ಬೆಂಗಳೂರಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್‍ನ `ಆರ್ಟಿಸ್ಟ್ರಿ’ ಸ್ಟೋರ್ ಪ್ರಾರಂಭ
News

ಬೆಂಗಳೂರಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್‍ನ `ಆರ್ಟಿಸ್ಟ್ರಿ’ ಸ್ಟೋರ್ ಪ್ರಾರಂಭ

January 12, 2022

ಬೆಂಗಳೂರು, ಜ.11-ದೇಶದಲ್ಲೇ ಅತ್ಯಂತ ದೊಡ್ಡ ಚಿನ್ನ ಮತ್ತು ವಜ್ರದ ರೀಟೇಲ್ ಜಾಲ ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಜ.7ರಂದು ಬೆಂಗಳೂರಿನ ಎಂಜಿ ರಸ್ತೆಯಲ್ಲಿ `ಮಲಬಾರ್ ಗೋಲ್ಡ್ & ಡೈಮಂಡ್ಸ್ ಆರ್ಟಿಸ್ಟ್ರಿ ಸ್ಟೋರ್’ ಅನ್ನು ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಐಟಿ, ಜೈವಿಕ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹ್ಮದ್, ಜನವರಿ ತಿಂಗಳಲ್ಲಿ 22 ಹೊಸ ಸ್ಟೋರ್‍ಗಳನ್ನು ಆರಂ ಭಿಸುವ ಮೂಲಕ ನಾವು ಸಂಭ್ರಮದಿಂದ ಹೊಸ ವಷರ್Àವನ್ನು ಆಚರಿಸಿದ್ದೇವೆ. ಈ ಆರ್ಟಿಸ್ಟ್ರಿ ಸ್ಟೋರ್ ನಮ್ಮ ಬ್ರ್ಯಾಂಡ್‍ನಿಂದ ಒಂದು ಅನನ್ಯ ಕೊಡುಗೆಯಾಗಿದೆ. ಇದು ಬೆಂಗಳೂರಿನ ವಿವೇಚನಾಶೀಲ ಗ್ರಾಹಕರಿಗೆ ವರ್ಧಿತ ಶಾಪಿಂಗ್ ಅನುಭವ ಮತ್ತು ದೇಶಾ ದ್ಯಂತ ಕಲಾತ್ಮಕ ವಿನ್ಯಾಸಗಳ ಸಾಟಿಯಿಲ್ಲದ ಆಯ್ಕೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಗುಣಮಟ್ಟದಲ್ಲೂ ನಮ್ಮ 28 ವಷರ್Àಗಳ ಪರಂಪರೆಯನ್ನು ನಾವು ಮುಂದು ವರಿಸುವುದರಿಂದ ನಮ್ಮ ಗ್ರಾಹಕರಿಗೆ ನಮ್ಮ ಬದ್ಧತೆ ಮೇಲೆ ವಿಶ್ವಾಸ ಮೂಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಈ ಸ್ಟೋರ್‍ನಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್‍ನ 30,000ಕ್ಕೂ ಅಧಿಕ ವಿನ್ಯಾಸ ಗಳ ಆಭರಣಗಳನ್ನು ಗ್ರಾಹಕರಿಗೆ ಒದಗಿಸ ಲಾಗುತ್ತದೆ ಮತ್ತು ಬೆಂಗಳೂರು ನಗರದಲ್ಲಿ ವೈವಿಧ್ಯಮಯ ಮೆಟ್ರೋಪಾಲಿಟನ್ ಗ್ರಾಹಕ ರಿಗೆ ಅನನ್ಯವಾದ ಆಭರಣಗಳನ್ನು ವಿನ್ಯಾಸ ಮಾಡಲಾಗಿದೆ ಎಂದರು.
ದೇಶಾದ್ಯಂತ ಏಕರೂಪವಾದ ಚಿನ್ನದ ದರಗಳನ್ನು ನೀಡುವ `ಒನ್ ಇಂಡಿಯಾ ಒನ್ ಗೋಲ್ಡ್ ರೇಟ್’ ಜಾರಿಗೆ ತಂದಿ ದ್ದೇವೆ ಮತ್ತು ಆಭರಣಗಳಿಗೆ ಸಮಂಜಸ ವಾದ ಮೇಕಿಂಗ್ ಶುಲ್ಕಗಳನ್ನು ನಿಗದಿಪಡಿ ಸುವ ಮೇಲೆ ಕೇಂದ್ರೀಕರಿಸುವ ನ್ಯಾಯೋ ಚಿತ ಬೆಲೆಯ ಭರವಸೆಯಂತಹ ಬ್ರ್ಯಾಂಡ್‍ನ ವಿಶಿಷ್ಟÀ್ಟ ಕೊಡುಗೆಗಳನ್ನು ಗ್ರಾಹಕರಿಗೆ ನೀಡು ತ್ತಿದ್ದೇವೆ. ಈಗ ಗ್ರಾಹಕರು 4.9% ರಿಂದ ಮೇಕಿಂಗ್ ಶುಲ್ಕದಲ್ಲಿ ಆಭರಣಗಳನ್ನು ಖರೀದಿಸಬಹುದಾಗಿದೆ. ಈ ಎರಡೂ ಉಪಕ್ರಮಗಳು ಗ್ರಾಹಕರಿಗೆ ಹಣಕ್ಕೆ ಉತ್ತಮ ಮೌಲ್ಯವನ್ನು ಒದಗಿಸುವ ಗುರಿಯನ್ನು ಹೊಂದಿವೆ ಎಂದು ತಿಳಿಸಿದರು.

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ ಗ್ರಾಹಕರಿಗೆ ಸ್ಟೋನ್ ತೂಕ, ನಿವ್ವಳ ತೂಕ ಮತ್ತು ಆಭರಣದ ಸ್ಟೋನ್ ಶುಲ್ಕ ವನ್ನು ಸೂಚಿಸುವ ಪಾರದರ್ಶಕ ಬೆಲೆ, ಆಭ ರಣಗಳಿಗೆ ಜೀವಮಾನದ ನಿರ್ವಹಣೆ, ಹಳೆಯ ಚಿನ್ನಾಭರಣಗಳ ಮರು ಮಾರಾಟ ಮಾಡುವ ವೇಳೆ ಚಿನ್ನಕ್ಕೆ 100 ಪ್ರತಿಶತ ಮೌಲ್ಯ ಸೇರಿದಂತೆ 10 ಭರವಸೆಗಳನ್ನು ನೀಡುತ್ತದೆ. ಚಿನ್ನಾಭರಣಗಳ ವಿನಿಮಯದ ಮೇಲೆ ಶೂನ್ಯ ಕಡಿತ, ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸುವ 100 ಪ್ರತಿಶತ ಬಿಐಎಸ್ ಹಾಲ್‍ಮಾರ್ಕಿಂಗ್, ಐಜಿಐ ಮತ್ತು ಜಿಐಎ ಪ್ರಮಾಣೀಕೃತ ವಜ್ರಗಳು ಜಾಗತಿಕ ಮಾನದಂಡಗಳ 28 ಅಂಶಗಳ ಗುಣಮಟ್ಟದ ಪರಿಶೀಲನೆ, ಮರು ಖರೀದಿ ಖಾತರಿ, ಜವಾಬ್ದಾರಿಯುತವಾದ ಸೋರ್ಸಿಂಗ್ ಮತ್ತು ನ್ಯಾಯೋಚಿತವಾದ ಕಾರ್ಮಿಕ ಪದ್ಧತಿ ಗಳನ್ನು ಖಚಿತಪಡಿಸುತ್ತದೆ ಎಂದರು.

ಗ್ರೂಪ್‍ನ ಸಿಎಸ್‍ಆರ್ ಉಪಕ್ರಮದ ಭಾಗ ವಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಎಂಜಿ ರಸ್ತೆ ಸ್ಟೋರ್‍ನಲ್ಲಿ ಬರುವ ಲಾಭಾಂಶದಲ್ಲಿ 5%ರಷ್ಟ್ಟು ಹಣವನ್ನು ಜನೋಪಕಾರಿ ಕಾರ್ಯಗಳಿಗೆ ವಿನಿಯೋಗಿ ಸಲಿದೆ ಎಂದರು. ಈ ಸಂದರ್ಭದಲ್ಲಿ ಮಲ ಬಾರ್ ಗ್ರೂಪ್ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಸಲಾಂ, ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್, ಮಲಬಾರ್ ಗ್ರೂಪ್‍ನ ಓಆರ್ ಎಂಡಿ ಇಂಡಿಯಾ ಆಪರೇಷನ್ಸ್, ಶಾಮ ಲಾಲ್ ಅಹ್ಮದ್-ಎಂಡಿ ಇಂಟರ್‍ನ್ಯಾಷನಲ್ ಆಪರೇಷನ್ಸ್, ಮಲಬಾರ್ ಗ್ರೂಪ್‍ನ ಇತರೆ ನಿರ್ವಹಣಾ ಅಧಿಕಾರಿಗಳು ಉಪಸ್ಥಿತರಿದ್ದರು.

Translate »