ಒಂದೇ ದಿನ 37.45 ಲಕ್ಷ ತೆರಿಗೆ ಸಂಗ್ರಹ
ಮೈಸೂರು

ಒಂದೇ ದಿನ 37.45 ಲಕ್ಷ ತೆರಿಗೆ ಸಂಗ್ರಹ

October 13, 2020

ಮೈಸೂರು, ಅ.12(ಎಸ್‍ಪಿಎನ್)- ಮೈಸೂರು ನಗರ ಪಾಲಿಕೆ ಆರ್ಥಿಕ ಸುಧಾರಣೆಗೆ ಪಾಲಿಕೆ ಸದಸ್ಯರು, ಅಧಿಕಾರಿಗಳ ಜೊತೆ ಗೂಡಿ ಹಮ್ಮಿಕೊಂ ಡಿದ್ದ `ಪಾಲಿಕೆ ನಡೆ- ಜನತೆಯ ಕಡೆ’ ಅಭಿ ಯಾನದಿಂದ ಸೋಮ ವಾರ ಪಾಲಿಕೆಯ ಎಲ್ಲಾ ವಲಯಗಳಿಂದ ಒಟ್ಟಾರೆ 713 ಆಸ್ತಿ ಮಾಲೀಕ ರಿಂದ 37,45,124 ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ವಲಯ 3ರಲ್ಲಿ ಇಂದು ಒಂದೇ ದಿನ 389 ಆಸ್ತಿ ಮಾಲೀಕರಿಂದ 22,65, 926 ರೂ.ಗಳು ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಒಟ್ಟು ಎಲ್ಲಾ ವಲಯ ಗಳಿಂದ 713ಮಾಲೀಕರಿಂದ 37,45,124 ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಮೈಸೂರು ನಗರ ಪಾಲಿಕೆಯ ಕಂದಾಯ ಅಧಿಕಾರಿ ಕುಮಾರ್ ನಾಯಕ್ `ಮೈಸೂರು ಮಿತ್ರ’ನಿಗೆ  ಮಾಹಿತಿ ನೀಡಿದರು. ಮೈಸೂರು ನಗರದಲ್ಲಿ ಏಪ್ರಿಲ್ 1ರಿಂದ ಅ.9ರವರೆಗೆ 75,34,59,911 ರೂ. 1,01,040 ಆಸ್ತಿ ಮಾಲೀಕರಿಂದ ತೆರಿಗೆ ಸಂಗ್ರಹಿಸ ಲಾಗಿದೆ. ಸೋಮವಾರ ಒಂದೇ ದಿನ ವಲಯ-1ರಲ್ಲಿ 53 ಮಾಲೀಕ ರಿಂದ 1,67,657 ರೂ, ವಲಯ-2ರಲ್ಲಿ 54 ಮಾಲೀಕರಿಂದ 2,32, 781 ರೂ, ವಲಯ 3ರಲ್ಲಿ 389 ಮಾಲೀಕರಿಂದ 22,65,926ರೂ, ವಲಯ 4ರಲ್ಲಿ 34 ಮಾಲೀಕರಿಂದ 3,26,411ರೂ, ವಲಯ 5ರಲ್ಲಿ 79 ಮಾಲೀಕರಿಂದ 3,31,952 ರೂ, ವಲಯ-6ರಲ್ಲಿ 67 ಮಾಲೀಕರಿಂದ 7,02,007 ರೂ, ವಲಯ 7ರಲ್ಲಿ 72 ಮಾಲೀಕರಿಂದ 4,00,672 ರೂ, ವಲಯ 8ರಲ್ಲಿ 46 ಮಾಲೀಕರಿಂದ 1,73,457 ರೂ, ಹಾಗೂ ವಲಯ 9ರಲ್ಲಿ 50 ಮಾಲೀಕರಿಂದ 2,51,117 ರೂ. ತೆರಿಗೆ ವಸೂಲು ಮಾಡಲಾಗಿದೆ ಎಂದು ತಿಳಿಸಿದರು.

ವಲಯ 3 ಮೊದಲ ಸ್ಥಾನ: ಸೋಮವಾರ, ಮೈಸೂರು ನಗರ ಪಾಲಿಕೆಯ ವ್ಯಾಪ್ತಿಯ ವಲಯವಾರು ಆಸ್ತಿ ತೆರಿಗೆ ಸಂಗ್ರಹದಲ್ಲಿ ವಲಯ 3ರಲ್ಲಿ 389 ಆಸ್ತಿ ಮಾಲೀಕರಿಂದ 22,65,926 ರೂ, ತೆರಿಗೆ ಸಂಗ್ರಹ ವಾಗುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ವಲಯ 1ರಲ್ಲಿ 53 ಆಸ್ತಿ ಮಾಲೀಕರಿಂದ 1,67,657 ರೂ. ತೆರಿಗೆ ಸಂಗ್ರಹವಾಗುವ ಮೂಲಕ ಕೊನೆಯ ಸ್ಥಾನದಲ್ಲಿದೆ ಎಂದರು.

Translate »