ಭಾನುವಾರ 299 ಮಂದಿಗೆ ಸೋಂಕು, ಇಬ್ಬರ ಸಾವು
ಮೈಸೂರು

ಭಾನುವಾರ 299 ಮಂದಿಗೆ ಸೋಂಕು, ಇಬ್ಬರ ಸಾವು

June 1, 2020

ಮೈಸೂರು, ಮೇ 31-ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಭಾನುವಾರ ಹೊಸದಾಗಿ 299 ಮಂದಿಗೆ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3221ಕ್ಕೆ ಏರಿದೆ. ಇಂದು ಪತ್ತೆಯಾದ ಪ್ರಕರಣಗಳಲ್ಲಿ 255 ಮಂದಿ ಹೊರ ರಾಜ್ಯದವರಾಗಿದ್ದು, 7 ಮಂದಿ ವಿದೇಶದಿಂದ ಬಂದವರು. ಸೋಂಕಿತರ ಸಂಖ್ಯೆ ಹೆಚ್ಚಾ ಗುತ್ತಿರುವ ಅದೇ ವೇಳೆ ಗುಣಮುಖರಾಗುತ್ತಿರುವ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ. ಇಂದು ಬೆಂಗಳೂರಿನಲ್ಲಿ 59, ಉಡುಪಿಯಲ್ಲಿ 57, ಮಂಡ್ಯದಲ್ಲಿ 28, ಚಿಕ್ಕಬಳ್ಳಾಪುರದಲ್ಲಿ 18, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ತಲಾ 17 ಮಂದಿ ಸೇರಿದಂತೆ 221 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡು ಗಡೆಯಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಸಂಖ್ಯೆ 1218ಕ್ಕೆ ಏರಿದೆ.

ರಾಯಚೂರಿನಲ್ಲಿ 83, ಯಾದಗಿರಿಯಲ್ಲಿ 44, ಬೀದರ್‍ನಲ್ಲಿ 33, ಕಲಬುರಗಿ ಯಲ್ಲಿ 28, ವಿಜಯಪುರದಲ್ಲಿ 26, ಬೆಂಗಳೂರಿನಲ್ಲಿ 21, ದಕ್ಷಿಣ ಕನ್ನಡದಲ್ಲಿ 14, ಮಂಡ್ಯ ಮತ್ತು ಹಾಸನದಲ್ಲಿ ತಲಾ 13, ದಾವಣಗೆರೆಯಲ್ಲಿ 6, ಉತ್ತರ ಕನ್ನಡದಲ್ಲಿ 5, ಬಳ್ಳಾರಿ, ಶಿವಮೊಗ್ಗ ಮತ್ತು ಕೋಲಾರದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ರಾಜ್ಯದ 3221 ಸೋಂಕಿ ತರ ಪೈಕಿ ಈವರೆಗೆ 1218 ಮಂದಿ ಗುಣಮುಖರಾಗಿದ್ದಾರೆ. ಇಂದು ಇಬ್ಬರು ಸೇರಿದಂತೆ ಈವರೆಗೆ ಸೋಂಕಿನಿಂದ 51 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಪ್ರಥಮ ಸಂಪರ್ಕದ 15,252, ದ್ವಿತೀಯ ಸಂಪರ್ಕದ 13,987 ಮಂದಿ ಸೇರಿದಂತೆ ಒಟ್ಟು 29,239 ಮಂದಿ ಯನ್ನು ಕ್ವಾರಂಟೈನ್ ಮಾಡಲಾಗಿದೆ. ಇಂದು ವಾಷಿಂಗ್ಟನ್‍ನಿಂದ 105 ಮತ್ತು ಜರ್ಮನಿ ಯಿಂದ 248 ಮಂದಿ ಸೇರಿದಂತೆ 353 ಮಂದಿ ಬೆಂಗಳೂರಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.

Translate »