ಮೈಸೂರು, ಮೇ 20(ಎಂಟಿವೈ)- ಮೈಸೂರು ಜಿಲ್ಲೆ ಯಲ್ಲಿನ ಕಂಪನಿಗಳು, ಕಾರ್ಖಾನೆಗಳು ಹಾಗೂ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಮೆ ಮಾಡಲು ಜಾರ್ಖಂಡ್ ಹಾಗೂ ಉತ್ತರಾಖಂಡ್ ನಿಂದ ಬಂದು ಲಾಕ್‍ಡೌನ್‍ನಿಂದಾಗಿ 58 ದಿನಗಳಿಂದ ಕಷ್ಟಕ್ಕೆ ಸಿಲುಕಿದ್ದ 220 ಕಾರ್ಮಿಕರು ಇಂದು ತವರೂರಿ ನತ್ತ ಪ್ರಯಾಣ ಬೆಳೆಸಿದರು. ಕಾರ್ಮಿಕರು ಬೆಂಗಳೂರು ವರೆಗೆ ತೆರಳಲು ಸಾರಿಗೆ ಸಂಸ್ಥೆಯ 7 ಬಸ್ ವ್ಯವಸ್ಥೆ ಮಾಡಿಕೊಟ್ಟು ಜಿಲ್ಲಾಡಳಿತ ಬೀಳ್ಕೊಡುಗೆ ನೀಡಿತು.
ಮೈಸೂರಿನ ಇನ್ಫೋಸಿಸ್ ಕಂಪನಿ, ನಂಜನ ಗೂಡಿನ ಯುಬಿ ಫ್ಯಾಕ್ಟರಿ ನೌಕರರು, ಪಿರಿಯಾ ಪಟ್ಟಣ, ಬೈಲುಕುಪ್ಪೆ ಸೇರಿದಂತೆ ವಿವಿಧೆಡೆ ಕಾರ್ಖಾನೆ ಮತ್ತು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿ ದ್ದವರು ಹಾಗೂ ವಿದ್ಯಾರ್ಥಿಗಳು ಹಾಗೂ ಪ್ರವಾಸಕ್ಕೆ ಬಂದು ಸಿಲುಕಿದ್ದವ ಎರಡೂ ರಾಜ್ಯಗಳವರು ಇಂದು ತಮ್ಮೂರಿನತ್ತ ಪ್ರಯಾಣ ಬೆಳೆಸಿದರು. 220 ಮಂದಿ `ಸೇವಾಸಿಂಧು’ ವೆಬ್‍ಸೈಟ್ ಮೂಲಕ ತಮ್ಮ ರಾಜ್ಯಕ್ಕೆ ಮರಳಲು ಹೆಸರು ನೋಂದಾಯಿಸಿದ್ದರು. ಬುಧ ವಾರ ಸಂಜೆ ಬೆಂಗಳೂರಿಂದ ಜಾರ್ಖಂಡ್, ಉತ್ತರಾ ಖಂಡ್‍ಗೆ ತೆರಳುತ್ತಿರುವ `ಶ್ರಮಿಕ್’ ವಿಶೇಷ ರೈಲಿನಲ್ಲಿ ಪ್ರಯಾಣಿಸಲು ಇವರಿಗೆ ಟಿಕೆಟ್ ದೊರೆತಿದೆ. ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ 220 ಮಂದಿಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್.ವೆಂಕಟೇಶ್ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಮಾಡಿ ಪ್ರಮಾಣಪತ್ರ ನೀಡಲಾಯಿತು.
ಜಾರ್ಖಂಡ್‍ನ 102 ಮಂದಿ ಮೂರು ಬಸ್‍ಗಳಲ್ಲಿ, ಉತ್ತರಖಾಂಡ್‍ನ 118 ಮಂದಿ ನಾಲ್ಕು ಬಸ್‍ಗಳಲ್ಲಿ ಪಯಣಿಸಿದರು. ಸಾರಿಗೆ ಸಂಸ್ಥೆ ತಲಾ 300 ರೂ. ಟಿಕೆಟ್ ದರ ನಿಗದಿಪಡಿಸಿದೆ.
ಕಳೆದ ವಾರ ಮೈಸೂರಿಂದ 2 ಶ್ರಮಿಕ್ ವಿಶೇಷ ರೈಲು ಉತ್ತರಪ್ರದೇಶಕ್ಕೆ 2800 ಕಾರ್ಮಿಕರನ್ನು ಕರೆದೊಯ್ದಿದೆ. ಹಂತ ಹಂತವಾಗಿ ಹೊರ ರಾಜ್ಯದ ವಲಸೆ ಕಾರ್ಮಿಕರು ತಮ್ಮೂರಿಗೆ ಮರಳಲು ಅವ ಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ ಎ.ಸಿ.ತಮ್ಮಣ್ಣ, ಡಿಸಿಐಬಿ ರವಿಕುಮಾರ್, ಎನ್‍ಆರ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಜಿ.ಶೇಖರ್ ಎರಡೂ ರಾಜ್ಯಗಳವರನ್ನು ಬೀಳ್ಕೊಟ್ಟರು.