3.35 ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ, 33.28 ಕೋಟಿ ರೂ. ವೆಚ್ಚದಲ್ಲಿ  ನಿರ್ಮಿಸಿರುವ ಪೊಲೀಸ್ ಪಬ್ಲಿಕ್ ಶಾಲೆಯ ಹೆಚ್ಚುವರಿ ಕಟ್ಟಡಗಳ ಉದ್ಘಾಟನೆ
ಮೈಸೂರು

3.35 ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ, 33.28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪೊಲೀಸ್ ಪಬ್ಲಿಕ್ ಶಾಲೆಯ ಹೆಚ್ಚುವರಿ ಕಟ್ಟಡಗಳ ಉದ್ಘಾಟನೆ

July 15, 2021

ಮೈಸೂರು,ಜು.14(ಪಿಎಂ)-ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಮೈಸೂರು ನಗರದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ನಿರ್ಮಿ ಸಲಿರುವ ವಿವಿಧ ಕಟ್ಟಡ ಕಾಮಗಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರಲ್ಲದೆ, ನಿಗಮ ದಿಂದ ನಿರ್ಮಿಸಿರುವ ಪೊಲೀಸ್ ಪಬ್ಲಿಕ್ ಶಾಲೆಯ ಹೆಚ್ಚುವರಿ ಕಟ್ಟಡಗಳ ಉದ್ಘಾಟನೆ ಯನ್ನೂ ಬುಧವಾರ ನೆರವೇರಿಸಿದರು.

ಮೈಸೂರಿನ ಜ್ಯೋತಿನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಆವರಣದಲ್ಲಿ 1.95 ಕೋಟಿ ರೂ. ವೆಚ್ಚ ದಲ್ಲಿ ನಿರ್ಮಿಸಲಿರುವ ಪಡೆಯ ಆಡಳಿತ ಕಚೇರಿ ಮತ್ತು ಶಸ್ತ್ರಾಗಾರ ಕಟ್ಟಡ ಕಾಮಗಾರಿಗೆ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಒಟ್ಟು 683 ಚ.ಮೀ. ವಿಸ್ತೀರ್ಣದಲ್ಲಿ ಸದರಿ ಕಟ್ಟಡ ನಿರ್ಮಾಣ ಗೊಳ್ಳಲಿದ್ದು, ನೆಲಮಹಡಿ 668 ಚ.ಮೀ. ಮತ್ತು ಮೊದಲನೇ ಮಹಡಿ 15 ಚ.ಮೀ. ನಲ್ಲಿ ನಿರ್ಮಾಣಗೊಳ್ಳಲಿದೆ.
ನೆಲಮಹಡಿಯಲ್ಲಿ ಡಿಎಸ್‍ಪಿ ಕೊಠಡಿ (ಶೌಚಾಲಯದೊಂದಿಗೆ), ನಾಲ್ಕು ಆರ್‍ಎಸ್‍ಐಓ ಕೊಠಡಿಗಳು, ಕಂಪ್ಯೂ ಟರ್ ಮತ್ತು ವೈರ್‍ಲೆಸ್ ವಿಭಾಗ, ಸ್ಟೋರ್ ರೂಂ, ಡ್ಯೂಟಿ ಆಫೀಸರ್ ರೂಂ, ಗ್ರಂಥಾ ಲಯ, ಶೌಚಾಲಯ, ಶಸ್ತ್ರಾಗಾರ ಬ್ಲಾಕ್ ಸೇರಿದಂತೆ ಇನ್ನಿತರ ವಿಭಾಗಗಳು ಬರಲಿವೆ.

ವಸತಿ ನಿಲಯಕ್ಕೆ ಶಂಕುಸ್ಥಾಪನೆ: ಬಳಿಕ ಜಲಪುರಿಯಲ್ಲಿ (ಎಸ್‍ಪಿ ಕಚೇರಿ ಹಿಂಭಾಗ) ಪೊಲೀಸ್ ಅಧೀಕ್ಷಕರ (ಎಸ್‍ಪಿ) ವಸತಿ ಗೃಹ ನಿರ್ಮಾಣ ಸಂಬಂಧ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿ ಸಿದರು. 1.40 ಕೋಟಿ ರೂ. ವೆಚ್ಚದಲ್ಲಿ ಸದರಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಒಟ್ಟು 350 ಚ.ಮೀ. ವಿಸ್ತೀರ್ಣದಲ್ಲಿ ನಿರ್ಮಾಣ ಗೊಳ್ಳಲಿರುವ ಈ ಕಟ್ಟಡದ ನೆಲಮಹಡಿ 214 ಚ.ಮೀ. ಮತ್ತು ಮೊದಲನೇ ಮಹಡಿ 136 ಚ.ಮೀ. ವಿಸ್ತೀರ್ಣ ಹೊಂದಿರಲಿವೆ.

ಕಟ್ಟಡದ ನೆಲಮಹಡಿಯಲ್ಲಿ ಲಿವಿಂಗ್ ರೂಂ, ಒಂದು ಕೊಠಡಿ, ಗೃಹ ಕಚೇರಿ, ಅಡುಗೆ ಕೋಣೆ, ಡೈನಿಂಗ್ ಹಾಲ್, ಸ್ನಾನಗೃಹ ಮತ್ತು ಶೌಚಾಲಯ ಸೇರಿ ದಂತೆ ಇನ್ನಿತರ ವ್ಯವಸ್ಥೆಗಳು ಇರಲಿವೆ. ಮೊದಲನೇ ಮಹಡಿಯಲ್ಲಿ ಶೌಚಾಲಯ ಒಳಗೊಂಡ ಎರಡು ಕೊಠಡಿಗಳು, ಲಿವಿಂಗ್ ಏರಿಯಾ, ಸ್ನಾನಗೃಹ ಮತ್ತು ಶೌಚಾ ಲಯ ನಿರ್ಮಾಣಗೊಳ್ಳಲಿವೆ. ಒಟ್ಟು 3.35 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಗೃಹ ಸಚಿವರು ಚಾಲನೆ ನೀಡಿದರು.

ಪೊಲೀಸ್ ಪಬ್ಲಿಕ್ ಶಾಲೆ ಹೆಚ್ಚುವರಿ ಕಟ್ಟಡ: ಜಲಪುರಿಯ ಮಹದೇವಪುರ ರಸ್ತೆಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯ ಹೆಚ್ಚುವರಿ ಕಟ್ಟಡಗಳನ್ನು ಬಸವ ರಾಜ ಬೊಮ್ಮಾಯಿ ಉದ್ಘಾಟಿಸಿದರು. 17.94 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪ್ರೌಢಶಾಲಾ ಕಟ್ಟಡ, 11.04 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬಾಲಕರ ವಸತಿನಿಲಯ ಮತ್ತು 4.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈಜುಕೊಳ ಉದ್ಘಾ ಟಿಸಿದ ಗೃಹ ಸಚಿವರು, ಇದೇ ವೇಳೆ ಶಾಲಾ ಆವರಣದಲ್ಲಿ ಗಿಡ ನೆಟ್ಟು ನೀರೆರೆದರು.

ನೂತನ ಪ್ರೌಢಶಾಲಾ ಕಟ್ಟಡ 10220.84 ಚ.ಮೀ. ವಿಸ್ತೀರ್ಣದಲ್ಲಿ ನಿರ್ಮಾಣವಾ ಗಿದೆ. ತಳಮಹಡಿ 1460.12 ಚ.ಮೀ. ವಿಸ್ತೀರ್ಣ ಹೊಂದಿದ್ದು, ಇಲ್ಲಿ ಸೆಮಿನಾರ್ ಹಾಲ್, ಯೋಗಾ ಕೊಠಡಿ, ಆಕ್ಟಿವಿಟಿ ಹಾಲ್, ಆರ್ಟ್ ಮತ್ತು ಕ್ರಾಫ್ಟ್ ಕೊಠಡಿ ಜೊತೆಗೆ ಶೌಚಾಲಯ ಇದೆ. ನೆಲ ಮಹಡಿಯು 2920.24 ಚ.ಮೀ. ವಿಸ್ತೀರ್ಣವಿದ್ದು, ಇಲ್ಲಿ ಪ್ರಾಂಶುಪಾಲರ ಕೊಠಡಿ (ಶೌಚಾಲಯ ಸೇರಿದಂತೆ), ಕಚೇರಿ ಕೊಠಡಿ, ಸಿಬ್ಬಂದಿ ಕೊಠಡಿ, 11 ಬೋಧನಾ ಕೊಠಡಿಗಳು, ಬಾಲಕರ ಶೌಚಾಲಯ, ಬಾಲಕಿಯರ ಶೌಚಾಲಯ ಮತ್ತು ಸಾಮಗ್ರಿ ಕೊಠಡಿ ಇದೆ. 2920.24 ಚ.ಮೀ. ವಿಸ್ತೀರ್ಣದ ಮೊದಲನೇ ಮಹಡಿ ಯಲ್ಲಿ ಆಕ್ಟಿವಿಟಿ ಕೊಠಡಿ, 16 ಬೋಧನಾ ಕೊಠಡಿಗಳು, ಬಾಲಕರ ಶೌಚಾಲಯ, ಬಾಲಕಿಯರ ಶೌಚಾಲಯ ಮತ್ತು ಸಿಬ್ಬಂದಿ ಕೊಠಡಿ ಹೊಂದಿದೆ. ಇದೇ ವಿಸ್ತೀರ್ಣ ಹೊಂದಿರುವ ಎರಡನೇ ಮಹಡಿಯು ಮೂರು ಪ್ರಯೋಗಾಲಯ ಕೊಠಡಿಗಳು, ಸಾಮಗ್ರಿ ಕೊಠಡಿ, ಸಂಗೀತ ತರಗತಿ ಕೊಠಡಿ, ಗ್ರಂಥಾಲಯ, ಕಂಪ್ಯೂಟರ್ ಕೊಠಡಿ ಮತ್ತು ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ಶೌಚಾಲಯಗಳನ್ನು ಒಳಗೊಂಡಿದೆ.

ಬಾಲಕರ ವಸತಿ ನಿಲಯ: ನೂತನ ಬಾಲಕರ ವಸತಿ ನಿಲಯ ಕಟ್ಟಡವು ಒಟ್ಟು 5374.75 ಚ.ಮೀ. ವಿಸ್ತೀರ್ಣ ಹೊಂದಿದೆ. ತಳ ಮಹಡಿಯು 477.73 ಚ.ಮೀ. ವಿಸ್ತೀರ್ಣ ಹೊಂದಿದ್ದು, ಇಲ್ಲಿ ಅಡುಗೆ ಮನೆ, ಊಟದ ಹಾಲ್ ಮತ್ತು ಉಗ್ರಾಣ ಕೊಠಡಿ ನಿರ್ಮಿಸಲಾಗಿದೆ. ನೆಲಮಹಡಿಯು 1249.59 ಚ.ಮೀ. ವಿಸ್ತೀರ್ಣವಿದ್ದು, ಇಲ್ಲಿ 23 ವಸತಿ ಕೊಠಡಿಗಳು, ಶೌಚಾಲಯ ಒಳಗೊಂಡ ವೈದ್ಯರ ಕೊಠಡಿ, ಕಚೇರಿ ಕೊಠಡಿ, ಮೇಲ್ವಿಚಾರಕರ ಕೊಠಡಿ ಜೊತೆಗೆ ಪ್ರತ್ಯೇಕ ಶೌಚಾಲಯ ಇವೆ. ಮೊದಲನೇ ಮಹಡಿ, ಎರಡನೇ ಮಹಡಿ ಮತ್ತು ಮೂರನೇ ಮಹಡಿಗಳು ಸೇರಿ ದಂತೆ ಪ್ರತಿಯೊಂದು 1215.81 ಚ.ಮೀ. ವಿಸ್ತೀರ್ಣ ಹೊಂದಿವೆ. ಈ ಮೂರು ಮಹಡಿಗಳು ತಲಾ 30 ಕೊಠಡಿಗಳನ್ನು ಒಳಗೊಂಡಿದ್ದು, ಎಲ್ಲದಕ್ಕೂ ಶೌಚಾ ಲಯದ ವ್ಯವಸ್ಥೆ ಕಲ್ಪಿಸಲಾಗಿದೆ.

ಈಜುಕೊಳ: ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆ ಆವರಣದಲ್ಲಿ ನಿರ್ಮಿಸಿ ರುವ ಈಜುಕೊಳ 1466.66 ಚ.ಮೀ. ವಿಸ್ತೀರ್ಣ ಹೊಂದಿದೆ. ಈಜುಕೊಳವು ಬೇಬಿ ಪೂಲ್, ಬಾಲಕರ ಮತ್ತು ಬಾಲಕಿ ಯರ ಪ್ರತ್ಯೇಕ ಸ್ನಾನಗೃಹ, ಚೇಂಜ್ ರೂಂ ಮತ್ತು ಶೌಚಾಲಯಗಳನ್ನು ಒಳಗೊಂಡಿದೆ.
ಡಿಎಆರ್ ಆವರಣದಲ್ಲಿ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮತ್ತು ಎಂಎಲ್‍ಸಿ ಎ.ಹೆಚ್.ವಿಶ್ವನಾಥ್ ಭಾಗವಹಿಸಿದ್ದರು. ಶಾಸಕರಾದ ತನ್ವೀರ್ ಸೇಠ್, ಕೆ.ಮಹ ದೇವ್, ಸಂಸದ ಪ್ರತಾಪ್ ಸಿಂಹ, ಡಿಜಿಪಿ ಮತ್ತು ಐಜಿಪಿ ಪ್ರವೀಣ್ ಸೂದ್, ಪ್ರಭಾರ ಮೇಯರ್ ಅನ್ವರ್‍ಬೇಗ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಎನ್. ಮೂರ್ತಿ, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾಧಿ ಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್.ಕೌಟಿಲ್ಯ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ. ಫಣೀಶ್ ಮತ್ತಿತರರು ಹಾಜರಿದ್ದರು.

Translate »