ಅನ್‍ಲಾಕ್ ನಂತರ ಸ್ವಯಂಪ್ರೇರಿತ ದಂಡ ಪಾವತಿ ವ್ಯವಸ್ಥೆ ಮುಂದುವರಿಕೆ
ಮೈಸೂರು

ಅನ್‍ಲಾಕ್ ನಂತರ ಸ್ವಯಂಪ್ರೇರಿತ ದಂಡ ಪಾವತಿ ವ್ಯವಸ್ಥೆ ಮುಂದುವರಿಕೆ

June 24, 2021

ಮೈಸೂರು,ಜೂ.23(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ನಿರ್ಬಂಧದಿಂದಾಗಿ ಸದ್ಯ ಸ್ಥಗಿತಗೊಂಡಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸ್ವಯಂಪ್ರೇರಿತ ದಂಡ ಪಾವತಿ ವ್ಯವಸ್ಥೆಯು ಅನ್‍ಲಾಕ್ ನಂತರ ಮುಂದುವರಿಯಲಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿದವರ ವಾಹನಗಳನ್ನು ತಡೆದು ಇಲ್ಲವೇ ಹಿಂಬಾಲಿಸಿಕೊಂಡು ಹೋಗಿ ಹಿಡಿದು ಪ್ರಕರಣ ದಾಖ ಲಿಸಿ ಸ್ಥಳದಲ್ಲೇ ದಂಡ ವಿಧಿಸುವುದು ಅಥವಾ ವಾಹನ ವಶಪಡಿಸಿ ಕೊಳ್ಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅದರಿಂದ ಕೆಲವೊಮ್ಮೆ ಅಪಘಾತ, ಅವಘಡಗಳು ಸಂಭವಿಸುತ್ತದೆ. ಹಾಗಾಗಬಾರ ದೆಂದೇ ಸ್ವಯಂಪ್ರೇರಿತ ದಂಡ ಪಾವತಿ ವ್ಯವಸ್ಥೆಯನ್ನು ಏಪ್ರಿಲ್ 1ರಿಂದ ಮೈಸೂರು ನಗರದಲ್ಲಿ ಜಾರಿಗೊಳಿಸಲಾಗಿತ್ತು. ಆ ಪ್ರಕ್ರಿಯೆಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಏಪ್ರಿಲ್ 1ರಿಂದ 27ರವರೆಗೆ ಮೈಸೂರಲ್ಲಿ ಒಟ್ಟು 1439 ಮಂದಿ ವಾಹನ ಬಳಕೆದಾರರು ತಮ್ಮ ವಾಹನಗಳ ಮೇಲೆ ಬಾಕಿ ಇರುವ ಪ್ರಕರಣಗಳ ಬಗ್ಗೆ ವಿಚಾರಿಸಿ ಮಾಹಿತಿ ಪಡೆದಿದ್ದರು. 597 ಪ್ರಕರಣಗಳಲ್ಲಿ 3,67,300 ರೂ. ದಂಡ ಪಾವತಿಸಿದ್ದರು ಎಂದು ವಿವರಿಸಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಈ ಜನಸ್ನೇಹಿ ದಂಡ ಪಾವತಿ ವ್ಯವಸ್ಥೆ ಪರಿಚಯಿಸ ಲಾಗಿದೆ. ವಾಹನಗಳ ಮಾಲೀಕರು, ಚಾಲಕರು ಸ್ವಯಂಪ್ರೇರಿತವಾಗಿ ಸಂಚಾರಿ ಕಿಯೋಸ್ಕ್‍ಗಳಲ್ಲಿ ವಿಚಾರಿಸಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಕಟ್ಟಬೇಕೆಂದು ತಿಳಿಸಿದ್ದಾರೆ.

Translate »