295 ಮಂದಿಗೆ ಕೋವಿಡ್ ಲಸಿಕೆ ನೀಡಿಕೆ
ಮೈಸೂರು

295 ಮಂದಿಗೆ ಕೋವಿಡ್ ಲಸಿಕೆ ನೀಡಿಕೆ

June 24, 2021

ಮೈಸೂರು,ಜೂ.23(ಆರ್‍ಕೆಬಿ)- ಕೋವಿಡ್ ಲಸಿಕೆ ಅಭಿಯಾನದಡಿ ಮೈಸೂರು ವಿವಿ ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಬುಧವಾರ ಮೈಸೂರು ಟ್ರಾವಲ್ಸ್ ಅಸೋಸಿಯೇಷನ್‍ನ ಸದಸ್ಯರು, ಚಾಲಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ನಡೆಸಲಾಯಿತು. ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಡೆದ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 295 ಮಂದಿಗೆ ಲಸಿಕೆ ನೀಡಲಾಯಿತು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ಬಳಿಕ ಮಾತನಾಡಿದ ಅವರು, ಪ್ರಯಾಣಿಕರನ್ನು ಕೊಂಡೊಯ್ಯುವ ಟ್ರಾವಲ್ಸ್ ಚಾಲಕರು ಚೆನ್ನಾಗಿದ್ದರೆ ಪ್ರಯಾಣಿಕರು ಸುರಕ್ಷಿತವಾಗಿರುತ್ತಾರೆ. ಹಾಗಾಗಿ ಅಂತಹ ಚಾಲಕರು ಮತ್ತು ಅವರ ಕುಟುಂಬದವರಿಗೆ ಕೋವಿಡ್ ಲಸಿಕಾ ಕಾರ್ಯಕ್ರಮ ಆಯೋ ಜಿಸಿರುವುದು ವಿಳಂಬವಾದರೂ ಉತ್ತಮ ಕಾರ್ಯ ಎಂದು ಹೇಳಿದರು.

ತಮ್ಮ ತಂದೆ ಕೂಡ ಒಂದಷ್ಟು ಬಸ್ ಗಳನ್ನಿಟ್ಟುಕೊಂಡು ಟ್ರಾವಲ್ಸ್ ಏಜೆನ್ಸಿ ನಡೆಸು ತ್ತಿದ್ದ ಬಗ್ಗೆ ಅವರು ಸ್ಮರಿಸಿದರು. ಮೈಸೂರು ಟ್ರಾವಲ್ಸ್ ಅಸೋಸಿಯೇಷನ್ ಗೌರವಾ ಧ್ಯಕ್ಷ ಬಿ.ಎಸ್.ಪ್ರಶಾಂತ್, ಸಿ.ಎ.ಜಯ ಕುಮಾರ್, ಅಧ್ಯಕ್ಷ ಶಿವಲಿಂಗಪ್ಪ, ಉಪಾ ಧ್ಯಕ್ಷ ಡೇವಿಡ್‍ರಾಜ್, ಕಾರ್ಯದರ್ಶಿ ಎ.ಸಿ.ರವಿ, ಮೋಹನ್‍ಕುಮಾರ್ ಇನ್ನಿತ ರರು ಈ ವೇಳೆ ಉಪಸ್ಥಿತರಿದ್ದರು.

Translate »