ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ; ಎಸ್‌ಟಿ ಮೀಸಲಾತಿ ಹೆಚ್ಚಳದ ಮೂಲಕ ಮತದಾರರ ಒಲಿಸಿಕೊಳ್ಳಲು ಬಿಜೆಪಿ ಬೊಂಬಾಟ್ ಪ್ಲಾನ್!
ಮೈಸೂರು

ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ; ಎಸ್‌ಟಿ ಮೀಸಲಾತಿ ಹೆಚ್ಚಳದ ಮೂಲಕ ಮತದಾರರ ಒಲಿಸಿಕೊಳ್ಳಲು ಬಿಜೆಪಿ ಬೊಂಬಾಟ್ ಪ್ಲಾನ್!

May 17, 2022

ಬೆಂಗಳೂರು, ಮೇ ೧೬(ಕೆಎಂಶಿ)-ಮುAಬರುವ ವಿಧಾನ ಸಭಾ ಚುನಾವಣೆಗೂ ಮುನ್ನವೇ ಮೇಕೆದಾಟು, ಮಹ ದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ ಹಾಗೂ ಪರಿ ಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಿ ಮತದಾರರ ಮುಂದೆ ಹೋಗಲು ಆಡಳಿತಾರೂಢ ಬಿಜೆಪಿ ನಿರ್ಧರಿಸಿದೆ.

ಈ ಕಾರ್ಯಕ್ರಮಗಳಿಗೆ ಚುನಾವಣೆಗೂ ಮುನ್ನವೇ ಅನುಮತಿ ದೊರಕಿಸುವಂತೆ ರಾಜ್ಯ ಬಿಜೆಪಿ ಸರ್ಕಾರ ಮಾಡಿದ ಮನವಿಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.

ಈ ಮೂರೂ ನೀರಾವರಿ ಯೋಜನೆಗಳು ಒಂದಲ್ಲಾ ಒಂದು ಕಾನೂನಿನ ಸಂಘರ್ಷದಲ್ಲಿವೆ. ಸುಪ್ರೀಂಕೋರ್ಟ್ ನಲ್ಲಿ ರಾಜ್ಯದ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿ, ರಾಜ್ಯದ ಯೋಜನೆಗಳ ಕುರಿತಾಗಿ ವಿಚಾರಣೆ ಆರಂಭಿಸಿ, ಕರ್ನಾಟಕದ ಪರ ನ್ಯಾಯ ದೊರ ಕಿಸಿಕೊಳ್ಳುವ ಪ್ರಯತ್ನದಲ್ಲಿದೆ. ನ್ಯಾಯಾಲಯದ ತೀರ್ಪು ಹೊರಬರುತ್ತಿದ್ದಂತೆ ಯೋಜನೆಗಳಿಗೆ ಕೇಂದ್ರ ತನ್ನ ಅನುಮೋದನೆ ನೀಡಿ ರಾಜ್ಯ ಸರ್ಕಾರಕ್ಕೆ ಹಸಿರು ನಿಶಾನೆ ತೋರಿಸಲಿದೆ.

ಹಾಗೆಯೇ ಎಸ್‌ಟಿ ಸಮುದಾಯ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂದು ಬಹು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದೆ. ತಮಗಿ ರುವ ಶೇ.೩ರಷ್ಟು ಮೀಸಲಾತಿಯನ್ನು ಶೇ.೭.೫ಕ್ಕೆ ಹೆಚ್ಚಿಸ ಬೇಕೆಂದು ಬೇಡಿಕೆ ಇಟ್ಟು ಹೋರಾಟ ಮಾಡುತ್ತಿವೆ. ಚುನಾವಣೆಗೂ ಮುನ್ನವೇ ಇದಕ್ಕೂ ಕೇಂದ್ರ ಸರ್ಕಾರದ ಹಸಿರು ನಿಶಾನೆ ನೀಡಿ ಈ ಮತ ದಾರರನ್ನು ತಮ್ಮ ಪಕ್ಷದತ್ತ ಸೆಳೆದುಕೊಳ್ಳಲು ಬಿಜೆಪಿ ಮುಂದಾಗಿದೆ. ಆ ಮೂಲಕ ಹಳೆ ಮೈಸೂರು, ಮುಂಬೈ-ಕರ್ನಾಟಕ ಮತ್ತು ಹೈದ್ರಾ ಬಾದ್-ಕರ್ನಾಟಕದಲ್ಲಿ ಗಣನೀಯ ಸಂಖ್ಯೆಯ ಸೀಟುಗಳನ್ನು ಗೆಲ್ಲಲು ಬಯಸಿದೆ. ಬಿಜೆಪಿ ಉನ್ನತ ಮೂಲಗಳು ಈ ವಿಷಯ ತಿಳಿಸಿದ್ದು, ಮೇಕೆದಾಟು ಯೋಜನೆಗೆ ತಮಿಳುನಾಡು ಎಷ್ಟೇ ವಿರೋಧ ಮಾಡಿದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋದಾಗ ಲೆಲ್ಲ ಕಾನೂನು ತಜ್ಞರ ಜತೆ ಮಾತುಕತೆ
ನಡೆಸುವುದಲ್ಲದೆ, ಕಾವೇರಿ ನ್ಯಾಯಮಂಡಳಿ ಮುಂದೆ ರಾಜ್ಯದ ವಾದ ಮಂಡನೆಯಾಗು ವಂತೆ ನೋಡಿಕೊಳ್ಳುತ್ತಿದ್ದಾರೆ. ಮೇಕೆದಾಟು ಯೋಜನೆ ವಿದ್ಯುತ್ ಉತ್ಪಾದನೆಗೆ ಬಳಕೆಯಾಗಲಿದ್ದು, ವಿದ್ಯುತ್ ಉತ್ಪಾದನೆಯ ನಂತರ ಆಣೆಕಟ್ಟೆಯಲ್ಲಿ ಸಂಗ್ರಹವಾದ ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವುದರಲ್ಲಿ ಯಾವ ಹುರುಳೂ ಇಲ್ಲ, ಕೇವಲ ರಾಜಕೀಯ ಲಾಭದ ದೃಷ್ಟಿ ಯಿಂದ ಅದು ಕರ್ನಾಟಕದ ಹೆಜ್ಜೆಗೆ ತಕರಾರು ಮಾಡುತ್ತಿದೆ ಎಂದು ಕಾವೇರಿ ನ್ಯಾಯಮಂಡಳಿಗೆ ಮೇಲಿಂದ ಮೇಲೆ ವಿವರಿಸುವ ಕೆಲಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡುತ್ತಿದ್ದಾರೆ. ತಮ್ಮ ವಾದವನ್ನು ರಾಜ್ಯದ ಪರ ಕಾನೂನು ತಜ್ಞರಿಂದ ಕಾವೇರಿ ನ್ಯಾಯಮಂಡಳಿಯ ಮುಂದೆ ಮಂಡನೆ ಮಾಡಿಸುತ್ತಿರುವ ಬಸವರಾಜ ಬೊಮ್ಮಾಯಿ ಇತ್ತೀಚಿನ ದಿನಗಳಲ್ಲೇ ಮೂರು ಬಾರಿ ದೆಹಲಿಗೆ ಹೋಗಿ ಈ ಕೆಲಸವಾಗುವಂತೆ ನೋಡಿಕೊಂಡಿದ್ದಾರೆ.

ಮೇಕೆದಾಟು ಯೋಜನೆಗೆ ಹಸಿರು ನಿಶಾನೆ ಪಡೆದರೆ ಹಳೆ ಮೈಸೂರು ಭಾಗದಲ್ಲಿ ಪ್ರಬಲ ವಾಗುವ ಪ್ರತಿಪಕ್ಷ ಕಾಂಗ್ರೆಸ್ ಬಯಕೆಗೆ ತಣ ್ಣÃರು ಎರಚಿದಂತಾಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರ. ಇದೇ ರೀತಿ ಕರ್ನಾಟಕ-ಗೋವಾ-ಮಹಾರಾಷ್ಟç ರಾಜ್ಯಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿರುವ ಮಹದಾಯಿ ಯೋಜನೆಗೆ ಸಂಬAಧಿ ಸಿದಂತೆ ಸೋಮವಾರ ಕೂಡಾ ಕಾನೂನು ತಜ್ಞರೊಂದಿಗೆ ಸಭೆ ನಡೆಸಿದ ಬಸವರಾಜ ಬೊಮ್ಮಾಯಿ, ಈಗಿನ ಕಾನೂನು ತೊಡಕುಗಳನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಕಾನೂನು ತಜ್ಞರಿಗೆ ಹೇಳಿದ್ದಾರೆ.

ಮಹದಾಯಿ ಯೋಜನೆಗೆ ಸಹಜವಾಗಿ ಗೋವಾ ರಾಜ್ಯ ಅಡ್ಡಗಾಲು ಹಾಕುತ್ತಿದ್ದು ಕಾನೂನಿನ ಅಂಶಗಳು ರಾಜ್ಯದ ಪರವಾಗಿವೆ ಎಂಬ ಅಂಶ ಬಸವರಾಜ ಬೊಮ್ಮಾಯಿ ಅವರಿಗೆ ಉತ್ಸಾಹ ತುಂಬಿದೆ. ಉಳಿದಂತೆ ನೆರೆಯ ಮಹಾರಾಷ್ಟç ಕೂಡಾ ತುಂಬಾ ಅಡಚಣೆ ಮಾಡುವ ಸ್ಥಿತಿಯಲ್ಲಿಲ್ಲ ಎಂಬುದು ಅವರ ಯೋಚನೆ. ಮಹದಾಯಿ ಯೋಜನೆಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಿ ಯೋಜನೆಯನ್ನು ಅನುಷ್ಟಾನಗೊಳಿಸಲು ಅವರು ಹರಸಾಹಸ ಮಾಡುತ್ತಿದ್ದಾರೆ. ಮಹದಾಯಿ ವಿವಾದ ಬಗೆಹರಿದು ಯೋಜನೆ ಕಾರ್ಯಗತಗೊಂಡರೆ ಮುಂಬೈ-ಕರ್ನಾಟಕ ಭಾಗದ ಮತದಾರರ ಮೇಲೆ ಪ್ರಭಾವ ಬೀರಬಹುದು ಎಂಬುದು ಅವರ ಯೋಚನೆ.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬAಧಿಸಿದ ತೊಡಕುಗಳನ್ನು ನಿವಾರಿಸಿಕೊಂಡು ಕೇಂದ್ರ ಸರ್ಕಾರದ ಹಣಕಾಸು ನೆರವಿನೊಂದಿಗೆ ಭೂಸ್ವಾಧೀನ ಕಾರ್ಯ ಪೂರ್ಣಗೊಳಿಸುವುದು ಅವರ ಸದ್ಯದ ಲೆಕ್ಕಾಚಾರ. ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಇರುವ ತೊಡಕುಗಳನ್ನು ನಿವಾರಿಸಿ ಮುಂದಡಿ ಇಟ್ಟರೆ ಉತ್ತರ ಕರ್ನಾಟಕ ಭಾಗದ ಮತದಾರರ ಮುಂದೆ ಹೋಗುವುದು ಸುಲಭ ಎಂದವರು ಲೆಕ್ಕ ಹಾಕಿದ್ದಾರೆ.

Translate »