ರಾಜ್ಯದಲ್ಲಿ 1ರಿಂದ 12ನೇ ತರಗತಿಯ ಶೇ.30ರಷ್ಟು ಪಠ್ಯ ಕಡಿತ
ಮೈಸೂರು

ರಾಜ್ಯದಲ್ಲಿ 1ರಿಂದ 12ನೇ ತರಗತಿಯ ಶೇ.30ರಷ್ಟು ಪಠ್ಯ ಕಡಿತ

October 23, 2020

ಬೆಂಗಳೂರು,ಅ.22(ಕೆಎಂಶಿ)- ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ 1ರಿಂದ 12ನೇ ತರಗತಿವರೆಗೆ ಶೇ.30ರಷ್ಟು ಪಠ್ಯವನ್ನು ಕಡಿತಗೊಳಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ಜೂನ್ ಮೊದಲ ವಾರದಿಂ ದಲೇ ಶಾಲಾ ಕಾಲೇಜುಗಳನ್ನು ಆರಂ ಭಿಸಬೇಕಿತ್ತು. ಆದರೆ ಸಾಂಕ್ರಾಮಿಕ ರೋಗ ಹಿಡಿತಕ್ಕೆ ಬಾರದ ಕಾರಣ ಇದುವರೆಗೂ ತರಗತಿಗಳನ್ನು ಆರಂಭಿಸಲು ಸಾಧ್ಯವಾ ಗಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ತೊಂದರೆ ಯಾಗಬಾರದೆಂಬ ಉದ್ದೇಶದಿಂದ ತಜ್ಞರ ವರದಿಯನ್ನು ಆಧರಿಸಿ, ದ್ವಿತೀಯ ಪಿಯುಸಿ ವರೆಗೂ ಶೇ.30ರಷ್ಟು ಪಠ್ಯವನ್ನು ಕಡಿತ ಗೊಳಿಸಲಾಗಿದೆ. ಶಾಲಾ ಕಾಲೇಜುಗಳು ಮತ್ತೆ ಎಂದು ಆರಂಭಗೊಳ್ಳುತ್ತವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಯಾವ ಪಠ್ಯವನ್ನು ಕೈಬಿಡಲಾಗಿದೆ ಎಂಬುದನ್ನು ತಾಲೂಕು ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಇಲಾಖಾ ವತಿಯಿಂದ ಮಾಹಿತಿ ರವಾನೆಯಾಗಲಿದೆ. ಅದನ್ನು ಸಂಬಂಧಪಟ್ಟ ಶಾಲೆಗಳು ಮಕ್ಕಳಿಗೆ ತಲುಪಿಸುವಂತೆ ಸರ್ಕಾರ ಸೂಚಿಸಿದೆ.

ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿತ್ತು. ಇದರಿಂದ ಶೈಕ್ಷಣಿಕ ಚಟುವಟಿಕೆಗಳಲ್ಲಿ ವ್ಯತ್ಯಯಗಳು ಉಂಟಾ ಗಿತ್ತು. ಈ ಸಮಯಕ್ಕೆ ಪ್ರಸಕ್ತ ಸಾಲಿನ ಶೈಕ್ಷ ಣಿಕ ಚಟುವಟಿಕೆಗಳು ಆರಂಭವಾಗಬೇಕಿತ್ತು. ಆದರೆ ಬದಲಾದ ಸನ್ನಿವೇಶಗಳಿಂದಾಗಿ ತರಗತಿಗಳು ಹಿಂದಿನ ವರ್ಷಗಳ ಶೈಕ್ಷಣಿಕ ವೇಳಾಪಟ್ಟಿಯಂತೆ ಆರಂಭವಾಗಿರುವು ದಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಪಾಠ ಪ್ರವಚನಗಳಲ್ಲಿ ಕುಂದು ಉಂಟಾಗಬಾರದೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ಈಗಾಗಲೇ ಪ್ರೀ ರೆಕಾರ್ಡ್ ವಿಡಿಯೋ ತರಗತಿಗಳನ್ನು ಯುಟ್ಯೂಬ್‍ನಲ್ಲಿ ಪ್ರಾರಂಭಿಸಿದೆ. ಜೊತೆಗೆ ಕೇಂದ್ರದ ಆದೇಶದಂತೆ ಶೇ.30ರಷ್ಟು ಪಠ್ಯವನ್ನು ಕಡಿಮೆ ಮಾಡಿದ್ದೇವೆ ಎಂದರು. ಪದವಿ ಪೂರ್ವ ಶಿಕ್ಷಣ ಇಲಾಖೆಯು ಪಠ್ಯವಸ್ತು ಕಡಿತ ಮಾಡಲು ಕ್ರಮ ತೆಗೆದುಕೊಂಡಿದೆ. ಸಂಗೀತ ವಿಭಾಗ ಹೊರತುಪಡಿಸಿ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳ ಪಠ್ಯವನ್ನು ಸಿಬಿಎಸ್‍ಇ ಶಿಕ್ಷಣ ಮಂಡಳಿ ನಿಗದಿಪಡಿಸಿದಂತೆ ಯಥಾವತ್ತಾಗಿ ಅಳವಡಿಸಿಕೊಂಡಿದೆ. ಆದರೆ ಉಳಿದ ವಿಷಯಗಳಲ್ಲಿ ಇಲಾಖೆಯು ಪಠ್ಯಪುಸ್ತಕ ರಚನಾ ಸಮಿತಿ ಹಾಗೂ ಪರಿಷ್ಕರಣಾ ಸಮಿತಿ ಸದಸ್ಯರು ನೀಡಿರುವ ಶಿಫಾರಸ್ಸಿನಂತೆ ಶೇ.30ರಷ್ಟು ಪಠ್ಯ ಕಡಿತ ಮಾಡಲಾಗಿದೆ.

Translate »