ಅವಧಿ ಪೂರ್ವ ಚುನಾವಣೆ ಮುನ್ಸೂಚನೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೨೫ ಕೋಟಿ ಬಿಡುಗಡೆ
ಮೈಸೂರು

ಅವಧಿ ಪೂರ್ವ ಚುನಾವಣೆ ಮುನ್ಸೂಚನೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೨೫ ಕೋಟಿ ಬಿಡುಗಡೆ

May 18, 2022

ಬೆಂಗಳೂರು ಮೇ ೧೭ (ಕೆಎಂಶಿ)-ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ತಲಾ ೨೫ ಕೋಟಿ ರೂ. ಗಳನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಬಜೆಟ್‌ನಲ್ಲಿ ನೀಡಿದ ಭರ ವಸೆಗಳ ಪೈಕಿ ೧೬೭ ಭರ ವಸೆಗಳ ಕಾರ್ಯಾದೇಶವನ್ನು ಹೊರಡಿಸಲಾಗಿದ್ದು ಅದೇ ಕಾಲಕ್ಕೆ ತಮ್ಮ ವಿವೇಚನೆಯಡಿ ಶಾಸಕರ ಕ್ಷೇತ್ರಗಳಿಗೆ ತಲಾ ೨೫ ಕೋಟಿ ಬಿಡುಗಡೆ ಮಾಡುತ್ತಿದ್ದಾರೆ. ಈ ಮಧ್ಯೆ ಪತ್ರಿಕಾ ಸಂಪಾದಕರಿಗೆ ಮಧ್ಯಾಹ್ನ ಔತಣಕೂಟ ಏರ್ಪಡಿ ಸಿದ್ದ ಮುಖ್ಯಮಂತ್ರಿಯವರು ಸಂಜೆ ತುರ್ತಾಗಿ ಕಾರ್ಯದರ್ಶಿಗಳ ಸಭೆ ನಡೆಸಿದರು.

ತಾವು ಮುಂಗಡ ಪತ್ರದಲ್ಲಿ ಪ್ರಟಿಸಿದ ಯೋಜನೆಗಳನ್ನು ತಿಂಗಳಾAತ್ಯದೊಳಗೆ ಆದೇಶ ಹೊರಡಿಸಿ, ಅನುಷ್ಠಾನಗೊಳಿಸಬೇಕೆಂದು ಸೂಚಿಸಿದರು. ಇದೇ ೨೨ರಿಂದ ೨೮ರವರೆಗೆ ದಾವೋಸ್‌ನಲ್ಲಿ ನಡೆಯುವ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸುತ್ತಿ ದ್ದಾರೆ. ಇದರ ನಡುವೆ ತರಾತುರಿಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ರಾಜಕೀಯ ವಲಯ ದಲ್ಲಿ ಆಶ್ಚರ್ಯ ಮೂಡಿಸಿದೆ. ಆಡಳಿತ ಪಕ್ಷದ ಶಾಸಕರು ನೀಡಿರುವ ಶಿಫಾರಸ್ಸು ಗಳನ್ನು ಕಾನೂನಾತ್ಮಕವಾಗಿ ತಕ್ಷಣವೇ ಮಾನ್ಯ ಮಾಡು ವಂತೆಯೂ ಅಧಿಕಾರಿಗಳಿಗೆ ಸಲಹೆ ಮಾಡಿರುವ ಸಿಎಂ, ಎಲ್ಲಾ ಸದಸ್ಯರ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.ಹೀಗೆ ಶಾಸಕರ ಕ್ಷೇತ್ರಗಳಿಗೆ ತಲಾ ೨೫ ಕೋಟಿ ರೂಪಾಯಿ ವಿವೇಚನಾ ನಿಧಿ ಒದಗಿಸುವ ಮತ್ತು ಬಜೆಟ್ ಭರವಸೆಗಳಿಗೆ ಸಂಬAಧಿಸಿದAತೆ ಕಾರ್ಯಾದೇಶ ಹೊರಡಿಸಿರುವುದರ ಹಿಂದೆ ಅವಧಿಪೂರ್ವ ಚುನಾವಣೆಯ ಸೂಚನೆ ಇದೆ ಎಂಬುದು ಉನ್ನತ ಮೂಲಗಳ ಅಭಿಪ್ರಾಯ. ಈ ವರ್ಷದ ನವೆಂಬರ್ ತಿಂಗಳಲ್ಲಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಅವುಗಳೊಂದಿಗೆ ಕರ್ನಾಟಕದ ವಿಧಾನಸಭಾ ಚುನಾವಣೆಗೆ ಹೋಗುವ ಲೆಕ್ಕಾಚಾರ ಬಿಜೆಪಿ ವರಿಷ್ಠರಿಗಿದೆ ಎಂಬುದು ಮೂಲಗಳ ಹೇಳಿಕೆ. ಮುಖ್ಯಮಂತ್ರಿಗಳ ಹೆಜ್ಜೆಯ ಹಿಂದೆ ತರಾತುರಿ ಇದೆ.ಆದರೆ ಈ ತರಾತುರಿ ಅವಧಿಪೂರ್ವ ಚುನಾವಣೆಯ ಲೆಕ್ಕಾಚಾರ ಕಾರಣವೋ ಅಥವಾ ರಾಜ ಕೀಯ ಪಲ್ಲಟಗಳ ಲೆಕ್ಕಾಚಾರ ಕಾರಣವೋ ಎಂಬ ಪ್ರಶ್ನೆ ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿದೆ. ಅವರ ಈ ಪ್ರಯತ್ನ ಕೂಡಾ ಅವಧಿಪೂರ್ವ ಚುನಾವಣೆಯ ಅನುಮಾನ ರಾಜಕೀಯ ವಲಯಗಳಲ್ಲಿ ದಟ್ಟವಾಗುವಂತೆ ಮಾಡುತ್ತಿದ್ದು ಸರ್ಕಾರದ ಕಾರ್ಯಸೂಚಿಗಳನ್ನು ಗಮನಿಸಿದರೆ ಇಂತಹ ಅನುಮಾನಗಳು ಹೆಚ್ಚಾಗುತ್ತಿವೆ.

ಬಜೆಟ್‌ನಲ್ಲಿ ನೀಡಿರುವ ಭರವಸೆಗಳಿಗೆ ಸಂಬA ಧಿಸಿದಂತೆ ೧೬೭ ಕಾರ್ಯಾದೇಶಗಳನ್ನು ಹೊರಡಿ ಸಿದ್ದು, ಉಳಿದಂತೆ ೨೫ ಭರವಸೆಗಳಿಗೆ ಸಂಬAಧಿ ಸಿದ ಕಾರ್ಯಾದೇಶಗಳನ್ನು ಇಷ್ಟೇ ದಿನದ ಗಡು ವಿನಲ್ಲಿ ಕಾರ್ಯಾದೇಶ ಹೊರಡಿಸಬೇಕೆಂದು ಅಧಿ ಕಾರಿಗಳಿಗೆ ಸಭೆಯಲ್ಲಿ ಕಟ್ಟಾದೇಶ ಮಾಡಿದ್ದಾರೆ. ಈ ಹಿಂದೆ ಯಾವ ಸರ್ಕಾರವೂ ತ್ವರಿತಗತಿಯಲ್ಲಿ ಆದೇಶಗಳನ್ನು ಮಾಡಿರಲಿಲ್ಲ. ಆದರೆ ಸಿಎಂ ಬೊಮ್ಮಾಯಿ ಅವರು ೩ ತಿಂಗಳ ಅವಧಿಯಲ್ಲಿ ಅನುಷ್ಠಾನಕ್ಕೆ ಸರ್ಕಾರಿ ಆದೇಶ ಹೊರಡಿಸಿದ್ದಾರೆ.

 

Translate »