ನಾಳೆ sslc ಫಲಿತಾಂಶ
ಮೈಸೂರು

ನಾಳೆ sslc ಫಲಿತಾಂಶ

May 18, 2022

ಬೆAಗಳೂರು, ಮೇ ೧೭- ಎಸ್‌ಎಸ್‌ಎಲ್‌ಸಿ ಫಲಿತಾಂಶ ಮೇ ೧೯ ರಂದು ಮಧ್ಯಾಹ್ನ ೧ ಗಂಟೆ ವೇಳೆಗೆ ಹೊರ ಬೀಳಲಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ೨೦೨೧-೨೨ನೇ ಶೈಕ್ಷಣ ಕ ಸಾಲಿನ ಫಲಿತಾಂಶವನ್ನು ಪ್ರಕಟ ಮಾಡಲಿದ್ದು, ಈಗಾಗಲೇ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಪ್ರತಿ ಸೆಕೆಂಡಿಗೆ ಇಬ್ಬರಿಗೆ
ಫಲಿತಾಂಶದ ವಿವರ ರವಾನೆಯಾಗಲಿದೆ. ಮೇ ೧೯ರ ಸಂಜೆ ವೇಳೆಗೆ ಫಲಿತಾಂಶದ ವಿವರಗಳು ವಿದ್ಯಾರ್ಥಿಗಳ ಮೊಬೈಲ್‌ಗಳಿಗೆ ತಲುಪಲಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಅಧಿಕೃತವಾಗಿ ಫಲಿತಾಂಶ ಪ್ರಕಟವಾದ ಕೂಡಲೇ ವೆಬ್‌ತಾಣದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಸರ್ಕಾರದ ಈ ಅಧಿಕೃತ ವೆಬ್ ತಾಣದಲ್ಲಿ ವಿದ್ಯಾರ್ಥಿಗಳ ಹಾಲ್ ಟಿಕೆಟ್ ನಂಬರ್ ಹಾಕಿದರೆ ಸಾಕು ವಿಷಯವಾರು ಫಲಿತಾಂಶ ಹಾಗೂ ಗಳಿಸಿದ ಒಟ್ಟು ಅಂಕದ ವಿವರ ಪ್ರಕಟವಾಗಲಿದೆ. ಒಂದೇ ಸಲ ವಿದ್ಯಾರ್ಥಿಗಳು ಫಲಿತಾಂಶದ ವಿವರ ನೋಡುವ ಕಾರಣಕ್ಕೆ ಕೆಲವೊಮ್ಮೆ ಫಲಿತಾಂಶ ತೋರಿಸದಿದ್ದರೂ, ವಿದ್ಯಾರ್ಥಿಗಳು ತಾಳ್ಮೆ ಕಳೆದುಕೊಳ್ಳಬಾರದು. ಮಿಗಿಲಾಗಿ ಮೇ ೨೦ ರಂದೇ ಫಲಿತಾಂಶದ ವಿವರಗಳು ಆಯಾ ಶಾಲೆಗಳಿಗೆ ರವಾನೆಯಾಗಲಿದೆ. ಕೋವಿಡ್ ನಡುವೆಯೂ ಕರ್ನಾಟಕದಲ್ಲಿ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ೮.೭೩ ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಮಾ. ೨೮ ರಿಂದ ಏ.೧೧ರವರೆಗೆ ಪರೀಕ್ಷೆ ನಡೆದಿತ್ತು. ಹದಿನೈದು ಸಾವಿರ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಫಲಿತಾಂಶದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಇನ್ನೆರಡು ದಿನದಲ್ಲಿ ಸಮಗ್ರ ವಿವರ ಲಭ್ಯವಾಗಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಸಾವಿರಾರು ಶಿಕ್ಷಕರು ಗೈರು ಹಾಜರಾಗಿದ್ದರು. ಈಗಾಗಿ ಫಲಿತಾಂಶ ಪ್ರಕಟದಲ್ಲಿ ಸ್ವಲ್ಪ ವಿಳಂಬವಾಗಿದೆ. ಮೌಲ್ಯಮಾಪನ ಪೂರ್ಣ ಮುಗಿಸಿದ್ದು, ಫಲಿತಾಂಶದ ವಿವರಗಳನ್ನು ಸಹ ಅಧಿಕೃತ ವೆಬ್ ತಾಣಕ್ಕೆ ಅಪ್ಲೋಡ್ ಮಾಡಲಾಗಿದೆ. ಇನ್ನು ಶಿಕ್ಷಣ ಸಚಿವರು ಅಧಿಕೃತವಾಗಿ ಕರ್ನಾಟಕ ರಾಜ್ಯದ ಫಲಿತಾಂಶ ಪ್ರಕಟಿಸಿದ ಕೂಡಲೇ ವೆಬ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶದಲ್ಲಿ ಯಾವುದೇ ತಾಂತ್ರಿಕ ದೋಷ ಕಾಣದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪರೀಕ್ಷಾ ಮಂಡಳಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

hಣಣಠಿs://ssಟಛಿ.ಞಚಿಡಿಟಿಚಿಣಚಿಞಚಿ.gov.iಟಿ/

hಣಣಠಿs://ಞಚಿಡಿಡಿesuಟಣs.ಟಿiಛಿ.iಟಿ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

Translate »