ಬುಡಸಹಿತ ಉರುಳಿಬಿದ್ದ ಗುಲ್‍ಮೊಹರ್ ಮರ: ಅದೃಷ್ಟವಶಾತ್ ಹೆಚ್ಚಿನ ಹಾನಿ ಇಲ್ಲ
ಮೈಸೂರು

ಬುಡಸಹಿತ ಉರುಳಿಬಿದ್ದ ಗುಲ್‍ಮೊಹರ್ ಮರ: ಅದೃಷ್ಟವಶಾತ್ ಹೆಚ್ಚಿನ ಹಾನಿ ಇಲ್ಲ

August 17, 2022

ಮೈಸೂರು,ಆ.16(ಎಸ್‍ಬಿಡಿ)- ಮೈಸೂ ರಿನಲ್ಲಿ ಗುಲ್‍ಮೊಹರ್ ಮರವೊಂದು ಬುಡ ಸಮೇತ ರಸ್ತೆಗೆ ಉರುಳಿ ಬಿದ್ದಿದ್ದು, ಅದೃಷ್ಟ ವಶಾತ್ ಸಾವು-ನೋವು ಸಂಭವಿಸಿಲ್ಲ.

ನಗರದ ನಾರಾಯಣಶಾಸ್ತ್ರಿ ರಸ್ತೆ ಶ್ರೀ ಮಹದೇಶ್ವರಸ್ವಾಮಿ ದೇವಾಲಯದ ಬಳಿ ಯಿದ್ದ ಗುಲ್‍ಮೊಹರ್ ಮರ ಮಂಗಳ ವಾರ ಸಂಜೆ ಸುಮಾರು 5.30ರ ವೇಳೆಯಲ್ಲಿ ಬುಡ ಸಮೇತ ರಸ್ತೆ ಅಡ್ಡಲಾಗಿ ಉರುಳಿ ಬಿದ್ದಿದೆ. ಈ ವೇಳೆ ಮರದ ದೊಡ್ಡ ಕೊಂಬೆ ಗಳು ಅಪ್ಪಳಿಸಿದ್ದರಿಂದ ಎದುರು ಬದಿಯಲ್ಲಿ ಪಾರ್ಕಿಂಗ್ ಮಾಡಿದ್ದ ಸ್ಕೂಟರ್ ಸಂಪೂರ್ಣ ನಜ್ಜು ಗುಜ್ಜಾಗಿದ್ದು ಒಂದು ಆಟೋಗೆ ಹಾನಿ ಯಾಗಿದೆ. ವಿದ್ಯುತ್ ತಂತಿಗೆ ಕೊಂಬೆ ಬಡಿದು ಕಂಬವೊಂದು ಮುರಿದು ವಾಲಿದೆ.

ಸಾರ್ವಜನಿಕರು ನಗರಪಾಲಿಕೆ ಕಂಟ್ರೋಲ್‍ಗೆ ಕರೆ ಮಾಡಿ ವಿಷಯ ತಿಳಿ ಸಿದ ನಂತರ `ಅಭಯ ತಂಡ-2’ ಸ್ಥಳಕ್ಕಾ ಗಮಿಸಿ, ತೆರವು ಕಾರ್ಯಾಚರಣೆ ಆರಂಭಿ ಸಿತು. ತಂಡದ ಶಿವು, ರಘು, ಅಣ್ಣಪ್ಪ, ರವಿ ಹಾಗೂ ರಂಗ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಕೊಂಬೆಗಳನ್ನು ಕ್ಷಿಪ್ರವಾಗಿ ತೆರವು ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಂಚಾರ ಪೊಲೀಸರು ಸ್ಥಳದಲ್ಲಿದ್ದು, ವಾಹನ ಸಂಚಾರ ನಿರ್ವಹಣೆ ಮಾಡಿದರು.

ಸದ್ಯ ಅನಾಹುತವಾಗಿಲ್ಲ: ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ದೇವಾಲಯ, ಪುಸ್ತಕ ಮಳಿಗೆ, ಹೋಟೆಲ್, ಮೆಡಿಕಲ್ಸ್, ಗ್ಯಾರೇಜ್, ಜುವೆ ಲರ್ಸ್ ಸೇರಿದಂತೆ ಎಲ್ಲಾ ರೀತಿಯ ವ್ಯಾಪಾ ರದ ಮಳಿಗೆಗಳಿವೆ. ಹಾಗಾಗಿ ಪಾದಚಾರಿ ಗಳು ಹೆಚ್ಚಾಗಿರುತ್ತಾರೆ. ಅದೃಷ್ಟವಶಾತ್ ಇಂದು ಮರ ಉರುಳಿ ಬಿದ್ದ ಸ್ಥಳದಲ್ಲಿ ಯಾರೂ ಇರಲಿಲ್ಲ. ಸಂಚರಿಸುವ ವಾಹನಗಳ ಮೇಲೆ ಬಿದ್ದಿದ್ದರೆ ಸಾವು-ನೋವು ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ಆತಂಕ ವ್ಯಕ್ತಪಡಿಸಿದರು.

ಬರೀ ಘೋಷಣೆ: ಮೈಸೂರಲ್ಲಿ ಗಾಳಿ-ಮಳೆಗೆ ಮರಗಳು ಉರುಳುವುದು, ಕೊಂಬೆ ಗಳು ಮುರಿದು ಬೀಳುವುದು ಸಹಜ ಎನ್ನು ವಂತಾಗಿದೆ. ರಸ್ತೆ ಇಕ್ಕೆಲಗಳಲ್ಲಿರುವ ಮರಗಳ ಸುತ್ತ ಡಾಂಬರು ಹಾಕಿರುವುದು ಮತ್ತಿತರ ಕಾರಣಗಳಿಂದ ಅವು ನಿಶ್ಯಕ್ತವಾಗಿವೆ. ಹಸಿ ರಿನಿಂದ ಕಂಗೊ ಳಿ ಸುವಂತೆ ಕಂಡರೂ ಬುಡ ಹಾಳಾ ಗಿರುತ್ತದೆ. ಈ ರೀತಿಯ ಅಶಕ್ತ ಮರಗಳನ್ನು ಗುರುತಿಸಿ, ಅರಣ್ಯ ಇಲಾಖೆ ಸಮನ್ವಯತೆಯೊಂದಿಗೆ ಅವು ಗಳನ್ನು ತೆರವು ಮಾಡುವುದಾಗಿ ಮೈಸೂರು ನಗರಪಾಲಿಕೆ ತಿಳಿಸಿತ್ತು. ಆದರೆ ಅದು ಬರೀ ಘೋಷಣೆಯಾಗಿ ಉಳಿದಿದೆ. ಮೊದಲ ಹಂತದಲ್ಲಿ ಹೆಚ್ಚು ವಾಹನ ಸಂಚಾರವಿರುವ ರಸ್ತೆಗಳಲ್ಲಿರುವ ಈ ಕಾರ್ಯಾಚರಣೆ ನಡೆಸ ಬೇಕಿತ್ತು. ದಸರಾ ಸಮೀಪಿಸುತ್ತಿದ್ದು ಈಗ ಲಾದರೂ ಈ ಬಗ್ಗೆ ಗಮನಹರಿಸಿ ಅನಾ ಹುತ ಆಗದಂತೆ ಮುನ್ನೆಚ್ಚರಿಕೆ ವಹಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Translate »