ಇಂದಿನಿಂದ 3ನೇ ಹಂತದ ಕೋವಿಡ್ ಲಸಿಕೆ
ಮೈಸೂರು

ಇಂದಿನಿಂದ 3ನೇ ಹಂತದ ಕೋವಿಡ್ ಲಸಿಕೆ

March 1, 2021

ಮೈಸೂರು, ಫೆ.28(ಎಸ್‍ಬಿಡಿ)- ದೇಶಾದ್ಯಂತ ಸೋಮ ವಾರ(ಮಾ.1)ದಿಂದ ಮೂರನೇ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ಆರಂಭವಾಗಲಿದ್ದು, ಮೈಸೂರಿನ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ನಿಗದಿತ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು.

ಮೈಸೂರು ವೈದ್ಯಕೀಯ ಮಹಾವಿದ್ಯಾಲಯ(ಟ್ರಾಮಾ ಸೆಂಟರ್), ಜಿಲ್ಲಾ ಆಸ್ಪತ್ರೆಗಳು, ತಾಲೂಕು ಸಾರ್ವಜನಿಕ ಆಸ್ಪತ್ರೆಗಳು, ಖಾಸಗಿ ಸ್ವಾಮ್ಯದ ಜೆಎಸ್‍ಎಸ್ ಆಸ್ಪತ್ರೆ ಹಾಗೂ ಅಪೊಲೋ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕಾ ಶಿಬಿರ ನಡೆಯಲಿದೆ. ಮಾ.1ರಿಂದ 6ರವರೆಗೆ ಆನ್‍ಲೈನ್ ಮೂಲಕ ನೋಂದಾವಣಿಯಾಗಿರುವ ಹಾಗೂ ಲಸಿಕಾ ಶಿಬಿರದಲ್ಲಿ ನೋಂದಾಯಿಸಿಕೊಂಡಿರುವ ಫಲಾನು ಭವಿಗಳಿಗೆ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದೆ. ನಂತರದಲ್ಲಿ ಆದ್ಯತೆ ಮೇರೆಗೆ ಲಸಿಕಾ ಶಿಬಿರ ಆಯೋ ಜಿಸಿ, ಇತರೆ ನೋಂದಾವಣಿ ವಿಧಾನಗಳನ್ನು ಅನುಷ್ಠಾನ ಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಮುಂದಿನ ದಿನಗಳಲ್ಲಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ವಾರದ ಎಲ್ಲಾ ದಿನಗಳಲ್ಲೂ ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಶಿಬಿರ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಪ್ರತಿ ಲಸಿಕಾ ಶಿಬಿರಗಳಿಗೆ 200 ಫಲಾ ನುಭವಿಗಳ ಗುರಿ ನೀಡಲಾಗುವುದು. ಮೊದಲ ದಿನ (ಮಾ.1) ಮಾತ್ರ ಮಧ್ಯಾಹ್ನ 12ರಿಂದ ಲಸಿಕಾ ಕಾರ್ಯ ಕ್ರಮ ಆರಂಭವಾಗಲಿದ್ದು, ನಂತರದ ದಿನಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಲಸಿಕೆ ನೀಡಲಾಗುತ್ತದೆ.

ಲಸಿಕೆ ಶುಲ್ಕ: ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಯನ್ನು ಉಚಿತವಾಗಿ ನೀಡಲಾಗುವುದು. ಖಾಸಗಿ ಆಸ್ಪತ್ರೆ ಗಳಲ್ಲಿ ಲಸಿಕೆ ಪಡೆಯುವ ಫಲಾನುಭವಿಗಳಿಗೆ 100 ರೂ. ಸೇವಾ ಶುಲ್ಕ ಸೇರಿ ಒಂದು ಡೋಸ್ ಲಸಿಕೆಗೆ ಒಟ್ಟು 250 ರೂ. ನಿಗದಿಪಡಿಸಲಾಗಿದೆ. ನಿಗದಿತ ದಿನಗಳ ಅಂತರದಲ್ಲಿ 2ನೇ ಡೋಸ್ ಪಡೆಯುವಾಗಲೂ 250 ರೂ. ಪಾವತಿಸಬೇಕಾಗುತ್ತದೆ.

ಯಾರು ಲಸಿಕೆ ಪಡೆಯಬಹುದು: 3ನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲರೂ ಕೋವಿಡ್ ಲಸಿಕೆ ಪಡೆಯಲು ಅವಕಾಶವಿದೆ. ಅಲ್ಲದೆ ಹೃದಯ ಸಂಬಂಧಿ ಸಮಸ್ಯೆ, ತೀವ್ರ ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಗೆ ಒಟ್ಟಿಗೆ ಚಿಕಿತ್ಸೆ ಪಡೆಯುತ್ತಿರುವವರು, ಪಾಶ್ರ್ವ ವಾಯು ಸಂಬಂಧಿತ ಕಾಯಿಲೆ, ದೀರ್ಘಕಾಲದಿಂದ ಮಧುಮೇಹದಿಂದ ಬಳಲುತ್ತಿರುವುದು, ಕಿಡ್ನಿ, ಲಿವರ್ ಇತರೆ ಕ್ಯಾನ್ಸರ್, ಹೆಚ್‍ಐವಿ ಸೋಂಕಿತರು ಸೇರಿದಂತೆ ಗುರುತಿಸಲಾಗಿರುವ 20 ರೀತಿಯ ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವ 45ರಿಂದ 59ನೇ ವರ್ಷದೊಳಗಿನ ವಯಸ್ಸಿನವ ರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ. ಜೊತೆಗೆ ಮೊದಲ ಹಾಗೂ 2ನೇ ಹಂತದಲ್ಲಿ ಲಸಿಕೆ ಪಡೆಯ ಬೇಕಿದ್ದ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯ ಕರ್ತರೂ ನಿಗದಿತ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದು.

ನೋಂದಣಿ ವಿವರ: ಕೋವಿಡ್ ಲಸಿಕೆ ಪಡೆಯುವವರು ಕೋವಿನ್(ಅಔWIಓ) 2.0 ಅಪ್ಲಿಕೇಷನ್, ಆರೋಗ್ಯ ಸೇತು ಮತ್ತು ಇತರೆ ಅಪ್ಲಿಕೇಷನ್ ಮೂಲಕ ನೋಂದಾವಣಿ ಮಾಡಿಕೊಳ್ಳಬಹುದು. ಇಲ್ಲವೇ ಈಗಾಗಲೇ ಗುರುತಿಸ ಲಾಗಿರುವ ಲಸಿಕಾ ಕೇಂದ್ರಗಳಿಗೆ ತೆರಳಿ ಸ್ಥಳದಲ್ಲೇ ನೋಂದಾ ವಣಿ ಮಾಡಿಕೊಳ್ಳಬಹುದು. ಆಶಾ ಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಈಗಾಗಲೇ ಗುರುತಿಸಿರುವ ಫಲಾನುಭವಿ ಗಳನ್ನು ಲಸಿಕಾ ಶಿಬಿರಗಳಿಗೆ ಕರೆತಂದು ನೋಂದಣಿ ಮಾಡಿಸಿ, ಲಸಿಕೆ ಪಡೆಯಲು ಸಹಾಯ ಮಾಡುತ್ತಾರೆ. ಲಸಿಕೆ ಪಡೆದ ನಂತರ ಎಲ್ಲಾ ಫಲಾನುಭವಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಮೂಲಕ ಲಿಂಕ್ ಆಧಾರಿತ ಲಸಿಕಾ ಪ್ರಮಾಣ ಪತ್ರ ರವಾನೆಯಾಗುತ್ತದೆ. ನಂತರ ಫಲಾನು ಭವಿಗಳು ತಮ್ಮ ಲಸಿಕೆ ಪ್ರಮಾಣಪತ್ರವನ್ನು ಪಡೆದು ಕೊಳ್ಳಬಹುದು ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಹಿಂದಿನ ಸಾಧನೆ: ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ, ಖಾಸಗಿ ಆರೋಗ್ಯ ಸಂಸ್ಥೆಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆರೋಗ್ಯ ಕಾರ್ಯ ಕರ್ತೆರಿಗೆ ಲಸಿಕೆ ನೀಡಲಾಗಿದ್ದು, ಶೇ.93ರಷ್ಟು ಸಾಧನೆ ಯಾಗಿದೆ, 2ನೇ ಹಂತದಲ್ಲಿ ಮುಂಚೂಣಿ ಕಾರ್ಯ ಕರ್ತರಾಗಿರುವ ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್, ನಗರಾಭಿವೃದ್ಧಿ ಹಾಗೂ ಪೊಲೀಸ್ (ಗೃಹ) ಇಲಾಖೆ ಸಿಬ್ಬಂದಿಗೆ ಲಸಿಕೆ ನೀಡುವ ಕಾರ್ಯಕ್ರಮ ದಲ್ಲಿ ಶೇ.50ರಷ್ಟು ಸಾಧಿಸಲಾಗಿದೆ. ಇದೀಗ 3ನೇ ಹಂತದ ಕಾರ್ಯಕ್ರಮ ಆರಂಭವಾಗಿದ್ದು, ಸಾರ್ವಜನಿ ಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

Translate »