ಈರುಳ್ಳಿ; ದರ ಕೇಳಿದರೇ ಕಣ್ಣೀರು!
ಮೈಸೂರು

ಈರುಳ್ಳಿ; ದರ ಕೇಳಿದರೇ ಕಣ್ಣೀರು!

October 23, 2020

ಮೈಸೂರು,ಅ.22(ಪಿಎಂ)- ಮೈಸೂ ರಿನ ಮಾರುಕಟ್ಟೆ, ದಿನಸಿ-ತರಕಾರಿ ಅಂಗಡಿಗಳಲ್ಲಿ ಈರುಳ್ಳಿ ದರ ಕೆಜಿಗೆ 100 ರೂ. ಗಡಿ ದಾಟಿದೆ. ಈರುಳ್ಳಿ ಹಚ್ಚಿ ದರೆ ಅಲ್ಲ, ಬೆಲೆ ಕೇಳಿದರೇ ಕಣ್ಣೀರಿ ಡುವ ಸನ್ನಿವೇಶ ಬಂದೊದಗಿದೆ!

ಹೆಚ್ಚು ಈರುಳ್ಳಿ ಬೆಳೆಯುವ ಮಹಾ ರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಬೆಳೆಗೆ ಹಾನಿಯಾದ ಪರಿಣಾಮ ಪೂರೈಕೆಯಲ್ಲಿ ಭಾರೀ ಇಳಿಕೆ ಯಾಗಿದೆ. ಈ ಹಿನ್ನೆಲೆಯಲ್ಲಿ ಕೆಜಿ ಈರುಳ್ಳಿ ಬೆಲೆ ಶತಕ ಭಾರಿಸಿ ಮುನ್ನುಗ್ಗುತ್ತಿದೆ. ದೇವರಾಜ ಮಾರುಕಟ್ಟೆ ಈರುಳ್ಳಿ ವ್ಯಾಪಾ ರಸ್ಥರ ಪ್ರಕಾರ ನವೆಂಬರ್-ಡಿಸೆಂಬರ್ ವರೆಗೂ ಈರುಳ್ಳಿ ಬೆಲೆ ಗಗನಮುಖಿಯಾಗೇ ಇರಲಿದೆ. ನಗರದಲ್ಲಿ ಮಂಗಳವಾರ ಚಿಲ್ಲರೆ ಮಾರಾಟದಲ್ಲಿ ಹಳೆಈರುಳ್ಳಿ ಕೆಜಿಗೆ 90 ರೂ. ಇದ್ದರೆ, ಹೊಸ ಈರುಳ್ಳಿ 75 ರಿಂದ 80 ರೂ. ದರ ಕಾಯ್ದುಕೊಂ ಡಿತ್ತು. ಆದರೆ ಗುರುವಾರ ಕೆಜಿ ಹಳೆ ಈರುಳ್ಳಿ 100ರಿಂದ 120 ರೂ.ಗೆ ಏರಿಕೆ ಕಂಡಿದ್ದರೆ, ಹೊಸ ಈರುಳ್ಳಿ 80ರಿಂದ 90 ರೂ.ಗೆ ದರ ಹೆಚ್ಚಳವಾಗಿದೆ. ಮಹಾ ರಾಷ್ಟ್ರದಲ್ಲಿ ಮಳೆಯ ಪರಿಣಾಮ ಬೆಳೆದಿದ್ದ ಈರುಳ್ಳಿ ನೀರು ಕುಡಿದು ಬಹುತೇಕ ನಾಶ ವಾಗಿದೆ. ಉಳಿದಿದ್ದ ಅಲ್ಪಸ್ವಲ್ಪ ಈರುಳ್ಳಿ ಮಾತ್ರವೇ ಪೂರೈಕೆ ಆಗುತ್ತಿದ್ದು, ಬೆಲೆ ಹೆಚ್ಚಳಗೊಂಡಿದೆ ಎಂದು ಈರುಳ್ಳಿ ವ್ಯಾಪಾರಸ್ಥರು ಪ್ರತಿಕ್ರಿಯಿಸಿದ್ದಾರೆ.

ಮಾರುಕಟ್ಟೆಯ ಈರುಳ್ಳಿ ವ್ಯಾಪಾರಿ ಜಿ.ಆನಂದ್ `ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿ, ಬಂಡಿಪಾಳ್ಯದ ಎಪಿ ಎಂಸಿಯಲ್ಲಿ ಹೊಸ ಈರುಳ್ಳಿ ಕ್ವಿಂಟಾಲ್‍ಗೆ ಏಳೂವರೆಯಿಂದ 8 ಸಾವಿರ ರೂ.ವ ರೆಗೆ ಇದ್ದರೆ, ಹಳೇ ಈರುಳ್ಳಿ ಕ್ವಿಂಟಾಲ್‍ಗೆ 9ರಿಂದ 10 ಸಾವಿರಕ್ಕೆ ಏರಿಕೆಯಾಗಿದೆ. ವರ್ಷಕ್ಕೆ 10 ತಿಂಗಳು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಈರುಳ್ಳಿ ರಫ್ತು ಆಗುತ್ತದೆ. ಅಲ್ಲೀಗ ನೆರೆ ಹಾವಳಿ ತಲೆದೋರಿರುವುದರಿಂದ ಮುಂದಿನ 2 ತಿಂಗಳು ಬೆಲೆ ಹೆಚ್ಚೇ ಇರುವ ಸಾಧ್ಯತೆ ಇದೆ ಎಂದರು.

 

 

Translate »