ಉದ್ಯೋಗ ಕೌಶಲ್ಯ ತರಬೇತಿಗೆ 27,500 ಜನ ನೋಂದಣಿ
ಮೈಸೂರು

ಉದ್ಯೋಗ ಕೌಶಲ್ಯ ತರಬೇತಿಗೆ 27,500 ಜನ ನೋಂದಣಿ

January 11, 2022

ಮೈಸೂರು, ಜ.10 (ಆರ್‍ಕೆಬಿ)-ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಜನವರಿ 4ರಿಂದ 7ರವರೆಗೆ ನಡೆದ 4 ದಿನಗಳ ಉದ್ಯೋಗ ಮತ್ತು ಕೌಶಲ್ಯ ತರಬೇತಿ ಮೇಳದಲ್ಲಿ ಒಟ್ಟು 65,000ಕ್ಕೂ ಹೆಚ್ಚು ಮಂದಿ ಉದ್ಯೋಗಾಕಾಂಕ್ಷಿಗಳು ಭೇಟಿ ನೀಡಿದ್ದರು.

ಈ ಪೈಕಿ ಸುಮಾರು 27,500 (ಸ್ಥಳ ಗಳಲ್ಲಿ 15,000 ಮತ್ತು ಪಕ್ಷದ ಕಾರ್ಯ ಕರ್ತರ ಮೂಲಕ ಮನೆ ಮನೆಗೆ ಭೇಟಿ ನೀಡಿ 12,5000) ಉದ್ಯೋಗ ಕೌಶಲ್ಯ ತರಬೇತಿಗಾಗಿ ನೋಂದಾಯಿಸಿಕೊಂಡಿ ದ್ದಾರೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಹೋಟೆಲ್ ಸಿದ್ದಾರ್ಥದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ, ಕೈಗಾರಿಕೆ, ಕೌಶಲ್ಯಾಭಿ ವೃದ್ಧಿ, ಕಾರ್ಮಿಕ, ಸಹಕಾರ, ತೋಟಗಾರಿಕೆ, ಪ್ರವಾಸೋದ್ಯಮ ಮತ್ತು ಪಶು ಸಂಗೋ ಪನೆ, ನಗರಾಭಿವೃದ್ಧಿ, ಆರೋಗ್ಯ ಮತ್ತು ಕೇಂದ್ರ ಸರ್ಕಾರದ 5 ಯೋಜನೆಗಳನ್ನು ಒಟ್ಟುಗೂಡಿಸಿ ಆಯೋಜಿಸಲಾಗಿದ್ದ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನ ಹಾಗೂ 75ನೇ ಸ್ವಾತಂ ತ್ರ್ಯೋತ್ಸವದ ಅಂಗವಾಗಿ ಕಳೆದ ಸೆಪ್ಟಂ ಬರ್-ಅಕ್ಟೋಬರ್‍ನಲ್ಲಿ ಮೈಸೂರಲ್ಲಿ ಆಯೋಜಿಸಿದ್ದ 20 ದಿನಗಳ ‘ಮೋದಿ ಯುಗ್ ಉತ್ಸವ’ದಲ್ಲಿ 25,000ಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸಿದ್ದರು. 13 ವರ್ಷಕ್ಕಿಂತ ಮೇಲ್ಪಟ್ಟವರು, ಯುವಕರು ತಮ್ಮ ವೃತ್ತಿ ಅಥವಾ ವೃತ್ತಿಯಲ್ಲಿ ತರಬೇತಿ ಪಡೆಯಲು ತಮ್ಮ ಆಯ್ಕೆಯ ವೃತ್ತಿಯನ್ನು ನೋಂದಾಯಿಸಲು ಅಪಾರ ಆಸಕ್ತಿ ತೋರಿಸಿದ್ದರಿಂದ ಉತ್ಸವ ಯಶಸ್ವಿ ಯಾಗಿದೆ ಎಂದು ಹೇಳಿದರು.

4 ದಿನಗಳ ಉದ್ಯೋಗ ಮೇಳದಲ್ಲಿ 15ರಿಂದ 18 ವರ್ಷ ವಯಸ್ಸಿನ ಸುಮಾರು 15,000 ಶಾಲಾ ಮಕ್ಕಳಿಗೆ ಲಸಿಕೆ ಹಾಕ ಲಾಗಿದೆ. ಕೃಷ್ಣರಾಜ ಕ್ಷೇತ್ರವು 15ರಿಂದ 18 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕುವಲ್ಲಿ ಶೇ.98ರಷ್ಟು ಸಾಧನೆ ಮಾಡಿದೆ ಎಂದು ರಾಮದಾಸ್ ತಿಳಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ತಾವು ಇಲ್ಲಿಯವರೆಗೆ ನಡೆಸಿದ ಎಲ್ಲಾ ಮೇಳಗಳ ಬಗ್ಗೆ ವಿವರಿಸುವ 25 ಪುಟಗಳ ಕಿರು ಪುಸ್ತಕವನ್ನು ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಜ.12ರಂದು ನೀಡಲಾಗುವುದು. ಕೇಂದ್ರ ಸರ್ಕಾರದ 182 ಯೋಜನೆಗಳನ್ನು ಹೆಚ್ಚು ಪರಿಣಾಮ ಕಾರಿ ಹಾಗೂ ವ್ಯಾಪಕ ಅನುಷ್ಠಾನಕ್ಕಾಗಿ ಕೆಲವು ಬದಲಾವಣೆಗಳನ್ನು ಮಾಡುವ ಕುರಿತು ನನ್ನ ಅನುಭವದ ಆಧಾರದ ಮೇಲೆ ಸಲಹೆಗಳನ್ನು ಒಳಗೊಂಡಿರುವ ಮತ್ತೊಂದು ಪುಸ್ತಕವನ್ನು ಸಿಎಂ ಅವರಿಗೆ ನೀಡಲಾಗುವುದು. ಅಲ್ಲದೆ, ಜ.12ರಂದು ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಮತ್ತು ಸಮಸ್ಯೆಗಳ ವಿವರ ಗಳನ್ನು ಒಳಗೊಂಡಿರುವ ಕೆ.ಆರ್.ಕ್ಷೇತ್ರದ ನಿರ್ದಿಷ್ಠ ವೆಬ್‍ಸೈಟ್‍ಗೂ ಮುಖ್ಯಮಂತ್ರಿ ಗಳು ಚಾಲನೆ ನೀಡುವರು ಎಂದರು. ಕೌಶಲ್ಯ ಮತ್ತು ಉದ್ಯೋಗ ಮೇಳದ ಯಶಸ್ಸನ್ನು ನೋಡಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಇದೇ ರೀತಿಯ ಮೇಳಗಳನ್ನು ಆಯೋ ಜಿಸಲು ಚಿಂತಿಸಲಾಗಿದೆ ಎಂದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ನಗರ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ನಗರ ಪ್ರಧಾನ ಕಾರ್ಯದರ್ಶಿ ವಾಣೀಶ್ ಕುಮಾರ್, ಕೆ.ಆರ್.ಕ್ಷೇತ್ರ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು ಇನ್ನಿತರರು ಸುದ್ದಿಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

Translate »