಗದ ಎಸಿಪಿ ಎಂ.ಎನ್.ಶಶಿಧರ್ ಮಾರ್ಗದರ್ಶನದಂತೆ ಸೈಬರ್ ಕ್ರೈಂ ಠಾಣೆ ಇನ್ಸ್‍ಪೆಕ್ಟರ್ ಎನ್.ಜಯ ಕುಮಾರ್, ಸಬ್‍ಇನ್ಸ್‍ಪೆಕ್ಟರ್‍ಗಳಾದ ಎನ್. ಅನಿಲ್‍ಕುಮಾರ್, ಎಂ.ಎಲ್.ಸಿದ್ದೇಶ, ಎಎಸ್‍ಐ ಗಳಾದ ಸುಭಾಷ್‍ಚಂದ್ರ, ನಾಗೇಂದ್ರ, ಭಾಷಾ ಹಾಗೂ ಸಿಬ್ಬಂದಿ ಪತ್ತೆ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು. ಈ ಪತ್ತೆ ಕಾರ್ಯವನ್ನು ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಪ್ರಶಂಸಿಸಿದ್ದಾರೆ.

Translate »