ಭಾರತೀಯ ಭಾಷಾ ಸಂಸ್ಥಾನದಲ್ಲಿ 3ನೇ ಹಂತದ ಕನ್ನಡ ಆನ್‍ಲೈನ್ ಕೋರ್ಸ್ ಕಾರ್ಯಾಗಾರಕ್ಕೆ ಚಾಲನೆ
ಮೈಸೂರು

ಭಾರತೀಯ ಭಾಷಾ ಸಂಸ್ಥಾನದಲ್ಲಿ 3ನೇ ಹಂತದ ಕನ್ನಡ ಆನ್‍ಲೈನ್ ಕೋರ್ಸ್ ಕಾರ್ಯಾಗಾರಕ್ಕೆ ಚಾಲನೆ

February 23, 2021

ಮೈಸೂರು, ಫೆ.22(ಆರ್‍ಕೆಬಿ)- ಮೈಸೂ ರಿನ ಭಾರತೀಯ ಭಾಷಾ ಸಂಸ್ಥಾನದ ಶೈಕ್ಷ ಣಿಕ ತಂತ್ರಜ್ಞಾನ ಘಟಕದ (ಇಟಿಯು) ವತಿಯಿಂದ ಕನ್ನಡದ 12 ವಾರಗಳ ಮೂಲ ಆನ್‍ಲೈನ್ ಕೋರ್ಸ್‍ಗೆ ಸಾಮಗ್ರಿಗಳನ್ನು ಅಂತಿಮಗೊಳಿಸುವ 5 ದಿನಗಳ ಕಾರ್ಯಾ ಗಾರಕ್ಕೆ ಸೋಮವಾರ ಚಾಲನೆ ನೀಡಲಾ ಯಿತು. ಶಿಕ್ಷಣ ಸಚಿವಾಲಯದ SWಂಙಂಒ ವೇದಿಕೆಯಡಿ ಈ ಕೋರ್ಸ್ ಆಯೋಜಿಸ ಲಾಗಿದ್ದು. ಸ್ಥಳೀಯರಲ್ಲದವರಿಗೆ ಕನ್ನಡವನ್ನು ಕಲಿಸಲು ಕೋರ್ಸ್ ಅನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತೀಯ ಭಾಷಾ ಸಂಸ್ಥಾನದ ಪ್ರಾಧ್ಯಾಪಕರೂ ಆದ ಉಪ ನಿರ್ದೇಶಕ ಪೆÇ್ರ.ಪಿ.ಪೆರುಮಾಳ್‍ಸಾಮಿ ಉದ್ಘಾ ಟನೆ ನೆರವೇರಿಸಿ ಮಾತನಾಡಿ, ಕಾರ್ಯಾ ಗಾರದಲ್ಲಿ ತಜ್ಞರು ಪೂರ್ಣಗೊಳಿಸಬೇಕಾದ ಕಾರ್ಯಗಳ ಬಗ್ಗೆ ತಿಳಿಸಿದರು. ನಿಗದಿತ ಸಮಯದೊಳಗೆ ಉದ್ದೇಶಿತ ಪಠ್ಯ ಸಾಮಗ್ರಿ ಗಳನ್ನು ಅಂತಿಮಗೊಳಿಸುವಂತೆ ಸಲಹೆ ನೀಡಿದರು. ಶೈಕ್ಷಣಿಕ ತಂತ್ರಜ್ಞಾನ ಘಟಕದ ಪ್ರಭಾರ ಅಧಿಕಾರಿ ಡಾ.ಪಂಕಜ್ ದ್ವಿವೇದಿ ಕಾರ್ಯಾಗಾರದ ಉದ್ದೇಶಗಳನ್ನು ತಿಳಿಸಿ, ಕೇಂದ್ರ ಸರ್ಕಾರದ ‘ವೈವಿಧ್ಯತೆಯಲ್ಲಿ ಏಕತೆ’ ಮತ್ತು ‘ಏಕ್ ಭಾರತ್ ಶ್ರೇಷ್ಟ ಭಾರತ್’ ನಂತಹ ಯೋಜನೆಗಳನ್ನು ಸಾಕಾರಗೊಳಿ ಸಲು ಬೆಂಬಲ ನೀಡುತ್ತಿರುವ ವಿಷಯ ತಜ್ಞರ ಕಾರ್ಯವನ್ನು ಶ್ಲಾಘಿಸಿದರು.

ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪೆÇ್ರ.ಎ.ಮುರಿಗೆಪ್ಪ, ನಿವೃತ್ತ ಪ್ರಾಧ್ಯಾಪಕ ಪೆÇ್ರ.ಸಿ.ನಾಗಣ್ಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಡಾ.ಬಿ.ಕೆ. ರವೀಂದ್ರನಾಥ್, ಅಂಕಣಕಾರ ಮಂಜು ನಾಥ ಕೊಳ್ಳೇಗಾಲ, ಕಾರ್ಯಾಗಾರದ ಆಹ್ವಾನಿತ ತಜ್ಞರಾಗಿದ್ದಾರೆ. ಭಾರತೀಯ ಭಾಷಾ ಸಂಸ್ಥಾನದ ಸಂಪನ್ಮೂಲ ವ್ಯಕ್ತಿ ಗಳಾಗಿ ಡಾ.ವಿಜಯಲಕ್ಷ್ಮಿ ಎ.ಪಾಟೀಲ್, ಡಾ.ಆರ್. ಶಕುಂತಲಾ, ಬಿ.ಆರ್.ಜ್ಞಾನಮೂರ್ತಿ, ಡಾ. ಸಣ್ಣಪಾಪಯ್ಯ, ಡಾ.ಮಂಜುನಾಥ್, ಕೆ.ಕೆ. ಪ್ರದೀಪ್ ಇನ್ನಿತರರು ಉಪಸ್ಥಿತರಿದ್ದರು.

 

 

Translate »