ಬಾಲಿವುಡ್‍ನಲ್ಲೂ ಬುಲ್‍ಬುಲ್ ಹವಾ
ಸಿನಿಮಾ

ಬಾಲಿವುಡ್‍ನಲ್ಲೂ ಬುಲ್‍ಬುಲ್ ಹವಾ

June 19, 2020

ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ಅನುಷ್ಕಾ ಶರ್ಮಾ ಕೆಲ ವರ್ಷಗಳ ಗ್ಯಾಪ್ ನಂತರ `ಪಾತಾಳ್‍ಲೋಕ್’ ವೆಬ್ ಸರಣಿಯ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿz್ದÁರೆ. ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿರುವ `ಪಾತಾಳ್‍ಲೋಕ್’ ಪ್ರೇP್ಷÀಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದೇ ಖುಷಿಯಲ್ಲಿ ಅನುಷ್ಕಾ ಈಗ ಮತ್ತೊಂದು ಚಿತ್ರವನ್ನು ಅನೌನ್ಸ್ ಮಾಡಿz್ದÁರೆ. ವಿಶೇಷ ಅಂದರೆ ಆ ಚಿತ್ರಕ್ಕೆ ಚಾಲೆಂಜಿಂಗ್‍ಸ್ಟಾರ್ ದರ್ಶನ್ ಅಭಿನಯದ ಸೂಪರ್‍ಹಿಟ್ ಸಿನಿಮಾದ ಹೆಸರನ್ನೆ ಇಟ್ಟಿz್ದÁರೆ. ಹೌದು, ದರ್ಶನ್ ಮತ್ತು ರಚಿತಾರಾಮ್ ಅಭಿನಯದ ಯಶಸ್ವೀ ಚಿತ್ರ ಬುಲ್‍ಬುಲ್ ಹೆಸರನ್ನೆ ಅನುಷ್ಕಾ ಶರ್ಮಾ ತಮ್ಮ ಮುಂದಿನ ಸಿನಿಮಾಗೆ ಫೈನಲ್ ಮಾಡಿz್ದÁರೆ. ಕನ್ನಡದ ಬುಲ್‍ಬುಲ್ ರೊಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾ ಕಥೆ ಇರುವ ಚಿತ್ರವಾಗಿತ್ತು. ಆದರೆ ಅನುಷ್ಕಾ ಶರ್ಮಾ ಅವರ ಬುಲ್‍ಬುಲ್ ಹಾರರ್ ಹಿನ್ನೆಲೆಯ ಚಿತ್ರವಾಗಿದೆ. ಅನುಷ್ಕಾ ಅವರಿಗೆ ಹಾರರ್ ಚಿತ್ರಗಳು ಅಂದರೆ ಮೊದಲಿದಲೂ ತುಂಬಾ ಇಷ್ಟವಂತೆ. ಅಲ್ಲದೆ ಅವರು ಸಾಕಷ್ಟು ಹಾರರ್ ಸಿನಿಮಾಗಳಲ್ಲಿ ಸಹ ಅಭಿನಯಿಸಿz್ದÁರೆ. ಈಗಾಗಲೇ ಈ ಚಿತ್ರದ ಟೀಸರ್‍ನ್ನು ರಿಲೀಸ್ ಮಾಡಲಾಗಿದ್ದು, ಈ ಟೀಸರ್

ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲವನ್ನು ಮೂಡಿಸಿದೆ. ಅಂದಹಾಗೆ ಈ ಚಿತ್ರವೂ ಸಹ ನೆಟ್‍ಫ್ಲಿಕ್ಸ್‍ನಲ್ಲಿ ನೇರವಾಗಿ ಬಿಡುಗಡೆಯಾಗಲಿದೆ.

Translate »