ಈ ದಶಕದ ಅಂತ್ಯದ ವೇಳೆಗೆ ೬ಜಿ ಸೇವೆ ಆರಂಭ
ಮೈಸೂರು

ಈ ದಶಕದ ಅಂತ್ಯದ ವೇಳೆಗೆ ೬ಜಿ ಸೇವೆ ಆರಂಭ

May 18, 2022

ನವದೆಹಲಿ, ಮೇ ೧೭- ಭಾರತದಲ್ಲಿ ಟೆಲಿ ಡೆನ್ಸಿಟಿ ಮತ್ತು ಇಂಟರ್ನೆಟ್ ಬಳಕೆಯನ್ನು ವೇಗವಾಗಿ ವಿಸ್ತರಿಸಲಾಗುತ್ತಿದೆ. ೨೧ನೇ ಶತಮಾನದಲ್ಲಿ ಈ ಸಂಪರ್ಕವು ದೇಶದ ಪ್ರಗತಿ ಯನ್ನು ನಿರ್ಧರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಬೆಳ್ಳಿಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತ ನಾಡಿದ ಪ್ರಧಾನಿ ನರೇಂದ್ರ ಮೋದಿ, ೫ಜಿ ನಮ್ಮ ಆರ್ಥಿಕತೆಗೆ $೪೫೦ ಶತಕೋಟಿ ಕೊಡುಗೆ ನೀಡಲಿದೆ. ಇದು ಇಂಟರ್ನೆಟ್ ವೇಗವನ್ನು ಮಾತ್ರವಲ್ಲದೆ ಅಭಿವೃದ್ಧಿ ಯನ್ನೂ ಹೆಚ್ಚಿಸುತ್ತದೆ. ಈ ದಶಕದ ಅಂತ್ಯದ ವೇಳೆಗೆ, ನಾವು ೬ಉ ಸೇವೆಗಳನ್ನು ಪ್ರಾರಂಭಿ ಸಲು ಸಾಧ್ಯವಾಗುತ್ತದೆ ಮತ್ತು ನಮ್ಮ ಕಾರ್ಯಪಡೆಯು ಅದರ ಮೇಲೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ಹೇಳಿದರು. ೨ಜಿ ಯುಗವು ನೀತಿ ಪೀಡಿತ, ಭ್ರಷ್ಟಾಚಾರದ ಸಂಕೇತವಾಗಿದೆ. ರಾಷ್ಟçವು ಪಾರದರ್ಶಕವಾಗಿ ೪ಜಿ ಮತ್ತು ಈಗ ೫ಜಿಯತ್ತ ಸಾಗಿದೆ. ಭಾರತದಲ್ಲಿ ಈ ಮೊದಲು ಎರಡು ಇದ್ದ ಮೊಬೈಲ್ ಉತ್ಪಾದನಾ ಘಟಕಗಳು ಈಗ ೨೦೦ಕ್ಕೆ ವಿಸ್ತರಿಸಿದೆ. ಭಾರತ ಇಂದು ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾ ದನಾ ಕೇಂದ್ರವಾಗಿದೆ. ಭಾರತವು ಆರೋಗ್ಯ ಕರ ಸ್ಪರ್ಧೆಯನ್ನು ಪ್ರೋತ್ಸಾಹಿಸಿದೆ ಎಂದರು.

Translate »