ಈ ಬಾರಿಯ ಮೈಸೂರು ದಸರೆಗೆ 28.75 ಕೋಟಿ ಖರ್ಚು
ಮೈಸೂರು

ಈ ಬಾರಿಯ ಮೈಸೂರು ದಸರೆಗೆ 28.75 ಕೋಟಿ ಖರ್ಚು

November 3, 2022

ಮೈಸೂರು, ನ.2(ಆರ್‍ಕೆ)-2022ರ ಮೈಸೂರು ದಸರಾ ಮಹೋ ತ್ಸವಕ್ಕೆ 28,74,49,058 ರೂ. ಖರ್ಚಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಮಂಗಳವಾರ ಮೈಸೂರಿನ ಅರಮನೆ ಮಂಡಳಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ನಾಡಹಬ್ಬದ ಖರ್ಚು-ವೆಚ್ಚಗಳ ಬಾಬ್ತಿನ ಲೆಕ್ಕ ಪ್ರಕಟಿಸಿದ ಅವರು, ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ 10 ಕೋಟಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ 15 ಕೋಟಿ, ಪ್ರಾಯೋಜಕತ್ವದಿಂದ 32.5 ಲಕ್ಷ, ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ 76.39 ಲಕ್ಷ ಹಾಗೂ ಮೈಸೂರು ಅರಮನೆ ಮಂಡಳಿಯಿಂದ ಭರಿಸಲಾದ 5 ಕೋಟಿ ಸೇರಿ ದಸರಾ ಮಹೋತ್ಸವಕ್ಕೆ ಒಟ್ಟು 31,08,88,819 ಕೋಟಿ ರೂ. ಸ್ವೀಕೃತಿಯಾಗಿತ್ತು ಎಂದರು.

ಆ ಪೈಕಿ ವಿವಿಧ ದಸರಾ ಉಪ ಸಮಿತಿಗಳಿಂದ 26,54,49,058 ರೂ.ಗಳನ್ನು ಖರ್ಚು ಮಾಡಲಾಗಿದ್ದು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ 2,20,00,000 ರೂ. ಅನುದಾನ ಬಿಡುಗಡೆ ಮಾಡಲಾಗಿದೆ. 2022ರ ಅದ್ಧೂರಿ ದಸರಾ ಮಹೋತ್ಸವಕ್ಕೆ ಒಟ್ಟು 28,74,49,058 ರೂ. ಖರ್ಚಾಗಿದೆ ಎಂದು ವಿವರಿಸಿದರು.

ರಾಜವಂಶಸ್ಥರಿಗೆ 47.20 ಲಕ್ಷ ರೂ. ಗೌರವ ಧನ ನೀಡಲಾಗಿದ್ದು, ಇನ್ನು 1.26 ಕೋಟಿ ರೂ. ಉಳಿದಿದೆ. ಉಳಿದಂತೆ 21 ಉಪ ಸಮಿತಿ ಗಳು 26,54,49,058 ರೂ. ಅನುದಾನ ಖರ್ಚು ಮಾಡಿವೆ. ಸ್ವಾಗತ, ಆಮಂತ್ರಣ ಸಮಿತಿಗೆ 78,57,630 ರೂ., ಗಣ್ಯರು, ಕಲಾವಿದರ ಸ್ಥಳಾವಕಾಶ, ಸಾರಿಗೆ ವ್ಯವಸ್ಥೆಗೆ 3,77,25,604 ರೂ., ಮೆರವಣಿಗೆ ಉಪಸಮಿತಿಗೆ 2,22,75,198 ರೂ., ಪಂಜಿನ ಕವಾಯತು ಪ್ರದ ರ್ಶನಕ್ಕೆ 1,17,85,588 ರೂ., ಸ್ತಬ್ಧ ಚಿತ್ರಗಳಿಗೆ 29,88,497 ರೂ., ರೈತ ದಸರಾಗೆ 51,66,015 ರೂ., ಕ್ರೀಡಾ ಕೂಟಕ್ಕೆ 22,02,975 ರೂ., ಸಾಂಸ್ಕøತಿಕ ಕಾರ್ಯಕ್ರಮಗಳಿಗೆ 1,61,51,652 ರೂ., ಲಲಿತ ಕಲೆ ಮತ್ತು ಕರಕುಶಲ ಉಪ ಸಮಿತಿಗೆ 17,90,131 ರೂ., ಕವಿಗೋಷ್ಠಿಗೆ 41,69,623 ರೂ., ಯೋಗ ದಸರಾಗೆ 18,94,460 ರೂ., ಯುವ ಸಂಭ್ರಮ, ಯುವ ದಸರಾ ಕಾರ್ಯಕ್ರಮಗಳಿಗೆ 6,36,00,000 ರೂ., ಮಹಿಳಾ ಮತ್ತು ಮಕ್ಕಳ ದಸರೆಗೆ 31,07,364 ರೂ., ಸ್ವಚ್ಛತೆಗೆ 29,08,759 ರೂ., ಚಲನಚಿತ್ರ ಉಪ ಸಮಿತಿಗೆ 25,50,000 ರೂ., ಕುಸ್ತಿಗೆ 34,47,863 ರೂ., ಪ್ರಚಾರಕ್ಕೆ 7,40,699 ರೂ., ದಸರಾ ದರ್ಶನಕ್ಕೆ 18,50,000 ರೂ., ಅರಣ್ಯ ಇಲಾಖೆಗೆ 1,46,00,000 ರೂ., ರಂಗಾಯಣಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು.

ಅಲ್ಲದೆ ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಗಳಿಗಾಗಿ ಮುಡಾಗೆ 1,88,50,000 ರೂ., ಲೋಕೋಪಯೋಗಿ ಇಲಾಖೆಗೆ 1,86,87, 000 ರೂ. ಹಾಗೂ ಮೈಸೂರು ಮಹಾನಗರ ಪಾಲಿಕೆಗೆ 2,01,00, 000 ರೂ. ಹಣ ನೀಡಲಾಗಿದೆ ಎಂದು ಹೇಳಿದರು. ಮೇಯರ್ ಶಿವಕುಮಾರ್, ಸಂಸದ ಪ್ರತಾಪ್ ಸಿಂಹ, ವಸ್ತುಪ್ರದರ್ಶನ ಪ್ರಾಧಿ ಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೆಂದ್ರ, ನಗರ ಪೊಲೀಸ್ ಕಮೀಷ್ನರ್ ಡಾ. ಚಂದ್ರಗುಪ್ತ, ಎಸ್ಪಿ ಆರ್.ಚೇತನ್, ಜಿಪಂ ಸಿಇಓ ಬಿ.ಆರ್.ಪೂರ್ಣಿಮಾ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಅಡಿಷನಲ್ ಡಿಸಿ ಡಾ. ಬಿ.ಎಸ್.ಮಂಜುನಾಥಸ್ವಾಮಿ ಉಪವಿಭಾಗಾಧಿಕಾರಿ ಕಮಲಾಬಾಯಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Translate »