ಸರ್ಕಾರ ವಿದ್ಯಾಗಮ ಕಾರ್ಯಕ್ರಮ ಮಾಡಿದ್ದು ತಪ್ಪು
ಮೈಸೂರು

ಸರ್ಕಾರ ವಿದ್ಯಾಗಮ ಕಾರ್ಯಕ್ರಮ ಮಾಡಿದ್ದು ತಪ್ಪು

October 13, 2020

ಬೆಂಗಳೂರು, ಅ. 12(ಕೆಎಂಶಿ)- ರಾಜ್ಯ ಸರ್ಕಾರ ವಿದ್ಯಾಗಮ ಕಾರ್ಯಕ್ರಮ ಮಾಡಿದ್ದು ತಪ್ಪು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಅಭಿಪ್ರಾಯವನ್ನು ಕೇಳುವುದಿಲ್ಲ. ಮಕ್ಕಳಿಗೆ ತೊಂದರೆ ಯಾಗದಂತೆ ತರಗತಿ ನಡೆಸಲು ಸರ್ಕಾರ ಮುಂದಾಗು ತ್ತಿಲ್ಲ ಎಂದು ಆರೋಪಿಸಿದರು. ಹತ್ತು ಮಕ್ಕಳಿಗೆ ಒಂದು ಬ್ಯಾಚ್‍ನಂತೆ ಪಾಠ ಮಾಡಬೇಕು, ಶಾಲೆಗೆ ಬರುವ ಮುನ್ನವೇ ಮಕ್ಕಳ ಆರೋಗ್ಯ ತಪಾಸಣೆಯಾಗಬೇಕು, ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಬೇಕು, ಈ ಬಗ್ಗೆ ತಹಶೀ ಲ್ದಾರ್ ಮತ್ತು ಸ್ಥಳೀಯ ಆಡಳಿತದ ಸಹಕಾರವನ್ನು ಪಡೆಯ ಬೇಕು. ಮೊದಲು 8ರಿಂದ 12 ತರಗತಿವರೆಗೆ ಪಾಠ ಪ್ರಾರಂಭ ಮಾಡಬೇಕು. ಆಗ ಯಾವುದೇ ತೊಂದರೆಯಾಗದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳಬಹುದು ಎಂದರು.

ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭ ದಲ್ಲಿ ಚುನಾವಣೆ ಘೋಷಣೆ ಮಾಡಬಾರದಿತ್ತು. ಅಕ್ಟೋ ಬರ್ 28ರಂದು ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಚುನಾ ವಣೆ ನಡೆಯಲಿದ್ದು, ಆ ದಿನದ ಮಟ್ಟಿಗೆ ರಜೆ ರದ್ದು ಮಾಡಬೇಕು. ಅಂದು ಶಿಕ್ಷಕರು ಮತ ಹಾಕಲು ಅನುವು ಮಾಡಿಕೊಡಬೇಕು ಎಂದು ಸಲಹೆ ಮಾಡಿದರು.

ಸರ್ಕಾರಿ ಇಲಾಖೆಯ ಎಲ್ಲಾ ನೌಕರರನ್ನು ಕೊರೊನಾ ಕೆಲಸಕ್ಕಾಗಿ ಬಳಸಿಕೊಳ್ಳಿ, ಪ್ರತಿ ಇಲಾಖೆಯ ಶೇಕಡಾವಾರು ನೌಕರರನ್ನು ಬಳಸಿಕೊಳ್ಳಬೇಕೇ ಹೊರತು ಕೇವಲ ಶಿಕ್ಷಕ ರನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದು ಅಸಮಾ ಧಾನ ವ್ಯಕ್ತಪಡಿಸಿದರು. ಜನತಾಪರಿವಾರ ಅಧಿಕಾರಕ್ಕೆ ಬಂದಾ ಗಲೆಲ್ಲ ಶಿಕ್ಷಕರ ಪರ ಕೆಲಸ ಮಾಡಿದ್ದೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಬಿಜೆಪಿ ಯವರು ಹೇಳಿದ್ದರು. ಉದ್ಯೋಗ ಕೊಡಲಿಲ್ಲ. ಶಿಕ್ಷಕರ ಅನೇಕ ಸಮಸ್ಯೆಗಳು ಬಗೆಹರಿಯದೇ ಉಳಿದಿವೆ. ತಮ್ಮ ಅವಧಿಯಲ್ಲೇ ವರ್ಗಾವಣೆ ನೀತಿಯನ್ನು ಜಾರಿಗೆ ತರಲಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಾಗ ಅನೇಕ ಶೈಕ್ಷಣಿಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದೇ ರೀತಿ ಗೋವಿಂದೇಗೌಡರು, ಬಸವರಾಜ ಹೊರಟ್ಟಿ ಅವರು ಸಚಿವರಾಗಿದ್ದಾಗ ಶಿಕ್ಷಕ ಪರ ಕೆಲಸ ಮಾಡಿದ್ದಾರೆ. ಬಿಜೆಪಿ ಅವರಿಂದ ಶಿಕ್ಷಕರಿಗೆ ಯಾವುದೇ ಒಳ್ಳೆ ಕೆಲಸ ಆಗಿಲ್ಲ ಎಂದು ಆರೋಪಿಸಿದರು. ಪಿಯುಸಿ ಉತ್ತರ ಮೌಲ್ಯ ಮಾಪ ನಕ್ಕೆ ಬಂದಿದ್ದ ಹಲವು ಉಪನ್ಯಾಸಕ ರಿಗೆ ಕೊರೊನಾ ಸೋಂಕು ಬಂದಿದೆ. ಶಿಕ್ಷಕರಿಗೆ ರಾಜ್ಯ ಸರ್ಕಾರ ಯಾವುದೇ ವಿಮಾ ಸೌಲಭ್ಯ ಕಲ್ಪಿಸಿಲ್ಲ. ಬೆಂಗಳೂರು ಶಿಕ್ಷಕರ ಕ್ಷೇತ್ರ ಜೆಡಿಎಸ್‍ನ ಭದ್ರಕೋಟೆ ಯಾಗಿದ್ದು, ನಮ್ಮಲ್ಲಿ ಇದ್ದವರೇ ಬಿಜೆಪಿಗೆ ಹೋಗಿದ್ದಾರೆ ಎಂದರು. ವಿಧಾನಪರಿಷತ್ತಿನ ನಾಲ್ಕೂ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ್ ಮಾತನಾಡಿ, ಕಾಲೇಜು ದಿನಗಳಿಂದಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. ಕೊರೊನಾ ಸಮಯದಲ್ಲಿ ರಾಜ್ಯ ಸರ್ಕಾರ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕೊರೊನಾ ಕೆಲಸದಲ್ಲಿ ತೊಡಗಿ ರುವ ಶಿಕ್ಷಕರಿಗೆ, ಪಿಯುಸಿ ಉಪನ್ಯಾಸಕರಿಗೆ ರಜೆ ಅನ್ವಯ ವಾಗಬೇಕು. ಈ ಸಂಬಂಧ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಲಾಗಿದೆ ಎಂದ ಅವರು, ಶಿಕ್ಷಕರ ಸೇವೆಗೆ ಸದಾ ಸಿದ್ಧವಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ತಮ್ಮನ್ನು ಚುನಾಯಿಸಬೇಕೆಂದು ಮನವಿ ಮಾಡಿದರು.

 

Translate »