ನೋಟಿಸ್ ನೀಡದೆ ಗಿರವಿ ಇಟ್ಟ ಒಡವೆ ಹರಾಜು ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ
ಮೈಸೂರು

ನೋಟಿಸ್ ನೀಡದೆ ಗಿರವಿ ಇಟ್ಟ ಒಡವೆ ಹರಾಜು ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ

May 18, 2022

ಹೊಸ ಆಭರಣ ಮಾಡಿಸಿಕೊಡಲು ಒಪ್ಪಿದ ಬ್ಯಾಂಕ್, ಪ್ರತಿಭಟನೆ ವಾಪಸ್
ಮೈಸೂರು, ಮೇ ೧೭(ಎಂಟಿವೈ)- ಬ್ಯಾಂಕ್‌ನಿAದ ರೈತರೊಬ್ಬ ರಿಗೆ ವಂಚನೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಜನಸ್ಮಾಲ್ ಫೈನಾನ್ಸ್ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ ರೈತರು, ಇಲವಾಲ ಹೋಬ ಳಿಯ ಹೊಸಕೋಟೆ ಗ್ರಾಮದ ರೈತ ಪ್ರವೀಣ್ ಎಂಬುವರು ೭೫ ಗ್ರಾಂ ಚಿನ್ನವನ್ನು ಗಿರವಿ ಇಟ್ಟು ಸಾಲ ಪಡೆದಿದ್ದರು. ಆದರೆ, ಯಾವುದೇ ನೋಟಿಸ್ ನೀಡದೆ ೩ ತಿಂಗಳಿನಲ್ಲೇ ಹರಾಜು ಹಾಕ ಲಾಗಿದೆ. ಈ ಮೂಲಕ ರೈತನಿಗೆ ವಂಚಿಸಲಾಗಿದೆ ಎಂದು ಆರೋ ಪಿಸಿದರು. ಇದಕ್ಕೆ ಮಣ ದ ಬ್ಯಾಂಕ್ ಅಧಿಕಾರಿಗಳು, ಮೇ ೨೩ರಂದು ಹರಾಜು ಹಾಕಿರುವ ಬಂಗಾರದ ಬದಲಾಗಿ ಹೊಸ ದಾಗಿ ಅದೇ ವಿನ್ಯಾಸದ ಆಭರಣವನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ಸ್ಪಂದಿಸಿ ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪಿ.ಮರಂಕಯ್ಯ, ತಾಲೂಕು ಗೌರವ ಅಧ್ಯಕ್ಷ ನಾಗನಹಳ್ಳಿ ವಿಜಯೇಂದ್ರ, ತಾಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ, ಸಹಕಾರ್ಯದರ್ಶಿ ನಾಗನಹಳ್ಳಿ ಚಂದ್ರಶೇಖರ್, ಶಿವೇಗೌಡ, ಮಹೇಶ, ಬಸವರಾಜು, ಪ್ರವೀಣ್ ಇನ್ನಿತರರು ಪಾಲ್ಗೊಂಡಿದ್ದರು.

 

Translate »