ನೀವೇ ಪಕ್ಷ ಮುನ್ನಡೆಸಿ, ಸಾಧ್ಯವಾಗದಿದ್ದರೆ ರಾಹುಲ್ ಗಾಂಧಿ ಅವರಿಗೆ ಪಟ್ಟ ಕಟ್ಟಿ
ಮೈಸೂರು

ನೀವೇ ಪಕ್ಷ ಮುನ್ನಡೆಸಿ, ಸಾಧ್ಯವಾಗದಿದ್ದರೆ ರಾಹುಲ್ ಗಾಂಧಿ ಅವರಿಗೆ ಪಟ್ಟ ಕಟ್ಟಿ

August 25, 2020

ಬೆಂಗಳೂರು, ಆ. 24(ಕೆಎಂಶಿ)- ಅನಾರೋಗ್ಯ ಕಾರಣದಿಂದ ಪಕ್ಷವನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ ರಾಹುಲ್‍ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷರ ನ್ನಾಗಿ ನೇಮಿಸಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸೋನಿಯಾಗಾಂಧಿ ಅವರಿಗೆ ಮನವಿ ಮಾಡಿದ್ದಾರೆ. ಪತ್ರ ಹಾಗೂ ಟ್ವೀಟ್ ಮೂಲಕ ಸೋನಿಯಾ ಅವರನ್ನು ವಿನಂತಿಸಿ ಕೊಂಡಿರುವ ಸಿದ್ದರಾಮಯ್ಯ ಸಂಕಷ್ಟ ಸನ್ನಿವೇಶದಲ್ಲಿ ಪಕ್ಷ ಸಿಲುಕಿ ಕೊಂಡಿರು ವುದು ಇದೇ ಮೊದಲೇನಲ್ಲ. ಪ್ರತಿ ಬಾರಿ ಇಂತಹ ಸನ್ನಿವೇಶ ಗಳನ್ನು ಪಕ್ಷ ಎದುರಿಸಿದೆ. ಗಾಂಧಿ ಕುಟುಂಬ ಇಂತಹ ಸಂಕಷ್ಟದ ಅವಧಿಯಲ್ಲಿ ಪಕ್ಷವನ್ನು ಮುನ್ನಡೆಸಿದೆ ಎಂದು ತಿಳಿಸಿದ್ದಾರೆ. 1977ರಲ್ಲಿ ಇಂದಿರಾಗಾಂಧಿ ಸೋಲು ಕಂಡಾಗ ಕುಟುಂಬದ ವಿರುದ್ಧ ದೊಡ್ಡ ಆಪಾದನೆ ಮಾಡಲಾಗಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿದ ಇಂದಿರಾ ಗಾಂಧಿ ಪಕ್ಷವನ್ನು ಮತ್ತೆ ಸಂಘಟಿಸಿ, ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು.

ರಾಜೀವ್‍ಗಾಂಧಿ ಹತ್ಯೆ ಬಳಿಕವೂ ಇಂತಹ ಪರಿಸ್ಥಿತಿ ಉಂಟಾಯಿತು. ಇಂತಹ ಸಂದರ್ಭದಲ್ಲಿ ನೀವು ಪಕ್ಷದ ನಾಯಕತ್ವ ವಹಿಸಿಕೊಂಡು ಸತತವಾಗಿ ಎರಡು ಬಾರಿ ಕಾಂಗ್ರೆಸ್ ನೇತೃತ್ವದ ಆಡಳಿತವನ್ನು ರಾಷ್ಟ್ರಕ್ಕೆ ನೀಡಿದ್ದೀರಿ. ನಿಮಗೆ ಪ್ರಧಾನಿ ಅವಕಾಶ ಬಂದಿದ್ದರೂ, ಅದನ್ನು ನಿರಾಕರಿಸಿದ್ದೀರಿ. ಸದ್ಯದ ಪರಿಸ್ಥಿತಿಯಲ್ಲಿ ನೀವೇ ಮುಂದುವರೆಯಬೇಕು. ಒಂದು ವೇಳೆ ಅನಾರೋಗ್ಯ ಕಾರಣಕ್ಕೆ ಸಾಧ್ಯವಿಲ್ಲವೆಂದಾದರೆ ರಾಹುಲ್‍ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಿ ಎಂದು ಮನವಿ ಮಾಡಿದ್ದಾರೆ.

Translate »