ಮೈಸೂರು, ಆ.5-ಮೈಸೂರಿನಲ್ಲಿ ಬುಧವಾರ 261 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 6,115ಕ್ಕೆ ಏರಿಕೆ ಯಾಗಿದ್ದು, ಈವರೆಗೆ ಒಟ್ಟು 194 ಮಂದಿ ಸೋಂಕಿ ನಿಂದ ಮೃತಪಟ್ಟಂತಾಗಿದೆ. ಇಂದು 112 ಮಂದಿ ಸೇರಿದಂತೆ ಒಟ್ಟು 2342 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟು 3579 ಸಕ್ರಿಯ ಸೋಂಕಿತರ ಪೈಕಿ 240 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 87 ಮಂದಿ ಕೋವಿಡ್ ಹೆಲ್ತ್ ಕೇರ್‍ನಲ್ಲಿ, 776 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 201 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 2227 ಮಂದಿ ಹೋಂ ಐಸೋಲೇಷನ್ ಮತ್ತು 48 ಮಂದಿ ಖಾಸಗಿ ಕೇರ್ ಸೆಂಟರ್‍ನಲ್ಲಿ ಐಸೋಲೇಷನ್‍ನಲ್ಲಿದ್ದಾರೆ. ಇಂದು ಪತ್ತೆಯಾದ ಸೋಂಕಿತರು ವಾಸಿಸುತ್ತಿದ್ದ 59 ಪ್ರದೇಶಗಳನ್ನು ಕಂಟೇನ್ಮೆಂಟ್ ಜೋನ್ ಎಂದು ಜಿಲ್ಲಾಡಳಿತ ಘೋಷಿಸಿದೆ.
ರಾಜ್ಯದ ವರದಿ: ರಾಜ್ಯದಲ್ಲಿ ಇಂದು 5619 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,51,449ಕ್ಕೆ ಏರಿಕೆಯಾಗಿದೆ. ದಿನೇ ದಿನೆ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಇಂದು 5,407 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ. ಈವರೆಗೆ ಒಟ್ಟು 74,679 ಮಂದಿ ಗುಣಮುಖರಾ ದಂತಾಗಿದೆ. ಇಂದು 100 ಮಂದಿ ಸಾವನ್ನಪ್ಪಿದ್ದು, ಈವರೆಗೆ 2,804 ಮಂದಿ ಸೋಂಕಿನಿಂದ ಮೃತಪಟ್ಟಂತಾಗಿದೆ. ರಾಜ್ಯದಲ್ಲಿ 73,958 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದ ಸೋಂಕಿ ತರ ಪ್ರಥಮ ಸಂಪರ್ಕದ 1,50,732 ಮತ್ತು ದ್ವಿತೀಯ ಸಂಪರ್ಕದ 1,41,307 ಮಂದಿ ಸೇರಿದಂತೆ ಒಟ್ಟು 2,92,039 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಬೆಂಗಳೂರಿನಲ್ಲಿ 1848, ಬಳ್ಳಾರಿ 631, ಬೆಳಗಾವಿ 293, ದಾವಣ ಗೆರೆ 224, ಧಾರವಾಡ 199, ಕಲಬುರಗಿ 197, ಉಡುಪಿ 173, ಕೊಪ್ಪಳ 154, ದಕ್ಷಿಣ ಕನ್ನಡ ಮತ್ತು ಬಾಗಲಕೋಟೆ ತಲಾ 149, ಹಾಸನ 137, ಚಿಕ್ಕಬಳ್ಳಾಪುರ 129, ಉತ್ತರ ಕನ್ನಡ 125, ಮಂಡ್ಯ 123, ಬೆಂಗಳೂರು ಗ್ರಾಮಾಂತರ 110, ರಾಯ ಚೂರು 91, ಗದಗ 78, ಯಾದಗಿರಿ 76, ಹಾವೇರಿ 71, ವಿಜಯ ಪುರ 66, ಬೀದರ್ 52, ಕೋಲಾರ 49, ರಾಮನಗರ 45, ಚಾಮರಾಜನಗರ 38, ಶಿವಮೊಗ್ಗ 35, ತುಮಕೂರು 31, ಕೊಡಗು 25, ಚಿತ್ರದುರ್ಗದಲ್ಲಿ 24 ಪ್ರಕರಣ ಬುಧವಾರ ದಾಖಲಾಗಿದೆ.