ಇಟ್ಟಿಗೆಗೂಡಿನಿಂದ ಹಾರ್ಡಿಂಜ್ ವೃತ್ತದವರೆಗೆ 3.65 ಕೋಟಿ ವೆಚ್ಚದಲ್ಲಿ   ರಸ್ತೆ, ಫುಟ್‍ಪಾತ್, ಮಳೆ ನೀರು ಚರಂಡಿ ಸೇರಿ ವಿವಿಧ   ಕಾಮಗಾರಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ
ಮೈಸೂರು

ಇಟ್ಟಿಗೆಗೂಡಿನಿಂದ ಹಾರ್ಡಿಂಜ್ ವೃತ್ತದವರೆಗೆ 3.65 ಕೋಟಿ ವೆಚ್ಚದಲ್ಲಿ  ರಸ್ತೆ, ಫುಟ್‍ಪಾತ್, ಮಳೆ ನೀರು ಚರಂಡಿ ಸೇರಿ ವಿವಿಧ  ಕಾಮಗಾರಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ

January 28, 2021

ಮೈಸೂರು, ಜ.27(ಆರ್‍ಕೆಬಿ)- ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ವಿವಿಧ ವಾರ್ಡ್ ವ್ಯಾಪ್ತಿಯಲ್ಲಿ ಒಟ್ಟಾರೆ 3.65 ಕೋಟಿ ರೂ. ಅಂದಾಜಿನ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ಶಾಸಕ ಎಸ್.ರಾಮದಾಸ್ ಬುಧವಾರ ಚಾಲನೆ ನೀಡಿದರು. 3 ಕೋಟಿ ರೂ. ವೆಚ್ಚದಲ್ಲಿ 52ನೇ ವಾರ್ಡ್‍ನ ಇಟ್ಟಿಗೆಗೂಡು ಮಾಲ್ ಆಫ್ ಮೈಸೂರು ಬಳಿ ರಸ್ತೆಯಿಂದ ಹಾರ್ಡಿಂಜ್ ವೃತ್ತದವರೆಗೆ ಲೋಕೋ ಪಯೋಗಿ ಇಲಾಖೆಯಿಂದ ರಸ್ತೆ, ಫುಟ್‍ಪಾತ್, ಮಳೆ ನೀರು ಚರಂಡಿ ಕಾಮಗಾರಿಗೆ ಕರಗ ದೇವ ಸ್ಥಾನದ ಬಳಿ ಶಾಸಕರು ಚಾಲನೆ ನೀಡಿದರು.

65ನೇ ವಾರ್ಡ್ ಶ್ರೀರಾಂಪುರ 2ನೇ ಹಂತದ ಶ್ರೀಗಂಧ ಮಾರ್ಗದಲ್ಲಿ 27 ಲಕ್ಷ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿ ಕಾಮಗಾರಿ, ಅಮೃತ್ ಬೇಕರಿ ಮತ್ತು ಬೆಮೆಲ್ ಅಂಚೆ ಕಚೇರಿ ಬಳಿ 5 ಲಕ್ಷ ರೂ.ಗಳಲ್ಲಿ ಡಕ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ದರು. 64ನೇ ವಾರ್ಡ್ ಶ್ರೀರಾಂಪುರ 2ನೇ ಹಂತದ ಮಧುವನ ಉದ್ಯಾನವನದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ಉದ್ಘಾಟನೆ ನೆರವೇರಿಸಿ, ಬಳಿಕ 23 ಲಕ್ಷ ರೂ. ವೆಚ್ಚದಲ್ಲಿ 64-65ನೇ ವಾರ್ಡ್ ವ್ಯಾಪ್ತಿಯ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯ ಹಾಗೂ 65ನೇ ವಾರ್ಡ್‍ನ ಶಿವಪುರ ಗ್ರಾಮದ ಉದ್ಯಾ ನವನದ ಅಭಿವೃದ್ಧಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್, ತಾವು ಜಿಲ್ಲಾ ಸಚಿವರಾಗಿದ್ದ ಸಂದರ್ಭ ದಲ್ಲಿ ಮೈಸೂರಿನ ಖಾಲಿ ನಿವೇಶನಗಳು ಮತ್ತು ಬಯಲು ಪ್ರದೇಶವನ್ನು ವರ್ಷಕ್ಕೆ ಕನಿಷ್ಠ 3 ಬಾರಿಯಾದರೂ ಸ್ವಚ್ಛಗೊಳಿಸುವ ಯೋಜನೆ ಜಾರಿಗೊಳಿಸಲಾಗಿತ್ತು. ಅದರಂತೆ ವಿವಿಧ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳ ಲಾಗುತ್ತಿದೆ ಎಂದರು. ಇಟ್ಟಿಗೆಗೂಡಿನ ಮಾಲ್ ಆಫ್ ಮೈಸೂರು ಬಳಿಯಿಂದ ಹಾರ್ಡಿಂಜ್ ವೃತ್ತದವರೆಗೆ ಚರಂಡಿ, ಫುಟ್‍ಪಾತ್ ಕಾಮಗಾರಿಯನ್ನು ವಿಳಂಬ ಮಾಡದೇ ಅಂಡರ್ ಕೇಬಲ್ ಹಾಗೂ ಕೆಇಬಿ ಅವರನ್ನು ಕರೆಸಿ ಕಾಮಗಾರಿಗೆ ತೊಂದರೆಯಾಗುವ ಅಂಶಗಳನ್ನು ತೆಗೆದು ಆದಷ್ಟು ಬೇಗ ಸಮಸ್ಯೆ ಪರಿಹರಿಸಿಕೊಂಡು ಕಾಮಗಾರಿ ವಿಳಂಬವಾಗದಂತೆ ನೋಡಿಕೊಳ್ಳಲು ಅಧಿ ಕಾರಿಗಳಿಗೆ ಸೂಚಿಸಿದರು. ಮಧುವನ ಉದ್ಯಾನದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ, ಸ್ನಾನ ಗೃಹದಲ್ಲಿ ಸೋಪ್, ಬಟ್ಟೆಗಳನ್ನಿಡಲು ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಕಾರ್ಯಕ್ರಮ ದಲ್ಲಿ ಪಾಲಿಕೆ ಸದಸ್ಯರಾದ ಗೀತಾಶ್ರೀ ಯೋಗಾನಂದ್, ಬಿ.ವಿ.ಮಂಜುನಾಥ್, ಚಂಪಕ, ಛಾಯಾದೇವಿ, ಶೋಭಾ ಸುನಿಲ್, ಬಿಜೆಪಿ ಕೆ.ಆರ್.ಕ್ಷೇತ್ರ ಮುಖಂಡರಾದ ಸಂತೋಷ್ ಶಂಭು, ಪ್ರಸಾದ್‍ಬಾಬು, ಬಿ.ಕೆ.ಮಂಜು ನಾಥ್, ಗಿರೀಶ್, ಯೋಗಾನಂದ್, ಚಿನ್ನಸ್ವಾಮಿ, ಪರ ಮೇಶ್, ಮಂಜುನಾಥ್, ಗೋಪಾಲ್, ಪ್ರಫುಲ್ಲಾ, ರಮಾ ನಾಥ್, ಉಮಾಶಂಕರ್, ಪ್ರಸನ್ನ, ಹರೀಶ್, ಸಂಪತ್, ಸುರೇಶ್, ಸುಗುಣ, ಹೇಮಾವತಿ, ರಾಮಪ್ರಸಾದ್, ವೆಂಕಟೇಶ್ ಇನ್ನಿತರರು ಉಪಸ್ಥಿತರಿದ್ದರು.

 

 

Translate »