ಮೈಸೂರು ಸೇರಿದಂತೆ ರಾಜ್ಯದ 9 ಮೃಗಾಲಯಗಳಿಗೆ ಮುಂಬರುವ ಬಜೆಟ್‍ನಲ್ಲಿ ಸಿಎಂ ಅನುದಾನದ ಭರವಸೆ
ಮೈಸೂರು

ಮೈಸೂರು ಸೇರಿದಂತೆ ರಾಜ್ಯದ 9 ಮೃಗಾಲಯಗಳಿಗೆ ಮುಂಬರುವ ಬಜೆಟ್‍ನಲ್ಲಿ ಸಿಎಂ ಅನುದಾನದ ಭರವಸೆ

February 23, 2021

ಮೈಸೂರು,ಫೆ.22(ಎಂಟಿವೈ)-ಮೈಸೂರಿನ ಚಾಮ ರಾಜೇಂದ್ರ ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾ ಲಯಗಳ ಅಭಿವೃದ್ಧಿಗೆ ಈ ಬಾರಿ ಬಜೆಟ್‍ನಲ್ಲಿ ಅನುದಾನ ಕಲ್ಪಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿ ದ್ದಾರೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ತಿಳಿಸಿದ್ದಾರೆ.

ಮೈಸೂರು ಮೃಗಾಲಯದ ಸಭಾಂಗಣದಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಸಹಯೋಗದಲ್ಲಿ ಮೃಗಾ ಲಯ ಸಿಬ್ಬಂದಿಗಳಿಗೆ ಆಯೋಜಿಸಿದ್ದ ‘ಮೃಗಾಲಯ ನಿರ್ವಹಣೆಯ ಅರಿವು’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಮಾಡಲಾದ ಲಾಕ್‍ಡೌನ್‍ನಿಂ ದಾಗಿ ಪ್ರವಾಸಿಗರಿಲ್ಲದೆÀ ಮೈಸೂರು ಸೇರಿದಂತೆ ರಾಜ್ಯದ 9 ಮೃಗಾಲಯಗಳು ಆದಾಯವಿಲ್ಲದೆ ಸಂಕಷ್ಟಕ್ಕೆ ತುತ್ತಾ ಗಿದ್ದವು. ಇದನ್ನು ಮನಗಂಡು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಅವರ ಸ್ನೇಹಿತರು, ಹಿತೈಷಿಗಳಿಂದ ದೇಣಿಗೆ ಸಂಗ್ರಹಿಸಿ ಮೈಸೂರು ಮೃಗಾಲಯಕ್ಕೆ 3.50 ಕೋಟಿ ರೂ. ದೇಣಿಗೆ ನೀಡಿ ದ್ದರು. ಇದರಿಂದ ಮೃಗಾಲಯದ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿತ್ತು ಎಂದರು.

ರಾಜ್ಯದ 9 ಮೃಗಾಲಯಗಳ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸ ಲಾಗಿದೆ. ಅಲ್ಲದೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದೇನೆ. ಅರಣ್ಯ ಸಚಿವ ಅರವಿಂದ ಲಿಂಬಾವಳಿ ಮೃಗಾಲಯಕ್ಕೆ ಅನು ದಾನ ಕೊಡಿಸುವ ಭರವಸೆ ನೀಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಸಚಿವರು ಭರವಸೆ ನೀಡಿರುವುದರಿಂದ ಬಾರಿ ಅನುದಾನ ಬಿಡುಗಡೆ ಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ ಮೈಸೂರು ಮೃಗಾಲಯ, ಬನ್ನೇರುಘಟ್ಟ ಹಾಗೂ ಶಿವಮೊಗ್ಗ ಮೃಗಾಲಯಗಳಲ್ಲಿ ಮಾತ್ರ ಹುಲಿ, ಸಿಂಹಗಳಿದ್ದವು. ಕಳೆದ 3 ವರ್ಷಗಳ ಹಿಂದೆ ಹಂಪಿ ಹಾಗೂ ಗದಗದಲ್ಲಿನ ಮೃಗಾಲಯಗಳಿಗೂ ಹುಲಿ, ಸಿಂಹ ಸೇರ್ಪಡೆಗೊಳಿಸಲಾಗಿತ್ತು. ಇದೀಗ ಶೀಘ್ರ ದಲ್ಲೇ ಬೆಳಗಾವಿಯ ಮೃಗಾಲಯಕ್ಕೂ ಬನ್ನೇರುಘಟ್ಟ ದಿಂದ ಹುಲಿ-ಸಿಂಹ ಕಳುಹಿಸಲಾಗುತ್ತಿದೆ. ಯಾವುದೇ ಮೃಗಾಲಯಗಳಲ್ಲಿ ಸಸ್ಯಹಾರಿ ಪ್ರಾಣಿಗಳಂತೆ ಮಾಂಸಹಾರಿ ಪ್ರಾಣಿಗಳು ಇದ್ದಾಗ ಮಾತ್ರ ಸಮತೋಲನ ಕಾಯ್ದು ಕೊಳ್ಳುವುದರೊಂದಿಗೆ ಮೃಗಾಲಯದ ವ್ಯವಸ್ಥೆ ಉತ್ತಮ ಪಡಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹುಲಿ ಮತ್ತು ಸಿಂಹಗಳು ಇರುವ ಸ್ಥಳಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇರಬೇಕು. ವೈದ್ಯರು ಅಥವಾ ತರಬೇತಿ ಪಡೆದ ಅನಿಮಲ್ಸ್ ಕೀಪರ್ಸ್‍ಗಳನ್ನು ಹೊಂದಿರಬೇಕಾ ಗುತ್ತದೆ. ನಮ್ಮದು ಕೃಷಿ ಪ್ರಧಾನ ರಾಷ್ಟ್ರ. ಹಸು, ಕುರಿ, ಕೋಳಿ, ನಾಯಿ ಮುಂತಾದ ಪ್ರಾಣಿಗಳನ್ನು ಪೆÇೀಷಿ ಸುತ್ತೇವೆ. ಆದರೆ, ಮೃಗಾಲಯದಲ್ಲಿ ಪೋಷಿಸುತ್ತಿರುವ ಪ್ರಾಣಿಗಳು ಈ ಹಿಂದೆ ಅರಣ್ಯ ಪ್ರದೇಶದಿಂದ ಸೆರೆ ಹಿಡಿದು ತಂದಿರುವುದೇ ಆಗಿವೆ. ಅವುಗಳನ್ನು ಇದೀಗ ಮನೆಯಲ್ಲಿ ಸಾಕಿರುವ ಪ್ರಾಣಿಗಳಂತೆ ನಿರ್ವಹಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪಾಲಕರಿಗೆ ವಿಶೇಷ ತರಬೇತಿ ನೀಡುವ ಅಗತ್ಯವಿರುತ್ತದೆ. ಇದನ್ನು ಮನಗಂಡು ಮೃಗಾಲಯಗಳ ಪ್ರಾಣಿ ಪಾಲಕರು ಹಾಗೂ ಇತರೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಇದಕ್ಕೂ ಮುನ್ನ ಆನ್‍ಲೈನ್(ವರ್ಚುವಲ್) ಮೂಲಕ ಕೇಂದ್ರ ಮೃಗಾಲಯ ಪ್ರಾಧಿಕಾರದ ಉಪ ನಿರೀಕ್ಷರಾದ ಸೋನಾಲಿ ಘೋಷ್ ಮಾತನಾಡಿ, ವಿಷನ್ ಪ್ಲಾನ್‍ನಲ್ಲಿ ದೇಶದ ಎಲ್ಲಾ ಮೃಗಾ ಲಯಗಳಿಗಿಂತÀ ಮೈಸೂರು ಮೃಗಾಲಯವೇ ನಂ.1 ಸ್ಥಾನದಲ್ಲಿದೆ. ಮೃಗಾಲಯ ತಂದಿರುವ ಯೋಜನೆ ಗಳು, ಪ್ರಾಣಿಗಳನ್ನು ಸಂರಕ್ಷಣೆ ಕೈಗೊಂಡಿರುವ ಕ್ರಮ ಇತರೆ ಮೃಗಾಲಯಗಳಿಗೆ ಮಾದರಿಯಾಗಿವೆ. ಕರ್ನಾಟಕದಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಹುಲಿ ಸೆರೆ ಕಾರ್ಯಾಚರಣೆ ಉತ್ತಮ ವಾಗಿ ನಡೆಸಿದ್ದಾರೆ. ಕರ್ನಾಟಕ ಮೃಗಾಲಯದ ಸಿಬ್ಬಂದಿಗಳು ವನ್ಯಜೀವಿ ಸಂರಕ್ಷಣೆ ಹಾಗೂ ಪಾಲನೆಯಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ. ತಮಗೆ ತಿಳಿದಿರುವ ಮಾಹಿತಿಯನ್ನು ಕಾರ್ಯಾಗಾರದಲ್ಲಿ ಇತರೆ ಮೃಗಾಲಯಗಳ ಸಿಬ್ಬಂದಿಗಳಿಗೂ ತಿಳಿಸು ವಂತೆ ಅವರು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ರಾಜ್ಯದ 9 ಮೃಗಾಲಯಗಳ 44 ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಗೋಕುಲ್ ಗೋವರ್ಧನ್, ಜ್ಯೋತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 

 

Translate »