ಕತ್ತಲೆ ಕಾಡಿನಲ್ಲಿ ಸರಣಿ ಕೊಲೆಗಳು !
ಸಿನಿಮಾ

ಕತ್ತಲೆ ಕಾಡಿನಲ್ಲಿ ಸರಣಿ ಕೊಲೆಗಳು !

June 19, 2020

ಆಪ್ತಮಿತ್ರ, 6-5=2ದಂಥ ಸಸ್ಪೆನ್ಸ್, ಥ್ರಿಲ್ರರ್ ಜಾನರ್ ಚಿತ್ರಗಳು ಹಿಟ್ ಆದನಂತರ ಅದೇ ಥರದ ಚಿತ್ರಗಳ ನಿರ್ಮಾಣ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವುದೂ ಅಂಥಾ ಸಿನಿಮಾಗಳೇ. ಅಂಥದೇ ಜಾನರ್‍ನಲ್ಲಿ ನಿರ್ಮಾಣವಾದ ಮತ್ತೊಂದು ಚಿತ್ರ `ಕತ್ತಲೆ ಕಾಡು’. ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರಕ್ಕೆ ರಾಜು ದೇವಸಂದ್ರ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‍ಕಟ್ ಹೇಳಿದ್ದಾರೆ. ಸಾಗರ್‍ಕಿಂಗ್ ಪೆÇ್ರಡಕ್ಷನ್ಸ್ ಮೂಲಕ ಸಾಗರ್ ನಿಯಾಜ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಆಗಿ ಪ್ರಮುಖ ಪಾತ್ರದಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಕತ್ಲೆ ಕಾಡು ಚಿತ್ರದ ಇಡೀ ಕಥೆ ನಡೆಯುವುದು ಕಾಡಿನ ಪರಿಸರದಲ್ಲೇ. ಮೇಕೆದಾಟು ಸುತ್ತಮುತ್ತಲ ಪ್ರದೇಶದಲ್ಲಿ ಶೂಟಿಂಗ್‍ಗೆ ಅನುಮತಿ ಸಿಗದಿದ್ದರೂ ಶಿಫಾರಸು ಪಡೆದುಕೊಂಡು ನಂತರ ಚಿತ್ರತಂಡ ಶೂಟಿಂಗ್ ಮಾಡಿಕೊಂಡು ಬಂದಿದೆ. ವಿಶೇಷವಾಗಿ ನಿರ್ಮಾಪಕರ ಸಹೋದರ ಶಿವಾಜಿನಗರ್ ಲಾಲ್ ಈ ಚಿತ್ರದಲ್ಲಿ ನಾಯಕನ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳಿದ್ದು, ಮೂವರು ಯುವಕರು ಹಾಗೂ ಮೂವರು ಯುವತಿಯರ ಮೇಲೆ ಇಡೀ ಚಿತ್ರದ ಕಥೆ ಸಾಗುತ್ತದೆ. ಇವರ ಜೊತೆಗೆ ಅರಣ್ಯಾಧಿಕಾರಿಯ ಪಾತ್ರ ಚಿತ್ರಕಥೆಗೆ ಟ್ವಿಸ್ಟ್ ನೀಡುತ್ತದೆ. ಶಿವಾಜಿನಗರ ಲಾಲ್, ಸಂಜು ಮತ್ತು ಚೇತನ್ ಮೂವರು ನಾಯಕರಾಗಿದ್ದು, ಸಂಹಿತಾ ಷಾ, ಸಿಂಚನ ಹಾಗೂ ಸಿಂಧೂರಾವ್ ನಾಯಕಿಯರ ಪಾತ್ರ ನಿರ್ವಹಿಸಿದ್ದಾರೆ.

ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಇರುವ ಚಿತ್ರವಾಗಿದ್ದು, ಆರು ಜನ ಸ್ನೇಹಿತರು ಕಾಡಿಗೆ ಹೋದಾಗ ಅಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳೇ ಚಿತ್ರದ ಪ್ರಮುಖ ಕಥಾವಸ್ತು. ಕಾಡಿನಲ್ಲಿ ನಡೆಯುವ ಸರಣಿ ಕೊಲೆಗಳ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಅಲ್ಲಿನ ಅರಣ್ಯಾಧಿಕಾರಿ ಹೇಗೆ ಪತ್ತೆ ಹಚ್ಚುತ್ತಾನೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್. ಈ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಆರಂಭವಾಗಿದ್ದು, ಈಗಾಗಲೇ ಚಿತ್ರೀಕರಣ ಹಾಗೂ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸಗಳು ಮುಗಿದು ಬಿಡುಗಡೆಗೆ ರೆಡಿಯಾಗಿದೆ. ಲಾಕ್‍ಡೌನ್ ಮುಗಿದು ಚಿತ್ರ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ ಕೂಡಲೇ ನಮ್ಮ ಚಿತ್ರವನ್ನು ರಿಲೀಸ್ ಮಾಡುತ್ತೇವೆ ಎಂದು ಚಿತ್ರದ ನಿರ್ಮಾಪಕರಾದ ಸಾಗರ್ ನಿಯಾಜ್ ಅವರ ಹೇಳಿದ್ದಾರೆ.

ನಿರ್ಮಾಪಕರು ಮುಸ್ಲಿಂ ಆದರೂ ಕನ್ನಡ ಭಾಷೆ, ನಾಡು ನುಡಿಯ ಬಗ್ಗೆ ಅಪಾರ ಪ್ರೇಮ ಹೊಂದಿದ್ದಾರೆ. ಅದೇ ಕಾರಣಕ್ಕೆ ಕನ್ನಡ ಪ್ರೇಕ್ಷಕರಿಗೆ ಒಂದು ಉತ್ತಮ ಸದಭಿರುಚಿಯ ಚಿತ್ರವನ್ನು ನೀಡಬೇಕು ಎಂದು ಕತ್ಲೆ ಕಾಡು ಚಿತ್ರವನ್ನು ನಿರ್ಮಾಣ ಮಾಡಿದ್ದಾರಂತೆ. ಇನ್ನು ಈ ಚಿತ್ರದಲ್ಲಿ 2 ಹಾಡುಗಳಿದ್ದು, ಆರವ್ ರಿಶಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರಮೇಶ್ ಕೊಯಿರಾ ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ 6 ಸಾಹಸ ದೃಶ್ಯಗಳಿದ್ದು ಕೌರವ್ ವೆಂಕಟೇಶ್ ಸಾಹಸ ಸಂಯೋಜನೆ ಮಾಡಿದ್ದಾರೆ. ಚಿತ್ರದ ನಾಯಕನಾದ ಶಿವಾಜಿನಗರ್ ಲಾಲ್ ಕಳೆದ 25 ವರ್ಷಗಳಿಂದಲೂ ಸಹ ಕಲಾವಿದನಾಗಿ ಗಂಗಾ, ಅಕ್ಷತಾ, ಶಿವಾಜಿನಗರ, ಗೋಸಿಗ್ಯಾಂಗ್ ಸೇರಿದಂತೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕತ್ಲೆಕಾಡು ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರವಾಗಿದೆ.

Translate »