ಬಾರಿಸು ಕನ್ನಡ ಡಿಂಡಿಮವ ಪೋಸ್ಟರ್ ಬಿಡುಗಡೆ
ಸಿನಿಮಾ

ಬಾರಿಸು ಕನ್ನಡ ಡಿಂಡಿಮವ ಪೋಸ್ಟರ್ ಬಿಡುಗಡೆ

June 19, 2020

ನವಿಲುಗರಿ ನವೀನ್ ಪಿ.ಬಿ. ಅವರ ಸಾರಥ್ಯದಲ್ಲಿ ತಯಾರಾದ ಚಿತ್ರ `ಬಾರಿಸು ಕನ್ನಡ ಡಿಂಡಿಮವ’. ಈ ಸಿನಿಮಾದ ಪೆÇೀಸ್ಟರ್ ಇತ್ತೀ ಚೆಗೆ ಬಿಡುಗಡೆಯಾಗಿದೆ. ಲಕ್ಷ್ಮೀ ಬಾರಮ್ಮಾ ಖ್ಯಾತಿಯ ಚಂದುಗೌಡ ಅವರು ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ಈ ಸಿನಿಮಾದಲ್ಲಿ ಬಹುಪಾಲು ಮಕ್ಕಳೇ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಚಿತ್ರದ ನಿರ್ದೇಶಕ ನವೀನ್ ಮಾಹಿತಿ ನೀಡಿz್ದÁರೆ. ಈ ಸಿನಿಮಾದಲ್ಲಿ 4 ಹಾಡು ಗಳಿದ್ದು, ಸಂಗೀತ ಸಂಯೋಜನೆಯನ್ನು ಹೊಸ ಪ್ರತಿಭೆ ಮನುರಾಜ್ ಮಾಡುತ್ತಿz್ದÁರೆ. ಈ ಸಿನಿಮಾಕ್ಕೆ ಅಶ್ವಿಕ ಅವರು ಬಂಡವಾಳ ಹೂಡಿದ್ದು, ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರು ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿz್ದÁರೆ.

ಈ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಮೈಸೂರು ಹಾಗೂ ಪಾಂಡವಪುರದ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈ ಚಿತ್ರದ ಕ್ಯಾಮೆರಾವರ್ಕ್, ಸಂಕಲನ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ನವಿಲುಗರಿ ನವೀನ್ ಅವರೇ ವಹಿಸಿಕೊಂಡಿz್ದÁರೆ. ಎ¯್ಲÁ ಅಂದು ಕೊಂಡ ಹಾಗೇ ಆದರೆ ಚಿತ್ರತಂಡವು ಆಗಸ್ಟ್ ತಿಂಗಳಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ನಡೆಸಿ ಚಿತ್ರೀಕರಣ ಶುರು ಮಾಡುವ ಯೋಜನೆ ಹಾಕಿಕೊಂಡಿದೆ.

Translate »