ಬಂಡವಾಳ ಹೂಡಿಕೆಗೆ ಪೂರಕವಾಗಿ ಕಾನೂನುಗಳಲ್ಲಿ ಸಾಕಷ್ಟು ಮಾರ್ಪಾಡು
News

ಬಂಡವಾಳ ಹೂಡಿಕೆಗೆ ಪೂರಕವಾಗಿ ಕಾನೂನುಗಳಲ್ಲಿ ಸಾಕಷ್ಟು ಮಾರ್ಪಾಡು

November 3, 2022

ಬೆಂಗಳೂರು, ನ. 2(ಕೆಎಂಶಿ)-ರಾಷ್ಟ್ರದಲ್ಲಿ ಬಂಡವಾಳ ಹೂಡಿಕೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಾನೂನುಗಳನ್ನು ಸಡಿಲಗೊಳಿಸಲಾಗಿದೆ. ಇದನ್ನು ರಾಜ್ಯ ಸರ್ಕಾರಗಳು ಬಳಕೆ ಮಾಡಿಕೊಂಡು ನಿರುದ್ಯೋಗ ಸಮಸ್ಯೆ ಬಗೆಹರಿಸಿ, ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ವರ್ಚು ವಲ್ ಮಾದರಿಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಹೂಡಿಕೆದಾರರಿಗೆ ರೆಡ್ ಟೇಪಿಸಂನಿಂದ ವಿಮುಕ್ತಿ ನೀಡಿ ಮುಕ್ತ ಅವಕಾಶಗಳನ್ನು ಕಲ್ಪಿಸಲಾಗಿದೆ. ರಕ್ಷಣೆ, ಬಾಹ್ಯಾಕಾಶ, ಭೌಗೋಳಿಕ ನಕ್ಷೆ, ಡ್ರೋಣ್ ಸೇರಿ ದಂತೆ ಹಲವು ಕ್ಷೇತ್ರಗಳಲ್ಲಿ ಖಾಸಗಿ ಹೂಡಿಕೆಗಳಿಗೆ ಉತ್ತೇ ಜನ ನೀಡಲಾಗುತ್ತಿದೆ ಎಂದು ಹೇಳಿದರು. ವೆಲ್‍ಕಂ ಟು ನಮ್ಮ ಕರ್ನಾಟಕ, ವೆಲ್‍ಕಂ ಟು ನಮ್ಮ ಬೆಂಗಳೂರು ಎಂದು ಉದ್ಯಮಿಗಳಿಗೆ ಸ್ವಾಗತ ಕೋರಿದ ಪ್ರಧಾನಿಯ ವರು, ಕನ್ನಡಿಗರು ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡಿ ದ್ದಾರೆ. ಕರ್ನಾಟಕದ ಪ್ರಕೃತಿ, ತಂತ್ರಜ್ಞಾನ, ಉದ್ಯಮ ಅತ್ಯುತ್ತಮ ಬ್ರ್ಯಾಂಡ್ ಬೆಂಗಳೂರಿಗೆ ಜಾಗತಿಕವಾಗಿ ಆದ್ಯತೆ, ಪರಿಗಣನೆ ಇದೆ. ಕರ್ನಾಟಕದ ಸಂಸ್ಕೃತಿ ಉನ್ನತ ಮಟ್ಟದ್ದು, ಕನ್ನಡಿಗರ ಸ್ವಾಭಿಮಾನ ದೊಡ್ಡದು ಎಂದು ವಿಶ್ಲೇಷಿಸಿದರು. ಭಾರತದ ಪ್ರಗತಿಯಾಗಲು ರಾಜ್ಯಗಳು ಮೊದಲು ಪ್ರಗತಿ ಹೊಂದ ಬೇಕಿದೆ. ಜಗತ್ತಿನ ದೊಡ್ಡ ದೊಡ್ಡ ಕಂಪೆನಿಗಳು ಈ ಸಮಾವೇಶ ದಲ್ಲಿ ಪಾಲ್ಗೊಂಡಿವೆ. ಸಮಾವೇಶದಿಂದ ಉದ್ಯೋಗ ಸೃಷ್ಟಿಯಾಗ ಲಿದೆ, ಸಾವಿರಾರು ಕೋಟಿ ಹೂಡಿಕೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಂಡವಾಳ ಹೂಡಿಕೆದಾರರಿಗೆ ಕಠಿಣ ನಿಯಮಗಳನ್ನೊಡ್ಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದ ಅವರು, ಕೋವಿಡ್ ನಂತರದ ದಿನಗಳಲ್ಲಿ ಮತ್ತೆ ರಾಷ್ಟ್ರದಲ್ಲಿ ಆರ್ಥಿಕ ಚೇತರಿಕೆ ಕಂಡಿದೆ. ಇಂತಹ ಸನ್ನಿವೇಶದಲ್ಲಿ ನಾವು ನಮ್ಮ ಸ್ವಂತ ಬಲದ ಮೇಲೆ ನಿಲ್ಲಲು ಉದ್ಯಮಿದಾರರಿಗೆ ರೆಡ್‍ಕಾರ್ಪೆಟ್ ಹಾಸಿ ಎಂದಿದ್ದಾರೆ. ಸರ್ವಕಾಲಿಕ ಜಾಗತಿಕ ಸಂಕಷ್ಟಗಳ ನಡುವೆ ಭಾರತ ಪ್ರಕಾಶಮಾನ ಸ್ಥಳವಾಗಿ ಗುರುತಿಸಿ ಕೊಂಡಿತ್ತು. ಆರ್ಥಿಕತೆ ಮತ್ತು ರಪ್ತು ವಲಯದಲ್ಲಿ ಭಾರತದ ವಿಶೇಷ ಸ್ಥಾನಮಾನವನ್ನು ಕಾಯ್ದುಕೊಂಡಿದೆ. ನಮ್ಮ ಮೂಲಭೂತ ಆರ್ಥಿಕತೆಯ ಬಲವರ್ಧನೆಗೆ ಶ್ರಮರಹಿತ ಕೆಲಸಗಳನ್ನು ನಾವು ಮುಂದುವರೆಸಿದೆವು. ಇಡೀ ವಿಶ್ವದಲ್ಲೇ ಭಾರತ ಮುಕ್ತ ವಹಿವಾಟು ಮತ್ತು ವ್ಯಾಪಾರಗಳು ತನ್ನ ಹೆಗ್ಗುರುತ್ತನ್ನು ಮೂಡಿಸಿವೆ ಎಂದು ಹೇಳಿದರು.

ದೇಶದಲ್ಲಿ ತಂತ್ರಜ್ಞಾನ ಮತ್ತು ಸಂಪ್ರದಾಯಗಳ ಸಮ್ಮಿಳಿತವಿದೆ. ನಿಸರ್ಗ ಮತ್ತು ಸಂಸ್ಕೃತಿಯ ಒಗ್ಗೂಡಿಕೆಯಂತಹ ಅಪರೂಪದ ವೈವಿದ್ಯಮ ಸ್ಥಳ ಭಾರತ. ನಾವು ತಂತ್ರಜ್ಞಾನ ಮತ್ತು ಪ್ರತಿಭೆಯ ಬಗ್ಗೆ ಮಾತನಾಡುವುದಾದರೆ ಮೊದಲು ನಮಗೆ ಕಾಣಸಿಗುವುದು ಬ್ರಾಂಡ್ ಬೆಂಗಳೂರು ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್ ಪರಿಣಾಮದಿಂದ ಈಗಲೂ ಜಗತ್ತು ಹೊಯ್ದಾಡುತ್ತಿದೆ. ಎಲ್ಲೆಲ್ಲೂ ಅನಿಶ್ಚಿತತೆ ಇದೆ. ಭಾರತದಲ್ಲೂ ಕೋವಿಡ್ ಪರಿಣಾಮ ಇದೆ. ಜಗತ್ತು ಭಾರತದದಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಭಾರತದ ಆರ್ಥಿಕತೆಯ ಅಡಿಪಾಯ ಭದ್ರವಾಗಿದೆ ಎಂದು ಸಮರ್ಥಿಸಿಕೊಂಡರು. ಉತ್ಪಾದನೆ, ಪೂರೈಕೆಯಲ್ಲಿ ದೇಶ ಭರವಸೆದಾಯಕವಾಗಿದೆ. ಇವತ್ತು ನಾವು ಯಾವ ಸ್ಥಾನದಲ್ಲಿದ್ದೇವೆ, ನಮ್ಮ ಪ್ರಯಾಣ ಎಲ್ಲಿಂದ ಶುರುವಾಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು. ಸ್ಥಳೀಯ ಕಾನೂನುಗಳನ್ನು ಉದ್ಯಮ ಸ್ನೇಹಿಯನ್ನಾಗಿ ಮಾರ್ಪಡಿಸಬೇಕು ಎಂದು ಸಲಹೆ ನೀಡಿದರು. ನವ ಭಾರತದ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ. ಬ್ಯಾಂಕಿಂಗ್ ಸೇರಿ ಹಲವು ವಲಯಗಳಲ್ಲಿ ಸುಧಾರಣೆಯಾ ಗುತ್ತಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಕರೆನ್ಸಿ ತರಲಾಗುತ್ತಿದೆ ಎಂದು ಹೇಳಿದರು.

ಹಳೆಯ ಹಲವು ಕಾನೂನುಗಳನ್ನು ರದ್ದು ಮಾಡಲಾಗಿದೆ. ಕಾರ್ಪೊರೇಟ್ ತೆರಿಗೆ ಇಳಿಸಿದ್ದೇವೆ. ವಿದೇಶಿ ಹೂಡಿಕೆಗೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ. ಭಾರತದ ಅಭಿವೃದ್ಧಿಯ ವೇಗ ಮೊದಲಿಗಿಂತಲೂ ತೀವ್ರಗೊಂಡಿದೆ. ಭಾರತದ ಯುವ ಸಮೂಹದ ಪ್ರತಿಭೆ ನೋಡಿ ಜಗತ್ತೇ ಅಚ್ಚರಿ ಪಟ್ಟಿದೆ. ಎಂಟು ವರ್ಷಗಳಲ್ಲಿ 80 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‍ಗಳ ಸ್ಥಾಪನೆಯಾಗಿವೆ. ನವೋದ್ಯಮಗಳು ವೇಗವಾಗಿ ಅಭಿವೃದ್ಧಿಯಾಗುತ್ತಿವೆ. ಕೃಷಿ ವಲಯದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದೆ ಎಂದರು.

ತಂತ್ರಜ್ಞಾನ ಮತ್ತು ಮ್ಯಾನೇಜ್‍ಮೆಂಟ್ ವಿವಿಗಳ ಸಂಖ್ಯೆ ಹೆಚ್ಚಿಸಲಾಗಿದೆ. ನಮ್ಮ ಉದ್ದೇಶ ಆರ್ಥಿಕತೆ ಮತ್ತು ಉತ್ಪಾದನೆ ಹೆಚ್ಚಿಸುವುದು, ಮಾನವ ಸಂಪನ್ಮೂಲದ ಸದ್ಬಳಕೆ ಮಾಡಿಕೊಳ್ಳುವುದಾಗಿದೆ. ನಮ್ಮ ದೇಶ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳ ನಿರ್ಮಾಣ ಮತ್ತು ಸೇವೆಯಲ್ಲೂ ಮುಂದಿದೆ ಎಂದು ಹೇಳಿದರು. ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿದೆ. ಸ್ಮಾರ್ಟ್ ಶಾಲೆಗಳು ಆರಂಭಗೊಂಡಿವೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ಇದು ಭಾರತದ ಅಮೃತ ಕಾಲ ಎಂದರು. ಕರ್ನಾಟಕದಲ್ಲಿ ಹೂಡಿಕೆ ಮಾಡುವುದು ಭಾರತದ ಅಭಿವೃದ್ಧಿಗೆ ಕೈಜೋಡಿ ಸಿದಂತೆ. ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಹೂಡಿಕೆ ಮಾಡುತ್ತಿರುವ ಹೆಮ್ಮೆ ಉದ್ಯಮಿಗಳಲ್ಲಿದೆ. ರಾಜ್ಯದ ಜತೆ ಡಬಲ್ ಇಂಜಿನ್ ಸರ್ಕಾರಗಳ ಪವರ್ ಇದೆ. ಕರ್ನಾಟಕ ಹಲವು ವಲಯಗಳಲ್ಲಿ ಮೊದಲ ಸ್ಥಾನದಲ್ಲಿ ಇದೆ. ದೇಶದ ಹಲವು ರಾಜ್ಯಗಳಿಗಷ್ಟೇ ಅಲ್ಲ ಹಲವು ದೇಶಗಳಿಗೂ ಕರ್ನಾಟಕ ಮಾದರಿಯಾಗಿದೆ ಎಂದರು.

Translate »