ಮೈಸೂರು ನಗರ ಹಸಿರೀಕರಣಕ್ಕಾಗಿ 20  ಸಾವಿರ ಗಿಡ ವಿತರಣೆ: ಎಚ್.ವಿ.ರಾಜೀವ್
ಮೈಸೂರು

ಮೈಸೂರು ನಗರ ಹಸಿರೀಕರಣಕ್ಕಾಗಿ 20 ಸಾವಿರ ಗಿಡ ವಿತರಣೆ: ಎಚ್.ವಿ.ರಾಜೀವ್

June 24, 2021

ಮೈಸೂರು, ಜೂ.23- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಈ ಸಾಲಿನಲ್ಲಿ ವಿವಿಧ ಬಡಾವಣೆಗಳಿಗೆ ಸೇರಿದ ಉದ್ಯಾನವನ ಮತ್ತು ರಸ್ತೆಗಳ ಬದಿ ಗಳಲ್ಲಿ ಸುಮಾರು 20,000 ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಆಸಕ್ತ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಬಳಸಿಕೊಳ್ಳು ವಂತೆ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು ನಗರವನ್ನು ಹಸೀರಿಕರಣಗೊಳಿಸಲು ಸಂಕಲ್ಪ ತೊಟ್ಟಿದ್ದು, ಈಗಾಗಲೇ ನಗರದ ಹಲವು ಬಡಾವಣೆಗಳಲ್ಲಿ ಪರಿಸರ ಪ್ರೇಮಿಗಳು ಸ್ವಯಂಪ್ರೇರಿತರಾಗಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಉದ್ಯಾನವನಗಳನ್ನು ಕಿರು ಅರಣ್ಯವಾಗಿ ಪೆÇೀಷಿಸುತ್ತಿದ್ದಾರೆ. ಇದರಲ್ಲಿ ಸುದೀರ್ಘ ವರ್ಷಗಳಿಂದ ಮಾದರಿ ಯಾಗಿ ವಿಜಯನಗರ 3ನೇ ಹಂತ ಬಡಾವಣೆಯ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡ, ಮರ ಬೆಳೆಸುತ್ತಿರುವ ಮರಿಯಪ್ಪ ಅವರು ಅಭಿನಂದನಾರ್ಹರು.

ಇದೇ ರೀತಿ ಜೆ.ಪಿ.ನಗರ ಬಡಾವಣೆಯ ಉದ್ಯಾನವನಗಳಲ್ಲಿ ಈಗಾಗಲೇ ಅರಣ್ಯ ವನ್ನಾಗಿರಿಸಿರುವ ಮೈಸೂರಿನ ಮಾಜಿ ಮಹಾಪೌರರಾದ ಬಿ.ಎಲ್.ಭೈರಪ್ಪ ಅವರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಲ್ಲಿ ನಗರದ ಉದ್ಯಾನವನಗಳಲ್ಲಿ ಕಿರು ಅರಣ್ಯ ಬೆಳವಣಿಗೆ ಅತಿ ಮಹತ್ವದಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ “ಅಟeಚಿಟಿ ಒಥಿsoಡಿe” ಹಲವು ವರ್ಷಗಳಿಂದ ಮುಂಚೂಣಿಯಲ್ಲಿದೆ. ಮೈಸೂರು ನಗರವು ಪೂರ್ಣ ಪ್ರಮಾಣದ ಹಸಿರು ನಗರವಾಗಬೇಕಾದರೆ, ಪರಿಸರ ಆಸಕ್ತ ಸ್ವಯಂ ಸೇವಕರು ಮತ್ತು ಸಂಘ-ಸಂಸ್ಥೆಗಳ ಭಾಗವಹಿಸುವಿಕೆ ಅಗತ್ಯವಿರುತ್ತದೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಪ್ರತಿ ಉದ್ಯಾನವನಕ್ಕೆ “ಖಿಡಿee Wಚಿಡಿಜeಟಿ” ಗಳನ್ನು ನೇಮಿಸಲು ಸದುದ್ದೇಶವಿದೆ. ಆಸಕ್ತಿಯುಳ್ಳ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಸಂಪರ್ಕಿಸಬೇಕಾಗಿ ಕೋರುತ್ತಾ, ಅವರುಗಳಿಗೆ ಅರಣ್ಯ ಇಲಾಖೆ ವತಿಯಿಂದ ಗಿಡ ನೆಡಿಸಿ ಬೆಳೆಸುವ ಬಗ್ಗೆ ಮಾರ್ಗದರ್ಶನ ಕೊಡಿಸಲಾಗುತ್ತದೆ. ಪ್ರಾಧಿಕಾರದ ಅಧಿಕಾರಿಗಳಾದ ಸಹಾಯಕ ತೋಟಗಾರಿಕ ಅಧಿಕಾರಿ ಧನುಶ್ ಮೊ.ಸಂ: 9740013259 ಹಾಗೂ ಪರಿಸರ ಅಧಿಕಾರಿ ಮಮತ ಶ್ರೇಣಿ ಮೊ.ಸಂ: 9731053 082 ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

Translate »