ತ್ವರಿತವಾಗಿ ಜನರ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ
ಮೈಸೂರು

ತ್ವರಿತವಾಗಿ ಜನರ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ

January 12, 2022

ಮೈಸೂರು,ಜ.11(ಪಿಎಂ)- ಚಾಮುಂ ಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಜಯನಗರ 4ನೇ ಹಂತದ ವಿವಿಧ ಬಡಾ ವಣೆಗಳಲ್ಲಿ ಎದುರಾಗಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಮಾಜಿ ಸಚಿ ವರೂ ಆದ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೈಸೂರಿನ ವಿಜಯನಗರ 4ನೇ ಹಂತಕ್ಕೆ ಹೊಂದಿಕೊಂಡಿರುವ ಆರ್‍ಸಿಇ ಬಡಾವಣೆ, ಪೂರ್ವ ಪ್ರಥಮ್, ಮಾಯನ್ ಟ್ರಾಂಕ್ವಿಲ್ ಮತ್ತು ಸುಶೀಲಾಶಂಕರನಗರ ಬಡಾವಣೆ ಗಳಿಗೆ ಮಂಗಳವಾರ ಅಧಿಕಾರಿಗಳೊಂ ದಿಗೆ ಭೇಟಿ ನೀಡಿದ ಶಾಸಕರು, ಇಲ್ಲಿನ ನಿವಾಸಿಗಳ ಅಹವಾಲು ಆಲಿಸಿದರು.

ಇಲ್ಲಿನ ರಾಜಕಾಲುವೆಯಲ್ಲಿ ಹೂಳು ತುಂಬಿ ಕೊಂಡಿದೆ. ಜೊತೆಗೆ ಕಟ್ಟಡ ತ್ಯಾಜ್ಯಗಳನ್ನು ಸುರಿಯಲಾಗಿದೆ. ಇದರ ಪರಿಣಾಮ ರಾಜಕಾಲುವೆ ನೀರು ಬಡಾವಣೆಗಳಿಗೆ ನುಗ್ಗು ವಂತಾಗಿದೆ. ಇದರಿಂದ ಬಡಾವಣೆಗಳಲ್ಲಿ ನೀರು ನಿಂತು ನಿತ್ಯ ಸಮಸ್ಯೆ ಎದುರಿಸಬೇಕಾ ಗಿದೆ. ಈ ಸಮಸ್ಯೆ ಬಗೆಹರಿಸಬೇಕೆಂದು ನಿವಾಸಿಗಳು ಶಾಸಕರಲ್ಲಿ ಮನವಿ ಮಾಡಿದರು.

ನಿವಾಸಿಗಳ ಮನವಿಗೆ ಸ್ಪಂದಿಸಿದ ಶಾಸ ಕರು, ರಾಜಕಾಲುವೆಯ ಹೂಳೆತ್ತಿಸಿ, ಕಟ್ಟಡ ತ್ಯಾಜ್ಯ ತೆರವುಗೊಳಿಸಿ, ಬಡಾವಣೆಗಳಿಗೆ ನೀರು ನುಗ್ಗದಂತೆ ಕ್ರಮ ವಹಿಸಲು ಸ್ಥಳ ದಲ್ಲಿಯೇ ಹಾಜರಿದ್ದ ಮೈಸೂರು ಮಹಾ ನಗರ ಪಾಲಿಕೆ ಆಯುಕ್ತರೂ ಆದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಭಾರ ಆಯುಕ್ತ ಲಕ್ಷ್ಮೀಕಾಂತರೆಡ್ಡಿ ಅವರಿಗೆ ಸೂಚನೆ ನೀಡಿದರು. ಅಲ್ಲದೆ, ಸದರಿ ರಾಜಕಾಲುವೆ ಪಕ್ಕದ ರಸ್ತೆ ಅಭಿ ವೃದ್ಧಿಗೂ ಶೀಘ್ರವೇ ಕ್ರಮ ವಹಿಸಲು ಶಾಸಕರು ನಿರ್ದೇಶನ ನೀಡಿದರು.

ಜೊತೆಗೆ ರಾಜಕಾಲುವೆಗೆ ಒಳಚರಂಡಿ ನೀರು ಹರಿದುಬರುತ್ತಿದೆ ಎಂಬ ನಿವಾಸಿಗಳ ದೂರಿಗೆ ಸಂಬಂಧಿಸಿದಂತೆ ಸೂಕ್ತ ಕಾಮ ಗಾರಿ ಕೈಗೊಳ್ಳುವಂತೆಯೂ ಆಯುಕ್ತರಿಗೆ ಶಾಸಕರು ಸೂಚನೆ ನೀಡಿದರು. ಅಲ್ಲದೆ, ಇಲ್ಲಿನ ಪ್ರತಿ ಬಡಾವಣೆಗಳಿಂದ ಸಮರ್ಪಕ ರೀತಿಯಲ್ಲಿ ಕಸ ವಿಲೇವಾರಿಗೆ ಕ್ರಮ ವಹಿಸ ಬೇಕೆಂದು ಬೋಗಾದಿ ಪಟ್ಟಣ ಪಂಚಾ ಯಿತಿ ಮುಖ್ಯಾಧಿಕಾರಿ ವಿಜಯ್‍ಕುಮಾರ್‍ಗೆ ಶಾಸಕರು ಸೂಚಿಸಿದರು. ಜೊತೆಗೆ ಇಲ್ಲಿನ ನಿವಾಸಿಗಳ ಮನವಿ ಮೇರೆಗೆ ಬಡಾವಣೆ ಗಳ ಬೀದಿದೀಪಗಳ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೆಸ್ಕ್ ಮತ್ತು ಮುಡಾ ಅಧಿ ಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.

ನಂತರ ರಾಜಾಜಿನಗರ ಆಶ್ರಯ ಬಡಾ ವಣೆಗೆ ಭೇಟಿ ನೀಡಿದ ಶಾಸಕರು, ಇಲ್ಲಿನ ಒಳಚರಂಡಿ, ಚರಂಡಿ ದುರಸ್ತಿ, ರಸ್ತೆ ಅಭಿವೃದ್ಧಿ ಮತ್ತು ಕಬಿನಿ ಕುಡಿಯುವ ನೀರನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಅಲ್ಲದೆ, ಆಲ್ ಫೈನ್ ಬಡಾವಣೆಗೂ ಭೇಟಿ ನೀಡಿದ್ದ ಶಾಸ ಕರು, ಇಲ್ಲಿನ ನಿವಾಸಿಗಳ ಕುಂದು ಕೊರತೆ ಆಲಿಸಿದರಲ್ಲದೆ, ಪರಿಹರಿಸಲು ಕ್ರಮ ವಹಿಸು ವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಡಾ ಅಧೀಕ್ಷಕ ಅಭಿಯಂತರ ಶಂಕರ್, ಪಾಲಿಕೆ ಅಧೀಕ್ಷಕ ಅಭಿಯಂತರ ಮಹೇಶ್, ವಾಣಿ ವಿಲಾಸ ವಿಭಾಗದ ಕಾರ್ಯಪಾಲಕ ಅಭಿಯಂತರ ಸುವರ್ಣ, ಮುಡಾ ಕಾರ್ಯ ಪಾಲಕ ಅಭಿಯಂತರರಾದ ಸುನೀಲ್, ಮೋಹನ್, ಹೂಟಗಳ್ಳಿ ನಗರಸಭೆ ಆಯುಕ್ತ ನರಸಿಂಹಮೂರ್ತಿ, ಬೋಗಾದಿ ಪಪಂ ಮುಖ್ಯಾಧಿಕಾರಿ ವಿಜಯ್‍ಕುಮಾರ್, ಶ್ರೀರಾಮ ಪುರಂ ಪಪಂ ಮುಖ್ಯಾಧಿಕಾರಿ ಶ್ರೀಧರ್, ರಮ್ಮನ ಹಳ್ಳಿ ಪಪಂ ಮುಖ್ಯಾಧಿಕಾರಿ ಪುಷ್ಪಲತಾ, ಮೈಸೂರು ಪಾಲಿಕೆ ವಲಯ 3ರ ಆಯುಕ್ತ ಸತ್ಯಮೂರ್ತಿ ಇತರೆ ಅಧಿಕಾರಿಗಳು ಇದ್ದರು.

Translate »