ಮೈಸೂರಲ್ಲಿ 202 ಹೊಸ ಕೊರೊನಾ ಸೋಂಕು ಪ್ರಕರಣ: 25 ಮಂದಿ ಸಾವು
ಮೈಸೂರು

ಮೈಸೂರಲ್ಲಿ 202 ಹೊಸ ಕೊರೊನಾ ಸೋಂಕು ಪ್ರಕರಣ: 25 ಮಂದಿ ಸಾವು

August 25, 2020

ಮೈಸೂರು, ಆ.24 (ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಸೋಮವಾರ 202 ಜನರಿಗೆ ಸೋಂಕು ದೃಢಪಟ್ಟಿದ್ದು, ಕೆಲ ದಿನಗಳಲ್ಲಿ 25 ಸೋಂಕಿತರು ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್‍ನಲ್ಲಿ ಪ್ರಕಟಿಸಲಾಗಿದೆ.

ಹೊಸ 202 ಪ್ರಕರಣ ಸೇರಿದಂತೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 12,598ಕ್ಕೆ ಏರಿಕೆಯಾಗಿದೆ. ಆದರೆ 2,240 ಸೋಂಕಿತರು ಡಿಸ್ಚಾರ್ಜ್ ಆಗಿರುವುದು ಸಮಾ ಧಾನಕರ ಸಂಗತಿಯಾಗಿದೆ. ಇದರೊಂದಿಗೆ ಈವರೆಗೆ 9,542 ಜನ ಕೊರೊನಾ ಸೋಂಕು ಜಯಿಸಿದಂತಾಗಿದೆ. ಇನ್ನು ಕೇವಲ 2,711 ಜನರಲ್ಲಿ ಮಾತ್ರ ಸೋಂಕು ಸಕ್ರಿಯವಾಗಿದ್ದು, ಕೋವಿಡ್ ಆಸ್ಪತ್ರೆ ಹಾಗೂ ನಿಗಾ ಕೇಂದ್ರಗಳಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.

25 ಮಂದಿ ಸಾವು: 32 ವರ್ಷದ ಯುವಕ ಸೇರಿ 25 ಸೋಂಕಿತರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಆ.15ರಂದು 71 ವರ್ಷದ ವೃದ್ಧೆ, ಆ.16ರಂದು 73 ವರ್ಷದ ವೃದ್ಧ, ಆ.17ರಂದು 65 ವರ್ಷದ ವೃದ್ಧ, ಆ.18ರಂದು 48, 55, 60, 65, 75 ವರ್ಷದ ಮಹಿಳೆಯರು ಹಾಗೂ 32, 55, 74, 60, 60, 75, 80 ವರ್ಷದ ವ್ಯಕ್ತಿಗಳು, ಆ.20ರಂದು 53 ವರ್ಷದ ಮಹಿಳೆ, 70, 73 ವರ್ಷದ ವೃದ್ಧರು, ಆ.21ರಂದು 85 ವರ್ಷದ ವೃದ್ಧ, 57, 64, 77 ವರ್ಷದ ಮಹಿಳೆಯರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 345ಕ್ಕೆ ಏರಿಕೆಯಾಗಿದೆ.

ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರ ಸಾವಿನ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮುಷ್ಕರ ನಡೆಸಿದ್ದರಿಂದ ಕಳೆದ 4 ದಿನಗಳಿಂದ ಕೊರೊನಾ ಸಂಬಂಧಿತ ಸಂಪೂರ್ಣ ಮಾಹಿತಿ ಲಭ್ಯವಾಗಿರಲಿಲ್ಲ. ಪರಿಣಾಮ ಆ ದಿನಗಳ ಅಂಕಿ ಅಂಶವನ್ನೂ ಇಂದಿನ ಹೆಲ್ತ್ ಬುಲೆಟಿನ್‍ನಲ್ಲಿ ಪ್ರಕಟಿಸಿರಬಹುದೆಂದು ಹೇಳಲಾಗಿದೆ.

ರಾಜ್ಯದ ವಿವರ: ಬೆಂಗಳೂರು ನಗರ 1,918, ಬೆಳಗಾವಿ 319, ಬಳ್ಳಾರಿ 306, ಕೊಪ್ಪಳ 271, ಧಾರವಾಡ 221, ಶಿವಮೊಗ್ಗ 220, ಮೈಸೂರು 202, ದಕ್ಷಿಣಕನ್ನಡ 201, ಹಾಸನ 200, ರಾಯಚೂರು 183, ಕಲಬುರಗಿ 176, ದಾವಣಗೆರೆ 167, ಹಾವೇರಿ 148, ಗದಗ 141, ವಿಜಯಪುರ 138, ಚಿಕ್ಕಮಗಳೂರು 123, ಯಾದಗಿರಿ 122, ಉಡುಪಿ 104, ಉತ್ತರಕನ್ನಡ 91, ತುಮಕೂರು 85, ಬೀದರ್ 83, ಮಂಡ್ಯ 82, ಚಿಕ್ಕಬಳ್ಳಾಪುರ 76, ಬಾಗಲಕೋಟೆ 53, ರಾಮನಗರ 49, ಕೋಲಾರ 45, ಬೆಂಗಳೂರು ಗ್ರಾಮಾಂತರ 35, ಕೊಡಗು 35, ಚಾಮರಾಜನಗರ 29 ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ 28 ಸೇರಿದಂತೆ ರಾಜ್ಯದಲ್ಲಿ ಸೋಮವಾರ 5,851 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2,83, 665ಕ್ಕೆ ಏರಿಕೆಯಾಗಿದೆ. ಸೋಮವಾರ 8,061 ಜನ ಡಿಸ್ಚಾರ್ಜ್ ಆಗಿದ್ದು, ಈವರೆಗೆ 1,97,625 ಸೋಂಕಿತರು ಗುಣಮುಖರಾದಂತಾಗಿದೆ. ಚಿಕಿತ್ಸೆ ಫಲಿಸದೇ ಇಂದು 130 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 4,810ಕ್ಕೆ ಏರಿಕೆಯಾಗಿದೆ. ಗುಣಮುಖ ರಾದವರು ಹಾಗೂ ಸಾವಿನ ಸಂಖ್ಯೆ ಹೊರತುಪಡಿ ಸಿದರೆ ರಾಜ್ಯದಲ್ಲಿನ್ನು 81,211 ಸಕ್ರಿಯ ಪ್ರಕರಣಗಳಿವೆ.

Translate »