ಕಬ್ಬು ಬೆಳೆಗಾರರ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ; ಮೂರನೇ ದಿನವೂ ಮುಂದುವರಿಕೆ
ಮೈಸೂರು

ಕಬ್ಬು ಬೆಳೆಗಾರರ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ; ಮೂರನೇ ದಿನವೂ ಮುಂದುವರಿಕೆ

November 3, 2022

ಮೈಸೂರು, ನ.2 (ಪಿಎಂ)-ಕಬ್ಬಿಗೆ ಎಫ್‍ಆರ್‍ಪಿ ದರ ಹೆಚ್ಚಿಸಬೇಕು ಎಂಬುದೂ ಸೇರಿ ದಂತೆ ವಿವಿಧ ಬೇಡಿಕೆ ಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋ ರಾತ್ರಿ ಪ್ರತಿಭಟನಾ ಧರಣಿ ಮೂರನೇ ದಿನ ವಾದ ಬುಧವಾರವೂ ಮುಂದುವರೆಯಿತು.

ನಿನ್ನೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸುತ್ತಲು ಅರೆಬೆತ್ತಲೆ ಪ್ರತಿಭಟನಾ ಮೆರ ವಣಿಗೆ ನಡೆಸಿದ್ದ ಕಬ್ಬು ಬೆಳೆಗಾರರು, ಇಂದು ಪೊರಕೆ ಚಳವಳಿ ನಡೆಸಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರಿಗೆ ಭೇಟಿ ನೀಡಿಯೂ ರೈತರ ಸಮಸ್ಯೆ ಆಲಿಸುವ ಸೌಜನ್ಯವನ್ನೂ ತೋರದೇ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇ ರಿಸುವವರೆಗೂ ಯಾವುದೇ ಕಾರಣಕ್ಕೂ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿ ಸಿದರು. ಪ್ರತಿಭಟನೆ ಮುಂದುವರೆದಿದ್ದು, ಸಂಘದ ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗ ರಾಜ್, ಮುಖಂಡರಾದ ಚುಂಚರಾಯನ ಹುಂಡಿ ಮಂಜು, ಬಸವರಾಜು, ಮೂಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವ ಮೂರ್ತಿ, ನಾಗರಾಜ್, ಹಾಡ್ಯ ರವಿ, ಕೆರೆ ಹುಂಡಿ ರಾಜಣ್ಣ, ಕುರುಬೂರು ಸಿದ್ದೇಶ್, ನಂಜುಂಡಸ್ವಾಮಿ, ಪ್ರದೀಪ್ ಕುರು ಬೂರು, ಅಂಬಳೆ ಮಹದೇವಸ್ವಾಮಿ, ಮಂಜುನಾಥ್, ದೇವನೂರು ವಿಜಯೇಂದ್ರ, ಮಲಿಯೂರು ಪ್ರವೀಣ ಮತ್ತಿತರರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »