ರಾಜ್ಯದಲ್ಲಿ ಇನ್ನೂ 36 ಲಕ್ಷ ಕುಟುಂಬಕ್ಕೆ ಶಾಶ್ವತ ಸೂರಿಲ್ಲ: ಸರ್ಕಾರ ಘೋಷಣೆ
ಮೈಸೂರು

ರಾಜ್ಯದಲ್ಲಿ ಇನ್ನೂ 36 ಲಕ್ಷ ಕುಟುಂಬಕ್ಕೆ ಶಾಶ್ವತ ಸೂರಿಲ್ಲ: ಸರ್ಕಾರ ಘೋಷಣೆ

March 10, 2020

ಬೆಂಗಳೂರು, ಮಾ.9(ಕೆಎಂಶಿ)- ರಾಜ್ಯ ದಲ್ಲಿ ಇನ್ನೂ 36 ಲಕ್ಷ ಕುಟುಂಬಗಳಿಗೆ ಸೂರಿಲ್ಲವೆಂದು ಸರ್ಕಾರವೇ ವಿಧಾನಸಭೆ ಯಲ್ಲಿ ಘೋಷಣೆ ಮಾಡಿದೆ.

ಪ್ರಶ್ನೋತ್ತರ ವೇಳೆಯಲ್ಲಿ ಎನ್.ಎ. ಹ್ಯಾರಿಸ್ ಪ್ರಸ್ತಾವಕ್ಕೆ ಉತ್ತರಿಸಿರುವ ವಸತಿ ಸಚಿವ ವಿ.ಸೋಮಣ್ಣ, ಸರ್ಕಾರ ನಡೆಸಿರುವ ಇತ್ತೀಚಿನ ಸಮೀಕ್ಷೆಯಿಂದ ಈ ಅಂಶ ಬೆಳಕಿಗೆ ಬಂದಿದೆ ಎಂದಿದ್ದಾರೆ. ರಾಜ್ಯದಲ್ಲಿ 6 ವಸತಿ ಯೋಜನೆಗಳಿದ್ದು ಎರಡು ನಿವೇ ಶನ ಯೋಜನೆಗಳು ಇದೆ.ಬಸವ, ಅಂಬೇ ಡ್ಕರ್, ವಾಜಪೇಯಿ, ದೇವರಾಜ ಅರಸು, ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಹಾಗೂ ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆಗಳು ವಸತಿ ಯೋಜನೆ ಗಳಾದರೆ, ಇಂದಿರಾ ಗ್ರಾಮೀಣ ವಸತಿ ನಿವೇಶನ ಹಾಗೂ ವಾಜಪೇಯಿ ನಗರ ನಿವೇಶನ ಯೋಜನೆಗಳು ನಿವೇಶನ ರಹಿ ತರನ್ನು ಗುರುತಿಸುತ್ತವೆ. ಯೋಜನೆಗಳ ಅಡಿ ಯಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮನೆ, ನಿವೇಶನ ಹೊಂದದ ವರ ಸಂಖ್ಯೆ 36.69 ಲಕ್ಷದಷ್ಟಿದೆ. ಕಳೆದ 3 ವರ್ಷಗಳಲ್ಲಿ ವಸತಿ ಯೋಜನೆಗಳ ಅನು ಷ್ಠಾನಕ್ಕಾಗಿ ಕೇಂದ್ರ ಸರ್ಕಾರ 2,851 ಕೋಟಿ ರೂ.ಗಳನ್ನು ಒದಗಿಸಿದ್ದು ಇದರಡಿ, 9 ಲಕ್ಷಕ್ಕೂ ಹೆಚ್ಚು ಮಂದಿಗೆ ವಿವಿಧ ವಸತಿ ಯೋಜನೆ ಗಳಲ್ಲಿ ಮನೆ ಒದಗಿಸಲಾಗಿದೆ. ಅದೇ ರೀತಿ 37 ಸಾವಿರಕ್ಕೂ ಅಧಿಕ ಮಂದಿಗೆ ನಿವೇಶನ ಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯ ಮತ್ತಷ್ಟು ತ್ವರಿತಗತಿಯಿಂದ ಮುಂದುವರಿಯಲಿದೆ ಎಂದು ವಿವರಿಸಿದ್ದಾರೆ.

Translate »