ಮೈಸೂರು, ಮೇ2 (ಆರ್‍ಕೆಬಿ)- ಕೊರೊನಾ ವಾರಿಯರ್ಸ್ ರೀತಿಯಲ್ಲಿಯೇ ಮೈಸೂರಿನ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಪೌರಕಾರ್ಮಿಕರಿಗಾಗಿ 5 ಸಾವಿರ ಮಾಸ್ಕ್, 50 ಲೀ. ಸ್ಯಾನಿಟೈಸರ್ ಅನ್ನು ಬಿಜೆಪಿ ರೈತ ಮುಖಂಡ ಮಲ್ಲೇಶ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಮೂಲಕ ಮೈಸೂರು ನಗರಪಾಲಿಕೆಗೆ ನೀಡಿದರು. ಸಚಿವ ಎಸ್.ಟಿ.ಸೋಮಶೇಖರ್ ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಮೇಯರ್ ತಸ್ನೀಂ ಮತ್ತು ಉಪ ಮೇಯರ್ ಸಿ.ಶ್ರೀಧರ್ ಅವರಿಗೆ ಶನಿವಾರ ಹಸ್ತಾಂತರಿಸಿದರು. ಕೊರೊನಾ ಸೋಂಕಿನ ಭೀತಿ ನಡುವೆಯೂ ಜೀವ ಒತ್ತೆ ಇಟ್ಟು ನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಉಚಿತವಾಗಿ ನೀಡಿದ್ದಾಗಿ ಬಿಜೆಪಿ ರೈತ ಮುಖಂಡ ಮಲ್ಲೇಶ್ ತಿಳಿಸಿದರು. ಈ ಸಂದರ್ಭ ಸಿನರ್ಜಿ ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಟ್ ಪ್ರೈ.ಲಿ.ನ ಹಿಂದುಜಾ ಫೌಂಡೇಷನ್‍ನ ದಿಲೀಪ್ ಸತ್ಯ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಇನ್ನಿತರರಿದ್ದರು.
