ಬಿಜೆಪಿಯಿಂದ ನಾಳೆ ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಣೆ
ಮೈಸೂರು

ಬಿಜೆಪಿಯಿಂದ ನಾಳೆ ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಣೆ

June 24, 2021

ಮೈಸೂರು, ಜೂ.23(ಆರ್‍ಕೆಬಿ)- 1975 ರಲ್ಲಿ ಅಂದಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರ ಕಾಂಗ್ರೆಸ್ ಸರ್ಕಾರ ಹೇರಿದ್ದ ಪ್ರಜಾಪ್ರಭುತ್ವ ವಿರೋಧಿ, ಜನ ವಿರೋಧಿ ಕರಾಳ ತುರ್ತು ಪರಿಸ್ಥಿತಿಯನ್ನು ಜಾರಿ ಮಾಡಿದ ಜೂ.25 ಅನ್ನು ಭಾರತ ದಲ್ಲಿ ಕಪ್ಪು ದಿನವೆಂದು ಪರಿಗಣಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಅಂದು ಭಾರತೀಯ ಜನತಾ ಪಕ್ಷದ ವತಿಯಿಂದ ಕರಾಳ ದಿನ ಆಚರಿಸಲಾಗುತ್ತಿದೆ ಎಂದು ಬಿಜೆಪಿ ನಗರಾ ಧ್ಯಕ್ಷ ಟಿ.ಎಸ್.ಶ್ರೀವತ್ಸ ತಿಳಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಪಕ್ಷದ ಕಾರ್ಯಕರ್ತರಿಗೆ ತಿಳಿ ಸಲು ಜೂ.25ರಂದು ಮೈಸೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪ್ರಜಾಪ್ರಭುತ್ವ ವನ್ನು ಹತ್ತಿಕ್ಕಲು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಕಾಂಗ್ರೆಸ್ ಪಕ್ಷ ಕೈಗೊಂಡ ದಮನಕಾರಿ, ಸರ್ವಾಧಿಕಾರಿ ನೀತಿಗಳ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ತಿಳುವಳಿಕೆ ಮೂಡಿಸಲಾಗುವುದು ಎಂದರು.
ಇಂದಿನಿಂದ ಜು.6ವರೆಗೆ ವಿವಿಧ ಕಾರ್ಯ ಕ್ರಮ: ಜೂ.23ರಂದು ಜನಸಂಘದ ಸಂಸ್ಥಾ ಪಕ ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ. ಜು.6ರಂದು ಅವರ ಜನ್ಮದಿನ. ಹೀಗಾಗಿ ಜೂ.23ರಿಂದ ಜು.6 ರವರೆಗೆ ಬೂತ್ ಮಟ್ಟದಲ್ಲಿ ವಿವಿಧ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ. ಅವರ ಚಿಂತನೆ, ಜೀವನಸ್ಫೂರ್ತಿ ಕುರಿತಂತೆ ವಿಚಾರ ಸಂಕಿರಣ, ವಿಡಿಯೋ ಕಾನ್ಫರೆನ್ಸ್, ಕೆರೆ, ಬಾವಿ ಮತ್ತು ಇತರೆ ಜಲ ಮೂಲ ಗಳ ಬಗ್ಗೆ ವಿಶೇಷ ಗಮನ ಹರಿಸಿ, ಕ್ಲೀನ್ ಇಂಡಿಯಾ ಹೆಲ್ತ್ ಇಂಡಿಯಾ ಅಡಿ ಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಇನ್ನಿ ತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಹೇಳಿದರು.

ಮೋದಿ `ಮನ್ ಕೀ ಬಾತ್’ ಆಲಿಸುವ ಕಾರ್ಯಕ್ರಮ ಜೂ.27ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ `ಮನ್ ಕೀ ಬಾತ್’ ಕಾರ್ಯಕ್ರಮವನ್ನು ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯ ಕ್ರಮವನ್ನು ಸಾಮೂಹಿಕವಾಗಿ ಆಲಿಸಲು ಬೂತ್ ಮಟ್ಟದಲ್ಲಿ ಮತ್ತು ಇತರೆ ಸಾರ್ವ ಜನಿಕ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಮನ್ ಕೀ ಬಾತ್‍ನಲ್ಲಿ ಉಲ್ಲೇಖಿಸಲಾದ ವ್ಯಕ್ತಿಗಳು ನಮ್ಮ ಪ್ರದೇಶ ಗಳಿಗೆ ಸೇರಿದವರಾಗಿದ್ದರೆ ಅಂತಹ ವಿಶಿಷ್ಟ ವ್ಯಕ್ತಿಯನ್ನು ಭೇಟಿ ಮಾಡಿ ಸನ್ಮಾನಿಸಲು ಪಕ್ಷ ತೀರ್ಮಾನಿಸಿದೆ. ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.

ಬಿಜೆಪಿ ವಕ್ತಾರ ಎಂ.ಮೋಹನ್ ಮಾತ ನಾಡಿ, 1975ರಲ್ಲಿ (46 ವರ್ಷಗಳ ಹಿಂದೆ) ಎರಡು ವರ್ಷ ದೇಶದ ಜನರು ಅನು ಭವಿಸಿದ ಕರಾಳ ತುರ್ತು ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಪ್ರಜಾಪ್ರಭುತ್ವ ವಿರೋಧಿ, ಜನವಿರೋಧಿ ಕರಾಳ ಕಾಯ್ದೆ ಜಾರಿ ಗೊಳಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ, ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಮಾತ ನಾಡಿದವರನ್ನು ಬಂಧಿಸಿ, ಜೈಲುವಾಸಕ್ಕೆ ಕಳುಹಿಸಿದ ಕರಾಳತೆಯನ್ನು ತಿಳಿಸಿದರು. ಈ ಮೂಲಕ ನಾಗರಿಕ ಹಕ್ಕು, ಮಾನ ವೀಯ ಹಕ್ಕುಗಳನ್ನು ಕಸಿಯಲಾಗಿತ್ತು. ಈ ವೇಳೆ ಮೈಸೂರಿನ ಚಾಮುಂಡಿಪುರಂ ನಲ್ಲಿ ಭಾರತ ಮಾತೆಗೆ ಜಯವಾಗಲಿ ಎಂದ ಕಾರಣಕ್ಕೆ 5 ಜನರನ್ನು ಬಂಧಿಸಿ, ಜೈಲಿಗಟ್ಟಿದ ಘಟನೆಯನ್ನು ತಿಳಿಸಿದರು.

ತುರ್ತು ಪರಿಸ್ಥಿತಿಯ ಕರಾಳ ದಿನದ ಅಂಗವಾಗಿ ಜೂ.27ರಂದು ಮೈಸೂರಿ ನಲ್ಲಿ ಬಂಧಿಸಲ್ಪಟ್ಟಿದ್ದವರಲ್ಲಿ ಆಯ್ದ ಕೆಲವ ರಿಗೆ ಅಂದು ಸನ್ಮಾನಿಸಲಾಗುವುದು. ಅಲ್ಲಲ್ಲಿ ವೆಬ್ ಮೀಟಿಂಗ್‍ಗಳ ಮೂಲಕ ಜನ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಟಿ.ರಮೇಶ್, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಜಿ.ಗಿರಿಧರ್, ಸೋಮಸುಂದರ್, ಮಾಧ್ಯಮ ವಕ್ತಾರ ಮಹೇಶ್‍ರಾಜ್ ಅರಸ್, ಸಹ ವಕ್ತಾರ ಕೇಬಲ್ ಮಹೇಶ್ ಉಪಸ್ಥಿತರಿದ್ದರು.

Translate »