ಡಿ.6ಕ್ಕೆ, ಬೆಂಗಳೂರಲ್ಲಿ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ
ಮೈಸೂರು

ಡಿ.6ಕ್ಕೆ, ಬೆಂಗಳೂರಲ್ಲಿ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ

November 3, 2022

ಮೈಸೂರು, ನ.2 (ಎಂಟಿವೈ)- ಸಂವಿ ಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಬೆಂಗಳೂರಲ್ಲಿ ಡಿಸೆಂಬರ್ 6ರಂದು ದಲಿತರ ಸಾಂಸ್ಕøತಿಕ ಪ್ರತಿರೋಧ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾ ವೇಶ ಆಯೋಜಿಸಲಾಗಿದೆ ಎಂದು ದಸಂಸ ಮುಖಂಡ ಇಂಧೂದರ ಹೊನ್ನಾಪುರ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನದ ಅಂಗ ವಾಗಿ ಈ ಸಮಾವೇಶ ಆಯೋಜಿಸಲಾ ಗಿದೆ. ಸಾಂಸ್ಕøತಿಕ ಪ್ರತಿರೋಧÀವಾಗಿ ಸಮಾ ವೇಶ ನಡೆಯಲಿದೆ. ಜಾತ್ಯಾತೀತ ರಾಜ ಕಾರಣ ಮಾಡುವವರಿಗೆ ನಮ್ಮ ಬೆಂಬಲ ಘೋಷಿಸುವ ನಿಟ್ಟಿನಲ್ಲಿ ಈ ಸಮಾವೇಶ ದಲ್ಲಿ ಚರ್ಚಿಸಲಾಗುತ್ತದೆ. ಅಲ್ಲದೇ, 1970ರ ನಂತರ ವಿವಿಧ ಬಣಗಳಾಗಿರುವ ದಸಂಸ ಒಂದೇ ಉದ್ದೇಶದೊಂದಿಗೆ ಹೋರಾಟ ನಡೆಸುತ್ತ ಬಂದಿದೆ. ಈಗ ಅನಿವಾರ್ಯ ವಾಗಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹತ್ತು ಬಣಗಳು ಒಂದಾಗಿದ್ದು, ಮುಂದಿನ ದಿನ ಗಳಲ್ಲಿ ಉಳಿದ ಬಣಗಳನ್ನು ಒಗ್ಗೂಡಿಸಿ ಕೊಂಡು ಹೋರಾಟ ನಡೆಸುವ ಉದ್ದೇಶ ವಿದೆ ಎಂದು ಹೇಳಿದರು.

ಸಾವಿರಾರು ವರ್ಷಗಳಿಂದ ಭಾರತೀಯ ಸಮಾಜವನ್ನು ತುಳಿದು ಆಳಿದ ಬ್ರಾಹ್ಮಣ್ಯ ಮತ್ತೆ ತನ್ನ ಕರಾಳ ಹಿಡಿತ ಸಾಧಿಸುತ್ತಿದೆ. ಜನರನ್ನು ಜಾಗೃತಗೊಳಿಸಿ ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಅನಿವಾರ್ಯತೆ ಇದೆ. ಜನಪರ ಚಳವಳಿಗಳು ಮತ್ತು ಪ್ರಜಾಸತ್ತಾ ತ್ಮಕ ಶಕ್ತಿಗಳು ದುರ್ಬಲಗೊಂಡಂತೆ ಕಾಣಿಸುತ್ತಿದೆ ಎಂದು ತಿಳಿಸಿದರು.

ಮುಖಂಡ ಡಾ.ಡಿ.ಜಿ.ಸಾಗರ್ ಮಾತ ನಾಡಿ, ಬೆಂಗಳೂರಿನ ಸಮಾವೇಶದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದು, ಪ್ರತಿಯೊಬ್ಬ ದಲಿತರು ಇದರಲ್ಲಿ ಪಾಲ್ಗೊಳ್ಳ ಬೇಕು. ಭಾರತ ಹಸಿವಿನ ಸೂಚ್ಯಂಕದಲ್ಲಿ ಕೊನೆಯಲ್ಲಿದೆ. ಇದುವರೆಗೂ ಉದ್ಯೋಗ ಸೃಷ್ಟಿಗೆ ಅವಕಾಶ ನೀಡದೆ ಕಾಪೆರ್Çರೇಟ್ ಕಂಪನಿಗಳ ಪರವಾದ ನಿಲುವು ತಳೆದ ಸರ್ಕಾರ, ಈಗ ಏನು ಮಾಡುತ್ತಿದೆ ಎಂದು ಕಿಡಿಕಾರಿದರು.

ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು ಮಾತನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶೈಕ್ಷಣಿಕ ಹಕ್ಕನ್ನು ಕಸಿಯಲಾಗುತ್ತಿದೆ. ಎಸ್‍ಸಿಪಿ, ಟಿಎಸ್‍ಪಿ ಹಣ ಕಡಿತ ಮಾಡಲಾಗಿದೆ. ಇಡೀ ದೇಶವೇ ಮತಿಭÀ್ರಮಣೆಗೆ ಒಳಗಾದಂತೆ ವರ್ತಿ ಸುತ್ತಿದೆ. ರೈತರು, ಶೂದ್ರ ಸಮುದಾಯ ವನ್ನು ಒಳಗೊಂಡು ಐಕ್ಯತಾ ಸಮಾವೇಶ ಮಾಡಲಾಗುತ್ತಿದೆ ಎಂದು ತಿಳಿಸಿದರು.

ದಸಂಸ ಮುಖಂಡ ಎನ್.ವೆಂಕಟೇಶ್ ಮಾತನಾಡಿ, ಬಿಜೆಪಿ ಮತ್ತು ಸಂಘ ಪರಿ ವಾರ ನ್ಯಾಯಾಂಗ ಮತ್ತು ಸಂವಿಧಾನಾ ತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸಿವೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಗಳು ಚಳವಳಿಗಾರರು, ಸಮಾನತೆ, ಸಂವಿ ಧಾನದ ಪರವಾಗಿ ಹೋರಾಟಗಾರರ ವಿರುದ್ಧ ದಮನಕಾರಿ ನೀತಿ ಅನುಸರಿಸು ತ್ತಿದೆ ಎಂದು ಆರೋಪಿಸಿದರು.

ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ದೇಶದಲ್ಲಿ ಪಂಚಾಂಗವಲ್ಲ ರಾಜ್ಯಾಂಗ ಉಳಿಯಬೇಕು. ಅದಕ್ಕಾಗಿ ಬಣಗಳು ಒಂದಾಗಿ ಹೋರಾಟ ರೂಪಿಸಲಿದ್ದೇವೆ. ಅಭಿವೃದ್ಧಿ ಭÀ್ರಮೆಯನ್ನು ಸೃಷ್ಟಿಸಲಾಗಿದೆ. ಧರ್ಮದ ಹೆಸರಲ್ಲಿ ಜನರ ವಿಭÀಜನೆ ಮಾಡಲಾಗು ತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಲೆಮಾರಿ ಜನರು ಪ್ರತಿಭÀಟನೆ ನಡೆಸುತ್ತಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಗುರವಾಗಿ ಮಾತನಾಡಬಾರದು. ಪ್ರತಿಭಟನೆ ನಡೆಯು ತ್ತಿರುವ ವಿಚಾರವೇ ತಿಳಿದಿಲ್ಲ ಎಂದ ಸಚಿ ವರು ರಾಜೀನಾಮೆ ಕೊಡಬೇಕು. ಅಲೆ ಮಾರಿ ಜನರ ಹೋರಾಟಕ್ಕೆ ದಸಂಸ ಬೆಂಬಲ ಮುಂದುವರೆಸುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದಸಂಸ ವಿವಿಧ ಬಣ ಗಳ ಮುಖಂಡರಾದ ಅಣ್ಣಯ್ಯ, ಎನ್. ವೆಂಕಟೇಶ್, ವಿ.ನಾಗರಾಜ್, ಎನ್.ಮುನಿ ಸ್ವಾಮಿ, ಬೆಟ್ಟಯ್ಯಕೋಟೆ, ಆಲಗೂಡು ಶಿವಕುಮಾರ್ ಪಾಲ್ಗೊಂಡಿದ್ದರು.

ಪೂರ್ವಭಾವಿ ಸಭೆ: ಬೆಂಗಳೂರಲ್ಲಿ ನಡೆಯಲಿರುವ ಸಮಾವೇಶದ ಪೂರ್ವ ಭಾವಿಯಾಗಿ ದಸಂಸ ವಿವಿಧ ಬಣಗಳ ನಾಯಕರು ಮೈಸೂರಿನಲ್ಲಿ ಒಗ್ಗಟ್ಟು ಪ್ರದ ರ್ಶಿಸಿದರು. ಸಮಾವೇಶದ ಕರಪತ್ರ ಅನಾವರಣ ಮಾಡಿದರು.

ವಿಭಾಗೀಯ ಮಟ್ಟದ ಸಮಾವೇಶ ನಡೆಸಿ ಸಮಾವೇಶದ ಯಶಸ್ಸಿಗೆ ಕೋರಿ ದರು. ಅಲ್ಲದೇ ಎಲ್ಲಾ ಬಣಗಳ ಕಾರ್ಯ ಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಮಾ ವೇಶದಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿ ಸಬೇಕು ಎಂದು ಸಮಾಲೋಚಿಸಿದರು.

Translate »