ರಾಜ್ಯದಲ್ಲಿ ಒಂದೇ ದಿನ 42 ಮಂದಿಗೆ ಸೋಂಕು ಪತ್ತೆ
ಮೈಸೂರು

ರಾಜ್ಯದಲ್ಲಿ ಒಂದೇ ದಿನ 42 ಮಂದಿಗೆ ಸೋಂಕು ಪತ್ತೆ

May 10, 2020

ಬೆಂಗಳೂರು, ಮೇ 9-ರಾಜ್ಯದಲ್ಲಿ ಕಳೆದ 5 ದಿನಗಳಿಂದಲೂ ಕೊರೊನಾ ಸೋಂಕಿ ತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಶನಿವಾರ 19 ಮಹಿಳೆಯರು, ಇಬ್ಬರು ಮಕ್ಕಳು ಸೇರಿ 42 ಮಂದಿಗೆ ಸೋಂಕು ಪತ್ತೆಯಾಗಿದೆ. 2 ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆ ಯಲ್ಲಿ ಕೊರೊನಾ ಸೊಂಕಿತ ಮಹಿಳೆ ಸಾವ ನ್ನಪ್ಪಿರುವುದು ಇಂದು ಬೆಳಕಿಗೆ ಬಂದಿದೆ. ಸೋಂಕಿತರ ಸಂಖ್ಯೆ 795ಕ್ಕೆ ಏರಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲಿದ್ದು, ಇಂದು ಒಂದೂವರೆ ವರ್ಷದ ಬಾಲಕ ಹಾಗೂ ಎರಡೂವರೆ ವರ್ಷದ ಬಾಲಕಿ ಸೇರಿ 8 ಮಂದಿಗೆ ಸೋಂಕು ಪತ್ತೆಯಾ ಗಿದೆ. ಈ ಜಿಲ್ಲೆಯ ಭಟ್ಕಳದಲ್ಲಿ ಸೋಂಕಿ ತರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿ ನಲ್ಲಿಂದು 12 ಕೊರೊನಾ ಪ್ರಕರಣ ಪತ್ತೆಯಾ ಗಿದ್ದು, ಸೋಂಕಿತರ ಸಂಖ್ಯೆ 175ಕ್ಕೆ ಏರಿದೆ. 86 ಮಂದಿ ಗುಣಮುಖರಾಗಿದ್ದು, 82 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ದಾವಣಗೆ ಯಲ್ಲಿ 6, ತುಮಕೂರಿನಲ್ಲಿ 4, ಬೀದರ್, ದಕ್ಷಿಣಕನ್ನಡ, ಚಿತ್ರದುರ್ಗದಲ್ಲಿ ತಲಾ 3, ಚಿಕ್ಕಬಳ್ಳಾಪುರ ಮತ್ತು ವಿಜಯಪುರದಲ್ಲಿ ತಲಾ ಓರ್ವರಿಗೆ ಸೋಂಕು ಪತ್ತೆಯಾಗಿದೆ. ಇಂದು ಮೈಸೂರಲ್ಲಿ ಓರ್ವ ಹಾಗೂ ಮಂಡ್ಯ ದಲ್ಲಿ ಮೂವರು ಸೇರಿದಂತೆ ಒಟ್ಟು 10 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟಾರೆ 386 ಮಂದಿ ಗುಣಮುಖರಾಗುತ್ತಿದ್ದಾರೆ.

Translate »