ರಾಜ್ಯದಲ್ಲಿ ಹೊಸದಾಗಿ 239 ಮಂದಿಗೆ ಕೊರೊನಾ
ಮೈಸೂರು

ರಾಜ್ಯದಲ್ಲಿ ಹೊಸದಾಗಿ 239 ಮಂದಿಗೆ ಕೊರೊನಾ

June 8, 2020

ಬೆಂಗಳೂರು, ಜೂ.7-ರಾಜ್ಯದಲ್ಲಿ ಇಂದು 239 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 5452ಕ್ಕೆ ಏರಿದೆ. ಬೆಂಗಳೂರಿನಲ್ಲಿ ಸೋಂಕಿನಿಂದ 61 ವರ್ಷದ ಮಹಿಳೆ ಮತ್ತು 57 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 61ಕ್ಕೆ ಏರಿದೆ. ಮಂಡ್ಯದಲ್ಲಿ ಭಾನುವಾರ ಒಂದು ಪ್ರಕರಣ ದಾಖಲಾಗಿದ್ದು, 42 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂ ದಿಗೆ 211 ಮಂದಿ ಗುಣಮುಖರಾಗಿದ್ದು, ಒಟ್ಟು 334 ಸೋಂಕಿತರ ಪೈಕಿ 123 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಹಾಸನದಲ್ಲಿ 5 ಪ್ರಕರಣ ದಾಖ ಲಾಗಿದ್ದು, ಸೋಂಕಿತರ ಸಂಖ್ಯೆ 208ಕ್ಕೆ ಏರಿದೆ. ಕಲಬುರಗಿ ಮತ್ತು ಯಾದಗಿರಿ ಯಲ್ಲಿ ತಲಾ 39, ಬೆಳಗಾವಿಯಲ್ಲಿ 38, ಬೆಂಗಳೂರಿನಲ್ಲಿ 23, ದಕ್ಷಿಣ ಕನ್ನಡ ಮತ್ತು ದಾವಣಗೆರೆಯಲ್ಲಿ ತಲಾ 17, ಶಿವಮೊಗ್ಗದಲ್ಲಿ 12, ವಿಜಯಪುರದಲ್ಲಿ 7, ಬಳ್ಳಾರಿಯಲ್ಲಿ 6, ಬೆಂಗಳೂರು ಗ್ರಾಮಾಂತರದಲ್ಲಿ 5, ಧಾರವಾಡದಲ್ಲಿ 3, ಗದಗ್ ಮತ್ತು ಉತ್ತರ ಕನ್ನಡದಲ್ಲಿ 2, ರಾಯಚೂರಿನಲ್ಲಿ ಒಂದು ಪ್ರಕರಣ ದೃಢಪಟ್ಟಿದೆ. ರಾಜ್ಯದ 5452 ಸೋಂಕಿತರ ಪೈಕಿ ಇಂದು 143 ಮಂದಿ ಸೇರಿದಂತೆ ಈವರೆಗೆ 2132 ಮಂದಿ ಗುಣಮುಖರಾಗಿದ್ದು, ಉಳಿದ 3257 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದ ಸೋಂಕಿತರ ಪೈಕಿ 183 ಮಂದಿ ಹೊರ ರಾಜ್ಯದವರಾದರೆ, 9 ಮಂದಿ ವಿದೇಶದಿಂದ ಬಂದವರು. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 23,087, ದ್ವಿತೀಯ ಸಂಪರ್ಕದ 18,063 ಮಂದಿ ಸೇರಿದಂತೆ 41,150 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. 10 ಮಂದಿಗೆ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

Translate »