ಏ.17, 18ರಂದು ಮೈಸೂರಿನಲ್ಲಿ 4ನೇ ರಾಷ್ಟ್ರೀಯ ವೇದಾಂಗ ಜ್ಯೋತಿಷ್ಯ ಸಮಾವೇಶ
ಮೈಸೂರು

ಏ.17, 18ರಂದು ಮೈಸೂರಿನಲ್ಲಿ 4ನೇ ರಾಷ್ಟ್ರೀಯ ವೇದಾಂಗ ಜ್ಯೋತಿಷ್ಯ ಸಮಾವೇಶ

March 18, 2021

ಮೈಸೂರು,ಮಾ.17-ವೇದ ಜ್ಯೋತಿಷ್ಯದ ಜ್ಞಾನವನ್ನು ಉತ್ತೇಜಿಸಲು ಮತ್ತು ಉಪನ್ಯಾಸಗಳು, ವಿಶೇಷ ಕೋರ್ಸ್ ಮೂಲಕ ಪ್ರಾಚೀನ ವಿಜ್ಞಾನದ ಅರಿವನ್ನು ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ 17 ಮತ್ತು 18ರಂದು ಮೈಸೂರಿನಲ್ಲಿ ರಾಷ್ಟ್ರಮಟ್ಟದ ವೇದ ಜ್ಯೋತಿಷ್ಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಶ್ರೀ ಮಾಯಕರ ಗುರುಕುಲ ಸಂಸ್ಥಾಪಕ ಡಾ. ಮೂಗೂರು ಮಧು ದೀಕ್ಷಿತ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಶ್ರೀ ಮಾಯಕರ ಗುರುಕುಲವು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಜ್ಯೋತಿಷ್ಯ ಮತ್ತು ಜ್ಯೋತಿಷ್ಯ ಬೋಧನಾ ಒಕ್ಕೂಟದ ಸಹಯೋಗದೊಂದಿಗೆ ರಾಷ್ಟ್ರೀಯ ಸಮ್ಮೇಳನದ ನಾಲ್ಕನೇ ಆವೃತ್ತಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‍ಒಯು) ಆವರಣದಲ್ಲಿರುವ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದು, ವೇದ ಜ್ಯೋತಿಷ್ಯ ನೀಡುವ ಆಳವಾದ ಆಧ್ಯಾತ್ಮಿಕ ಅಂಶಗಳನ್ನು, ಶಾಸ್ತ್ರದ ಮಹತ್ವವವನ್ನು ತಿಳಿಸುವ ಉದ್ದೇಶವನ್ನು ಸಮ್ಮೇಳನ ಹೊಂದಿದೆ.

ವೇದ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವೈವಿಧ್ಯಮಯ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡುವ ಸಮ್ಮೇಳನಕ್ಕೆ ಹೆಸರಾಂತ ಭಾಷಣಕಾರರನ್ನು ಆಹ್ವಾನಿಸಲಾಗಿದೆ. ನಾಡಿ ರಹಸ್ಯ, ಸಂಖ್ಯಾಶಾಸ್ತ್ರ, ವೈದ್ಯಕೀಯ ಜ್ಯೋತಿಷ್ಯ, ರಾಜಯೋಗ, ಸ್ವರಾಭಾನು, ದೈವ ಶಾಪ ಶಲ್ಯ ದೋಷ, ಶಂಕು ಸ್ಥಪಾನೆ ಮತ್ತು ಇತರ ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.

ಸಮಾವೇಶವನ್ನು ಏ.17ರಂದು ವಸತಿ ಸಚಿವ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದು, ಸ್ಮರಣ ಸಂಚಿಕೆಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಪ್ರಕಾಶ್ ಆರ್.ಪಾಗೋಜಿ ಬಿಡುಗಡೆ ಮಾಡಲಿ ದ್ದಾರೆ. ಪೆÇ್ರಫೆಸರ್ ಗಜೇಂದ್ರ, ಎಚ್.ಎಸ್.ರಮೇಶ್ ಹಂದನ್ಹಳ್ಳಿ ಅವರ ಸಮ್ಮುಖದಲ್ಲಿ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ.ಕೆ.ಜಿ.ಪುಟ್ಟಹೊನ್ನಯ್ಯ ವಹಿಸಲಿದ್ದಾರೆ. ಈ ಸಂದರ್ಭ ದಲ್ಲಿ ಖ್ಯಾತ ಸಂಗೀತ ಸಂಯೋಜಕ ಅರ್ಜುನ್ ಜನ್ಯಾಗೆ ಸಂಗೀತ ತಪೆÇೀನಿಧಿ ಪ್ರಶಸ್ತಿ, ಗೀತರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಅವರಿಗೆ ಸಾಹಿತ್ಯ ತಪೆÇೀನಿಧಿ ಮತ್ತು ನಟ ತಬಲಾ ನಾಣಿ ಅವರಿಗೆ ಕಲಾ ತಪೆÇೀನಿಧಿ, ಟಗರು ಸಿನಿಮಾ ಖ್ಯಾತಿಯ ರುಷಿಕ ರಾಜ್ (ಸರೋಜಾ) ಅವರಿಗೆ ಕಲಾಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ರಾಮನಾಥ ಗುಪ್ತ, ಸಾಗರ್.ಎಸ್, ಜೆ.ಇ. ಶಿವಕುಮಾರ್, ಟಿ.ಡಿ.ಶರತ್, ಸರ್ಪಭೂಷಣ್ ಸ್ವಾಮಿ, ಸುಗುಣ್ ಉಪಸ್ಥಿತರಿದ್ದರು.

Translate »