ಹಾರಂಗಿ ಹಿನ್ನೀರಲ್ಲಿ ಬಲೆಗೆ ಬಿತ್ತು ಬರೋಬ್ಬರಿ 38 ಕೆಜಿ ಮೀನು
ಮೈಸೂರು

ಹಾರಂಗಿ ಹಿನ್ನೀರಲ್ಲಿ ಬಲೆಗೆ ಬಿತ್ತು ಬರೋಬ್ಬರಿ 38 ಕೆಜಿ ಮೀನು

May 3, 2020

ಕುಶಾಲನಗರ,ಮೇ2-ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿ ಯುವ ವೇಳೆ ಭಾರೀ ಗಾತ್ರದ ಮೀನು ಪತ್ತೆಯಾಗಿದ್ದು, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಮೀನುಗಾರಿಕೆಗೆ ಬಳಸಿದ್ದ ರಾಟೆ ಗಾಣ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ 2 ದಿನಗಳ ಹಿಂದೆ ಮಳೂರಿನ ಪ್ರವೀಶ್ ಎಂಬಾತ ಗೆಳೆಯರೊಂದಿಗೆ ಹಾರಂಗಿ ಹಿನ್ನೀರಿನಲ್ಲಿ ಸುಮಾರು 38 ಕೆಜಿ ತೂಕದ ಬೃಹತ್ ಮಹಷೀರ್ ಮೀನು ಹಿಡಿದಿ ದ್ದರು. ಈ ಬಗ್ಗೆ ಮಾಹಿತಿ ಅರಿತ ಜಿಲ್ಲಾ ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದರು. ಮುಂದಿನ ದಿನಗಳಲ್ಲಿ ಮೀನುಗಾರಿಕೆ ನಡೆಸ ಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳು ಭೇಟಿ ಸಂದರ್ಭ ಪ್ರವೀಶ್ ಇರಲಿಲ್ಲವಾದ್ದ ರಿಂದ ಲಾಕ್‍ಡೌನ್ ಹಿನ್ನೆಲೆ ಟೈಂಪಾಸ್ ಮಾಡಲು ಹೋದ ಸಂದರ್ಭ ಗಾಣಕ್ಕೆ ಮೀನು ಸಿಕ್ಕಿದೆ. ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಪ್ರವೀಶ್ ಪೆÇೀಷಕರು ತಿಳಿಸಿದರು. ಪ್ರವೀಶ್ ಮೀನುಗಾರಿಕಾ ಕಚೇರಿಗೆ ಬಂದು ಮುಂದೆ ಈ ರೀತಿ ತಪ್ಪು ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡುವಂತೆ ಸೂಚನೆ ನೀಡಿದ್ದಾರೆ.

ಕಾವೇರಿ ಮೀನುಗಾರರ ಸಹಕಾರ ಸಂಘ: ಹಾರಂಗಿ ಜಲಾ ಶಯದಲ್ಲಿ ಮೀನು ಗಾರಿಕೆ ನಡೆಸಲು ಸಂಘವು ಟೆಂಡರ್ ಪಡೆದಿದೆ. ಆದರೆ ಅಕ್ರಮವಾಗಿ ಮೀನುಗಾರಿಕೆ ನಡೆಸಿ ಮೀನು ಹಿಡಿದಿರುವ ಪ್ರವೀಶ್ ವಿರುದ್ಧ ಪೆÇಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ. ಈ ಸಂದರ್ಭ ಸೋಮವಾರಪೇಟೆ ತಾಲೂಕಿನ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದ ಅಧಿಕಾರಿ ಎಸ್.ಎಂ.ಸಚಿನ್, ಕ್ಷೇತ್ರಪಾಲಕರಾದ ಮಹಾದೇವ, ಜಗದೀಶ್ ಇದ್ದರು.

Translate »