ಮೈಸೂರಲ್ಲಿ ಸೋಂಕು ಇಳಿಮುಖ ಬುಧವಾರ 220 ಮಂದಿಗೆ ಕೊರೊನಾ
ಮೈಸೂರು

ಮೈಸೂರಲ್ಲಿ ಸೋಂಕು ಇಳಿಮುಖ ಬುಧವಾರ 220 ಮಂದಿಗೆ ಕೊರೊನಾ

October 22, 2020

ರಾಜ್ಯದಲ್ಲಿ 5872 ಜನರಿಗೆ ಜಾಡ್ಯ
ಮೈಸೂರು, ಅ.21-ಮೈಸೂರು ಜಿಲ್ಲೆಯಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಬುಧವಾರ 220 ಮಂದಿಗೆ ಸೋಂಕು ತಗುಲಿದ್ದರೆ, 1147 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 45,864 ಮಂದಿಗೆ ಸೋಂಕು ತಗುಲಿದ್ದು, ಅವರಲ್ಲಿ 39,886 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಮೈಸೂರು ಜಿಲ್ಲೆಯಲ್ಲಿ ಶೇ.86.90ರಷ್ಟು ಸೋಂಕಿತರು ಗುಣಮುಖರಾಗಿರುವುದು ಸಮಾ ಧಾನಕರ ಸಂಗತಿಯಾಗಿದೆ. ಇಂದು 3 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 932ಕ್ಕೆ ಏರಿದೆ. 5046 ಸಕ್ರಿಯ ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 239, ಕೋವಿಡ್ ಹೆಲ್ತ್‍ಕೇರ್‍ನಲ್ಲಿ 63 ಕೋವಿಡ್ ಕೇರ್ ಸೆಂಟರ್‍ನಲ್ಲಿ 305 ಖಾಸಗಿ ಆಸ್ಪತ್ರೆಯಲ್ಲಿ 619, ಖಾಸಗಿ ಕೇರ್ ಸೆಂಟರ್‍ನಲ್ಲಿ 97 ಹಾಗೂ 3723 ಮಂದಿ ಹೋಂ ಐಸೋಲೇಷನ್‍ನಲ್ಲಿದ್ದಾರೆ.

ರಾಜ್ಯದ ವರದಿ: ರಾಜ್ಯದಲ್ಲಿ ಇಂದು 5872 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಒಟ್ಟು 7,82,773 ಮಂದಿಗೆ ಸೋಂಕು ತಗುಲಿದಂತಾಗಿದೆ. ಇಂದು ಗುಣಮುಖರಾದವರ ಸಂಖ್ಯೆಯೂ ಹೆಚ್ಚಾಗಿದ್ದು, 9289 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 6,71,618 ಮಂದಿ ಗುಣಮುಖರಾಗಿದ್ದು, 100440 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಇಂದು 88 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 10,696ಕ್ಕೇರಿದೆ.

ಬೆಂಗಳೂರಿನಲ್ಲಿ 2717, ಬಾಗಲಕೋಟೆ 114, ಬಳ್ಳಾರಿ 145, ಬೆಳಗಾವಿ 65, ಬೆಂಗಳೂರು ಗ್ರಾಮಾಂತರ 366, ಬೀದರ್ 14, ಚಾಮರಾಜನಗರ 33, ಚಿಕ್ಕಬಳ್ಳಾಪುರ 116, ಚಿಕ್ಕಮಗ ಳೂರು 73, ಚಿತ್ರದುರ್ಗ 74, ದಕ್ಷಿಣ ಕನ್ನಡ 215, ದಾವರಣೆಗೆ 304, ಧಾರವಾಡ 134, ಗದಗ 40, ಹಾಸನ 140, ಹಾವೇರಿ 23, ಕಲಬುರಗಿ 83, ಕೊಡಗು 51 ಕೋಲಾರ 49 ಕೊಪ್ಪಳ 52, ಮಂಡ್ಯ 108, ಮೈಸೂರು 220, ರಾಯಚೂರು 33, ರಾಮನಗರ 23, ಶಿವಮೊಗ್ಗ 117, ಉತ್ತರ ಕನ್ನಡ 74, ಉಡುಪಿ 117, ತುಮಕೂರು 143, ವಿಜಯಪುರ 38, ಯಾದಗಿರಿಯಲ್ಲಿ 31 ಮಂದಿಗೆ ಇಂದು ಸೋಕು ದೃಢಪಟ್ಟಿದೆ.

 

 

Translate »