ಜನಜಾಗೃತಿಗಾಗಿ ಅಂಚೆ ಪತ್ರ, ಪಾರ್ಸಲ್‍ಗಳ ಮೇಲೆ ಯೋಗ ಮುದ್ರೆ
ಮೈಸೂರು

ಜನಜಾಗೃತಿಗಾಗಿ ಅಂಚೆ ಪತ್ರ, ಪಾರ್ಸಲ್‍ಗಳ ಮೇಲೆ ಯೋಗ ಮುದ್ರೆ

June 24, 2021

ಮೈಸೂರು, ಜೂ.23 (ಆರ್‍ಕೆಬಿ)- ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯ ಸಂದರ್ಭದಲ್ಲಿ ಯೋಗದ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೈಸೂ ರಿನ ಸರಸ್ವತಿಪುರಂ ಪ್ರಧಾನ ಅಂಚೆ ಕಚೇರಿ ಮತ್ತು ಅಶೋಕ ರಸ್ತೆ ನೆಹರು ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ಜೂ.21ರಂದು ಯೋಗ ದಿನ ವನ್ನು ವಿಶಿಷ್ಟ ರೀತಿಯಲ್ಲಿ ಆಚ ರಿಸಲಾಯಿತು. ಯೋಗ ದಿನ ದಂದು ಈ ಎರಡು ಅಂಚೆ ಕಚೇರಿಗೆ ಬಂದ ಮತ್ತು ಇಲ್ಲಿಂದ ಕಳಿಸಲಾದ ಸಾವಿರಾರು ಲೆಟರ್‍ಗಳು, ಪಾರ್ಸಲ್‍ಗಳ ಹಿಂಬದಿಯಲ್ಲಿ ಯೋಗದ ಚಿಹ್ನೆ ಇರುವ ವಿಶಿಷ್ಟ ಮುದ್ರೆಯೊಂದಿಗೆ ಯೋಗ ದಿನದ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಿದರು.

ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಸರಸ್ವತಿಪುರಂ ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಪಿ.ಕೆ.ಸೀತಮ್ಮ, ಸರಸ್ವತಿಪುರಂ ಪ್ರಧಾನ ಅಂಚೆ ಕಚೇರಿಯಲ್ಲಿ ಮಾತ್ರ 2,158 ಪತ್ರಗಳು ಹಾಗೂ 278 ನೋಂದಾಯಿತ ಪೋಸ್ಟ್ ಪಾರ್ಸಲ್ ಗಳಿಗೆ ಈ ವಿಶೇಷ ಮುದ್ರೆಯನ್ನು ಒತ್ತಿ, ಬಳಿಕ ಬಟವಾಡೆ ಮಾಡಲಾಯಿತು ಎಂದರು.

Translate »