ಮೇಯರ್ ಚುನಾವಣೆ ಮೈತ್ರಿ ವಿಚಾರದಲ್ಲಿ ಜೆಡಿಎಸ್ ತಟಸ್ಥ: ಶಾಸಕ ಸಾ.ರಾ.ಮಹೇಶ್
ಮೈಸೂರು

ಮೇಯರ್ ಚುನಾವಣೆ ಮೈತ್ರಿ ವಿಚಾರದಲ್ಲಿ ಜೆಡಿಎಸ್ ತಟಸ್ಥ: ಶಾಸಕ ಸಾ.ರಾ.ಮಹೇಶ್

January 28, 2021

ಮೈಸೂರು,ಜ.27(ಆರ್‍ಕೆಬಿ)-ಮೈಸೂರು ನಗರಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಮೈತ್ರಿ ವಿಚಾರವನ್ನು ಮೀಸಲಾತಿ ಪ್ರಕಟವಾದ ಬಳಿಕ ನಮ್ಮ ಸದಸ್ಯರ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ. ಎರಡೂ ಪಕ್ಷಗಳು ನಮ್ಮ ವಿರೋಧಿಗಳೇ. ಹಾಗಾಗಿ ಸದ್ಯ ತಟಸ್ಥವಾಗಿರುತ್ತೇವೆ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಾಲಿಕೆ ಸದಸ್ಯರು, ಮಾಜಿ ಮೇಯರ್‍ಗಳು, ಕೆಲವು ಕಾಂಗ್ರೆಸ್‍ನವರು ನಡೆದುಕೊಂಡ ರೀತಿಗಳ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ನಗರದ ಇತರೆ ಕಾಂಗ್ರೆಸ್ ನಾಯಕರ ಜೊತೆ ನಮ್ಮ ಸಂಬಂಧ ಚೆನ್ನಾಗಿದ್ದು, ಯಾರೋ ಇಬ್ಬರು, ಮೂವರ ನಡವಳಿಕೆಯಿಂದ ಪಕ್ಷವನ್ನು ದೂರಲು ಸಾಧ್ಯವಿಲ್ಲ ಎಂದು ಹೇಳಿದರು.

ದೆಹಲಿ ಘಟನೆಗೆ ಸಾ.ರಾ.ಮಹೇಶ್ ಖಂಡನೆ
ದೆಹಲಿಯಲ್ಲಿ ಮಂಗಳವಾರ ರೈತರ ಟ್ರಾಕ್ಟರ್ ಪ್ರತಿಭಟನೆ ವೇಳೆ ನಡೆದ ಘಟನೆ ಯನ್ನು ಶಾಸಕ ಸಾ.ರಾ.ಮಹೇಶ್ ಖಂಡಿಸಿದ್ದಾರೆ. ಮಂಗಳವಾರದ ಘಟನೆ ನಡೆಯ ಬಾರದಿತ್ತು. 2 ತಿಂಗಳಿಂದ ಹೋರಾಟ ನಡೆಸುತ್ತಿರುವ ಕೆಲವು ರೈತರು ತಮ್ಮ ವ್ಯಾಪ್ತಿ ಮೀರಿದ್ದಾರೆ. ಇದು ಪೊಲೀಸರ ವೈಫಲ್ಯ ಅಥವಾ ರೈತರ ದುಡುಕು ನಿರ್ಧಾರವೆನ್ನ ಬಹುದು ಎಂದಿದ್ದಾರೆ. ಪ್ರಧಾನಿ, ರಾಷ್ಟ್ರಪತಿ ಇರುವ ಪ್ರದೇಶದಲ್ಲಿ ಪೊಲೀಸರು ಮತ್ತು ರೈತರು ಇಬ್ಬರಿಗೂ ನೋವಾಗಿದೆ. ಘಟನೆಗೆ ಯಾರೇ ಕಾರಣರಾಗಿದ್ದರೂ ಸರಿಯಲ್ಲ. ಹೋರಾಟ ಸಂದರ್ಭದಲ್ಲಿ ಪ್ರತಿಭಟನಾಕಾರರು ನಮ್ಮ ಆಸ್ತಿ ನಮ್ಮ ಸರ್ಕಾರ ಎಂಬು ದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾಗಿತ್ತು. ಏಕೆಂದರೆ ಪೊಲೀಸರೇ ನಮಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕಿತ್ತು ಎಂದಿದ್ದಾರೆ. ನಡೆದ ಘಟನೆ ಖಂಡ ನೀಯ. ಇದರ ಬಗ್ಗೆ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ ಎಂದು ತಿಳಿಸಿದರು.

Translate »