ನೌಕರರ ವರ್ಗಾವರ್ಗಿಗೂ ಕುತ್ತಾದ ಕೊರೊನಾ ಮಾರಿ
ಮೈಸೂರು

ನೌಕರರ ವರ್ಗಾವರ್ಗಿಗೂ ಕುತ್ತಾದ ಕೊರೊನಾ ಮಾರಿ

May 10, 2020

ಬೆಂಗಳೂರು,ಮೇ 9(ಕೆಎಂಶಿ)- ಕೊರೊನಾ ಸಾಂಕ್ರಾ ಮಿಕ ರೋಗ ಸಾರ್ವತ್ರಿಕ ವರ್ಗಾವರ್ಗಿಗೂ ಕುತ್ತು ತಂದಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ನೌಕರರ ವರ್ಗಾವರ್ಗಿ ಮಾಡದಿರಲು ಸರ್ಕಾರ ತೀರ್ಮಾನಿಸಿದೆ. ಪ್ರಸಕ್ತ ಸಾಲಿನ ವರ್ಗಾವಣೆಗಳನ್ನು ಈ ತಿಂಗಳಲ್ಲೇ ಆರಂಭಿಸಿ, ಜೂನ್ ಮೊದಲ ವಾರದಲ್ಲಿ ಅಂತ್ಯಗೊಳಿಸಬೇಕಿತ್ತು. ಆದರೆ ಸಾಂಕ್ರಾ ಮಿಕ ರೋಗ ಮುಂದಿಟ್ಟುಕೊಂಡು ವರ್ಗಾವಣೆಯಲ್ಲಿ ತೊಡಗಿಸಿಕೊಳ್ಳುವುದು ಬೇಡ ಎಂದು ಅಧಿಕಾರಿಗಳು ನೀಡಿರುವ ಸಲಹೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಸಹಮತ ವ್ಯಕ್ತಪಡಿಸಿದ್ದಾರೆ.

ರಾಜ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಇಂತಹ ಸನ್ನಿ ವೇಶದಲ್ಲಿ ವರ್ಗಾವಣೆ ಮಾಡಿ, ಹೆಚ್ಚಿನ ಭಾರ ಹಾಕಿ ಕೊಳ್ಳುವುದು ಬೇಡ ಎಂದಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇನ್ನೂ ಆರಂಭಗೊಂಡಿಲ್ಲ. ದ್ವಿತೀಯ ಪಿಯುಸಿ ಯಲ್ಲೂ ಇನ್ನೂ ಒಂದು ಪಠ್ಯಕ್ಕೆ ಪರೀಕ್ಷೆ ನಡೆಯಬೇಕು. ಪರೀಕ್ಷೆ ಎಂದು ನಡೆಸಬೇಕೆಂಬುದರ ಬಗ್ಗೆ ನಮ್ಮಲ್ಲಿಯೇ ಸ್ಪಷ್ಟತೆ ಇಲ್ಲ. ಅದರಲ್ಲೂ ಆರೋಗ್ಯ, ಶಿಕ್ಷಣ ಸೇರಿದಂತೆ ಅನೇಕ ಇಲಾಖೆಗಳು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ನಡೆಸುತ್ತಿವೆ. ಇದು ದೀರ್ಘ ಸಮಯ ನಡೆಯುವುದಲ್ಲದೆ, ಇಂತಹ ಸನ್ನಿವೇಶದಲ್ಲಿ ಕೌನ್ಸಿಲಿಂಗ್ ನಡೆಸುವುದು ಸರಿ ಯಲ್ಲ ಎಂದಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆ ನೌಕರರನ್ನು ವರ್ಗಾವರ್ಗಿ ಮಾಡಲೇಬಾರದು. ಪೊಲೀಸ್ ಗೃಹ ಇಲಾಖೆ ಲಾಕ್‍ಡೌನ್ ಸಂದರ್ಭದಲ್ಲಿ ಕಟ್ಟು ನಿಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವ ಹಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅವರನ್ನು ವಿಚಲಿ ತರನ್ನಾಗಿ ಮಾಡುವುದು ಬೇಡ. ಹಿರಿಯ ಅಧಿಕಾರಿಗಳು ಕೋವಿಡ್-19 ಅನ್ನು ಹತ್ತಿಕ್ಕಲು ಹಗಲಿರುಳು ಶ್ರಮಿಸುತ್ತಿ ದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಬದಲಾವಣೆ ಮಾಡಿದರೆ, ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಅಗತ್ಯ ಮತ್ತು ತುರ್ತು ಸೇವೆಗಳಿಗೆ ಮಾತ್ರ ವರ್ಗಾವಣೆ ಸೀಮಿತವಿರಲಿ. ಪ್ರತಿ ವರ್ಷ ಶೇ.3ರಿಂದ 5ರಷ್ಟು ನೌಕರ ರನ್ನು ಸರ್ಕಾರ ವರ್ಗಾವಣೆ ಮಾಡುತ್ತಿತ್ತು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಕೊಂಡ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ವರ್ಗಾ ವರ್ಗಿ ಮಾಡಿದ್ದರು. ಇಂತಹ ವರ್ಗಾವರ್ಗಿ ಆರು ತಿಂಗಳು ತುಂಬುವ ಮುನ್ನವೇ ಮತ್ತೊಂದು ವರ್ಗಾ ವಣೆಗೆ ಮುಖ್ಯಮಂತ್ರಿಯವರು ಆಸಕ್ತಿ ತೋರಿಲ್ಲ.

ವೈದ್ಯಕೀಯ ವ್ಯವಸ್ಥೆ ಬಲಪಡಿಸಲು ಸರ್ಕಾರ ನಿರ್ಧಾರ
ಬೆಂಗಳೂರು, ಮೇ 9- ರಾಜ್ಯದ ನಿದ್ದೆ ಕೆಡಿಸಿರುವ ಮಹಾಮಾರಿ ಕೊರೋನಾ ವಿರುದ್ಧ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿರುವ ಸರ್ಕಾರ, ವೈದ್ಯಕೀಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ಮೃತರ ಸಂಖ್ಯೆಯನ್ನು ಇಳಿಕೆ ಮಾಡಲು ನಿರ್ಧಾರ ಕೈಗೊಂಡಿದೆ.

ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿರುವ ಸರ್ಕಾರದ ಮುಖ್ಯ ಕಾರ್ಯ ದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. ಸಭೆಯಲ್ಲಿ ಜವೈದ್ ಅಖ್ತರ್, ಪಂಕಜ್‍ಕುಮಾರ್ ಕೂಡ ಭಾಗವಿಸಿದ್ದರು.

ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸಿ, ಚಿಂತಾ ಜನಕ ಸ್ಥಿತಿಯಲ್ಲಿರುವ ರೋಗಿಗಳಿಗೆ ಶೀಘ್ರಗತಿಯಲ್ಲಿ ಚಿಕಿತ್ಸೆ ನೀಡುವ ಅಗತ್ಯವಿದೆ.

ಇದರಿಂದ ಕೊರೊನಾದಿಂದ ಸಾವನ್ನಪ್ಪುವ ಸಂಖ್ಯೆ ಕೂಡ ನಿಯಂತ್ರಣಕ್ಕೆ ಬರಲಿದೆ. ಐಸಿಯುನಲ್ಲಿರುವ ರೋಗಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅಗತ್ಯ ಚಿಕಿತ್ಸೆಗಳನ್ನು ನೀಡಬೇಕಿದೆ. ಸಿಸಿಎಸ್‍ಟಿ ತಂಡದೊಂದಿಗೆ ಮಾತುಕುತೆ ನಡೆಸಲು ಸಮಿತಿಯೊಂದನ್ನೂ ರಚನೆ ಮಾಡಲಾಗಿದೆ ಎಂದು ವಿಜಯ್ ಭಾಸ್ಕರ್ ತಿಳಿಸಿದ್ದಾರೆ. ತಂಡದಲ್ಲಿರುವ ತಜ್ಞ ವೈದ್ಯರು ಎಲ್ಲಾ ರೋಗಿಗಳಿಗೆ ಆಕ್ಸಿಮೀಟರ್ ಬಳಕೆಗೆ ಶಿಫಾರಸ್ಸು ಮಾಡಿದ್ದು, ಸಿಸಿಎಸ್‍ಟಿ ಮೂಲಕ ಎಲ್ಲಾ ರೋಗಿಗಳನ್ನು ಆಗಾಗ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಜಾವೈದ್ ಅಖ್ತರ್ ಹೇಳಿದ್ದಾರೆ. ಶ್ವಾಸಕೋಶದಲ್ಲಿ ಸಮಸ್ಯೆ ಇರುವವರು ಕೊರೋನಾ ಪರೀಕ್ಷೆಯನ್ನು ಮಾಡಿಸಿಕೊಳ್ಲಬೇಕು. ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಖಾಸಿ ಆಸ್ಪತ್ರೆಗಳಲ್ಲಿಯೂ ಪರೀಕ್ಷೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Translate »