ಬುಧವಾರ ರಾಜ್ಯದಲ್ಲಿ 204 ಸೋಂಕಿತರು
ಮೈಸೂರು

ಬುಧವಾರ ರಾಜ್ಯದಲ್ಲಿ 204 ಸೋಂಕಿತರು

June 18, 2020

ಬೆಂಗಳೂರು, ಜೂ.17-ಹೊರ ರಾಜ್ಯದಿಂದ ಬಂದಿದ್ದ 106 ಹಾಗೂ ಇಬ್ಬರು ವಿದೇಶದಿಂದ ಬಂದಿದ್ದವರು ಸೇರಿದಂತೆ 204 ಮಂದಿಗೆ ರಾಜ್ಯದಲ್ಲಿ ಬುಧವಾರ ಕೊರೊನಾ ಸೋಂಕು ದೃಢ ಪಟ್ಟಿದೆ. ಅದೇ ವೇಳೆ ಮಂಡ್ಯದಲ್ಲಿ 6 ಮಂದಿ ಸೇರಿದಂತೆ 348 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಸೋಂಕಿ ತರ ಸಂಖ್ಯೆ 7,734ಕ್ಕೆ ಏರಿದ್ದರೂ, ಒಟ್ಟು 4,804 ಮಂದಿ ಗುಣಮುಖರಾಗಿ ಉಳಿದ 2,824 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಿದ್ದು, ಶೇ.62ರಷ್ಟು ಕೊರೊನಾ ಸೋಂಕಿತರು ಗುಣಮುಖ ರಾಗಿರು ವುದು ಸಮಾಧಾನ ತಂದಿದೆ. ಬೆಂಗಳೂರಿನಲ್ಲಿ 61, 64, 90 ವರ್ಷದ ವೃದ್ಧರು, 70 ವರ್ಷದ ವೃದ್ಧೆ ಹಾಗೂ 39 ವರ್ಷದ ಮಹಿಳೆ ಸೇರಿ ಐವರು ಮೃತಪಟ್ಟರೆ, ಶಿವಮೊಗ್ಗದಲ್ಲಿ 56 ವರ್ಷದ ಮಹಿಳೆ, ಬೀದರ್‍ನಲ್ಲಿ 26 ವರ್ಷದ ಯುವಕ ಮತ್ತು ಬಳ್ಳಾರಿಯಲ್ಲಿ 62 ವರ್ಷದ ವೃದ್ಧಿ ಸೇರಿದಂತೆ ಇಂದು 8 ಮಂದಿ ಮೃತಪಟ್ಟಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 102ಕ್ಕೆ ಏರಿದೆ.

ಮೈಸೂರಿನಲ್ಲಿ 1, ಬೆಂಗಳೂರು 55, ಯಾದಗಿರಿ 37, ಬಳ್ಳಾರಿ 29, ಕಲಬುರಗಿ 19, ಬೀದರ್ 12, ದಕ್ಷಿಣ ಕನ್ನಡ ಮತ್ತು ಧಾರವಾಡ ತಲಾ 8, ಮಂಡ್ಯ 7, ಹಾಸನ 5, ಉಡುಪಿ, ಬಾಗಲಕೋಟೆ ಮತ್ತು ಶಿವಮೊಗ್ಗ ತಲಾ 4, ದಾವಣಗೆರೆ, ಚಿಕ್ಕಬಳ್ಳಾಪುರ ಮತ್ತು ಉತ್ತರ ಕನ್ನಡ ತಲಾ 3, ರಾಯಚೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ಇಂದು ದಾಖಲಾಗಿದೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 20,638, ದ್ವಿತೀಯ ಸಂಪರ್ಕದ 14,948 ಮಂದಿ ಸೇರಿದಂತೆ ಒಟ್ಟು 35,586 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

Translate »