ಇಂದಿನಿಂದ 5 ದಿನ `ಬುಡಕಟ್ಟು ಸಾಹಿತ್ಯ, ಸಂಸ್ಕøತಿ ಶಿಬಿರ’
ಮೈಸೂರು

ಇಂದಿನಿಂದ 5 ದಿನ `ಬುಡಕಟ್ಟು ಸಾಹಿತ್ಯ, ಸಂಸ್ಕøತಿ ಶಿಬಿರ’

September 2, 2021

ಮೈಸೂರು, ಸೆ.1(ಆರ್‍ಕೆಬಿ)- ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಹಯೋಗದಲ್ಲಿ ‘ಗಿರಿಜನ ಉಪ ಯೋಜನೆ ಯಡಿ ಸೆ.2ರಿಂದ 6ರವರೆಗೆ `ಬುಡಕಟ್ಟು ಸಾಹಿತ್ಯ ಮತ್ತು ಸಂಸ್ಕೃತಿ’ ಶಿಬಿರ’ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧ ವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಐದು ದಿನಗಳ ಶಿಬಿರ ಎಚ್.ಡಿ.ಕೋಟೆ ತಾಲೂಕಿನ ಹೊಸಹಳ್ಳಿಯ ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರದಲ್ಲಿ ನಡೆಯಲಿದೆ. ಗುರುವಾರ (ಆ.2) ಬೆಳಗ್ಗೆ 10.30ಕ್ಕೆ ಕೇಂದ್ರ ಸರ್ಕಾರದ ಸಾಮಥ್ರ್ಯ ಅಭಿವೃದ್ಧಿ ಆಯೋ ಗದ (ಮಾನವ ಸಂಪನ್ಮೂಲ) ಸದಸ್ಯ ಡಾ.ಆರ್. ಬಾಲಸುಬ್ರಹ್ಮಣ್ಯಂ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ.

ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್.ಕರಿಯಪ್ಪ, ವಿವೇಕಾನಂದ ಭಾರ ತೀಯ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ರೇಖಾ ಷಣ್ಮುಖ, ಸದಸ್ಯ ಸಂಚಾಲಕ ಸಂತೋಷ್ ತಮ್ಮಯ್ಯ ಉಪಸ್ಥಿತರಿರುವರು. ತಾವು ಅಧ್ಯಕ್ಷತೆ ವಹಿಸುತ್ತಿರುವು ದಾಗಿ ತಿಳಿಸಿದರು. ಕಮ್ಮಟದ ನಿರ್ದೇಶಕರಾಗಿ ಪ್ರೊ.ನೀಲ ಗಿರಿ ತಳವಾರ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಮಧ್ಯಾಹ್ನ 12ಕ್ಕೆ ಮೊದಲ ಗೋಷ್ಠಿಯಲ್ಲಿ `ಬುಡಕಟ್ಟು ಸಮುದಾಯ: ಸ್ವರೂಪ, ಲಕ್ಷಣ’ ಕುರಿತು ಡಾ. ಹಿ.ಚಿ.ಬೋರಲಿಂಯ್ಯ, ಮಧ್ಯಾಹ್ನ 2.30ಕ್ಕೆ 2ನೇ ಗೋಷ್ಠಿಯಲ್ಲಿ ಬುಡಕಟ್ಟು ಅಧ್ಯಯನ ಮತ್ತು ಸಂಶೋ ಧನೆ’ ಕುರಿತು ಡಾ.ನಾಗ ಎಚ್.ಹುಬ್ಳಿ, ಸಂಜೆ 4 ಗಂಟೆಗೆ `ಕರ್ನಾಟಕ ಬುಡಕಟ್ಟುಗಳು’ ವಿಷಯದ ಬಗ್ಗೆ ಹಂಪಿಯ ಡಾ.ನಾಗೇಶ್ ಹೆಬ್ಬಾಲೆ ವಿಷಯ ಮಂಡಿಸುವರು. ಸಂಜೆ 6ಕ್ಕೆ ಸಾಧಕರೊಂದಿಗೆ ಸಂವಾದದಲ್ಲಿ `ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ನಡೆದು ಬಂದ ದಾರಿ’ ಕುರಿತು ಸರಗೂರು ಎಸ್.ಪ್ರವೀಣ್‍ಕುಮಾರ್, ಸಂಜೆ 7.30ಕ್ಕೆ ಬಿಳಿಗಿರಿರಂಗನಬೆಟ್ಟದ ಸೋಲಿಗರ ಬಸವರಾಜು ಅವರಿಂದ ಬುಡಕಟ್ಟು ಜೀವನಲಯ: ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ಸೆ.3ರಂದು ಬೆಳಿಗ್ಗೆ 7.30ಕ್ಕೆ ಯೋಗ ಮತ್ತು ಧ್ಯಾನದ ಕುರಿತು ಪಿ.ಪಿ.ತಮ್ಮಯ್ಯ ತರಬೇತಿ ನೀಡುವರು. ಬೆಳಗ್ಗೆ 9.30ಕ್ಕೆ ‘ಕನ್ನಡ ಸಾಹಿತ್ಯ ಮತ್ತು ಗಿರಿಜನ ಸಂಸ್ಕೃತಿ’ ಕುರಿತು ಡಾ.ಮಾಧವ ಪೆರಾಜೆ, ಬೆಳಗ್ಗೆ 11ಕ್ಕೆ ‘ಬುಡ ಕಟ್ಟು ಸಾಹಿತ್ಯ: ವಸ್ತು, ಆಶಯ ಮತ್ತು ಅಭಿವ್ಯಕ್ತಿ’ ಬಗ್ಗೆ ಡಾ.ಎಸ್.ಎಂ.ಮುತ್ತಯ್ಯ, ಮಧ್ಯಾಹ್ನ 12.30ಕ್ಕೆ ‘ಬುಡಕಟ್ಟು ಸಂಸ್ಕೃತಿ: ಜ್ಞಾನ ಪರಂಪರೆ’ ಬಗ್ಗೆ ಡಾ. ಕೃಷ್ಣಮೂರ್ತಿ ಹನೂರು, ಮಧ್ಯಾಹ್ನ 3ಕ್ಕೆ ‘ಬುಡಕಟ್ಟು ಸಂಸ್ಕೃತಿ: ಆಚರಣೆ ಪರಂಪರೆ’ ಕುರಿತು ಕುರುವ ಬಸವರಾಜ್ ವಿಷಯ ಮಂಡಿಸುವರು. ಸಂಜೆ 4.30ಕ್ಕೆ ಸಾಧಕರೊಂದಿಗೆ ಸಂವಾದದಲ್ಲಿ ಬುಡಕಟ್ಟು ಅಭಿವೃದ್ಧಿ: ಸಂಘ ಸಂಸ್ಥೆಗಳ ಪಾತ್ರದ ಬಗ್ಗೆ ಕೆ.ಭಾಸ್ಕರದಾಸ್ ಎಕ್ಕಾರು, ಸಂಜೆ 6ಕ್ಕೆ ಬುಡಕಟ್ಟು ಸಾಹಿತ್ಯ ಶಿಬಿರದ ನಿರ್ದೇಶಕರಿದಂದ ಬುಡಕಟ್ಟು ಸಾಹಿತ್ಯ ಮತ್ತು ಸಂಸ್ಕøತಿ ಬರಹ.

ಸೆ.4ರಂದು ಬೆಳಿಗ್ಗೆ 9.30ಕ್ಕೆ `ಬುಡಕಟ್ಟು ಮಹಿಳೆ’ ಕುರಿತು ಡಾ.ಎಚ್.ಪಿ. ಜ್ಯೋತಿ, ಬೆಳಿಗ್ಗೆ 11ಕ್ಕೆ `ಬುಡಕಟ್ಟು ಭಾಷೆಗಳು’ ಕುರಿತು ಡಾ.ಪಿ.ಕೆ. ಖಂಡೋಬ, ಮಧ್ಯಾಹ್ನ 12.30ಕ್ಕೆ `ಬುಡಕಟ್ಟು ಮಹಾಕಾವ್ಯ: ಸಾಂಸ್ಕøತಿಕ ನಾಯಕರು’ ಬಗ್ಗೆ ಡಾ.ಮೀರಾ ಸಾಬಿಹಳ್ಳಿ ಶಿವಣ್ಣ, ಮಧ್ಯಾಹ್ನ 3ಕ್ಕೆ `ಬುಡ ಕಟ್ಟು ಸಮು ದಾಯಗಳು ಮತ್ತು ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳು’ ಕುರಿತು ಪ್ರೊ.ಟಿ.ವಿ. ಬಸವನಗೌಡ, ಸಂಜೆ 4.30ಕ್ಕೆ `ಸ್ವಾತಂತ್ರ್ಯ ಹೋರಾಟ ಮತ್ತು ಬುಡಕಟ್ಟು ಸಮುದಾಯ’ದ ಬಗ್ಗೆ ಕೊಡಗಿನ ಸಂತೋಷ್ ತಮ್ಮಯ್ಯ ವಿಷಯ ಮಂಡಿಸುವರು ಎಂದರು.

ಸೆ.5ರಂದು ಬೆಳಗ್ಗೆ 9.30ಕ್ಕೆ ‘ಬುಡಕಟ್ಟು ಸಂಸ್ಕೃತಿ ಮತ್ತು ಸಮೂಹ ಮಾಧ್ಯಮಗಳು’ ಕುರಿತು ಮೈಸೂರು ಉಮೇಶ್, 11 ಗಂಟೆಗೆ ‘ನಾ ಕಂಡ ಬುಡಕಟ್ಟು ಜನರ ಜೀವನ ಮೌಲ್ಯಗಳು’ ಕುರಿತು ಸರಗೂರಿನ ಡಾ.ಎಂ. ಆರ್.ಸೀತಾರಾಮ್, ಮಧ್ಯಾಹ್ನ 12.30ಕ್ಕೆ ‘ಬುಡಕಟ್ಟು ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯ’ದ ಕುರಿತು ಬೆಂಗಳೂರಿನ ವಾದಿರಾಜ, ಮಧ್ಯಾಹ್ನ 2.30ಕ್ಕೆ ಶಿಬಿರದ ನಿರ್ದೇಶಕರಿಂದ ಬುಡಕಟ್ಟು ಹಾಡಿಗೆ ಭೇಟಿ ಮತ್ತು ಸಮೀಕ್ಷೆ ನಡೆಯಲಿದೆ ಎಂದು ಹೇಳಿದರು.

ಸೆ.6ರಂದು ಬೆಳಗ್ಗೆ 9.30ಕ್ಕೆ ಶಿಬಿರಾರ್ಥಿಗಳಿಂದ ಕವಿಗೋಷ್ಠಿ ಮತ್ತು ಕಥಾ ಓದು, ಬೆಳಗ್ಗೆ11ಕ್ಕೆ ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ ‘ವನವಾಸಿ ಕಲ್ಯಾಣ: ಜೀವನಾನುಭವ’ದ ಕುರಿತು ಹಾಗೂ ಮಧ್ಯಾಹ್ನ 12.30ಕ್ಕೆ ‘ಬುಡಕಟ್ಟು ಸಮುದಾಯ ಮತ್ತು ಶಿಕ್ಷಣ’ ವಿಷಯದ ಕುರಿತು ಬೆಂಗಳೂರಿನ ಡಾ.ಎಲ್.ಗೋಮತಿ ದೇವಿ ಮಾತನಾಡುವರು. ಮಧ್ಯಾಹ್ನ 2.30ಕ್ಕೆ ನಡೆ ಯುವ ಸಮಾರೋಪ ಸಮಾರಂಭದಲ್ಲಿ ಎಂಎಲ್‍ಸಿ ಶಾಂತಾರಾಂ ಸಿದ್ದಿ ಯಲ್ಲಾಪುರ ಸಮಾರೋಪ ಭಾಷಣ, ಮಹಾರಾಣಿ ಕ್ಲಸ್ಟರ್ ವಿವಿ ಕುಲಪತಿ ಡಾ.ಎಲ್. ಗೋಮತಿದೇವಿ, ಕಮ್ಮಟದ ನಿರ್ದೇಶಕ ಪ್ರೊ.ನೀಲ ಗಿರಿ ತಳವಾರ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಡಾ.ಕುಮಾರ್, ಅಕಾಡೆಮಿಯ ರಿಜಿಸ್ಟ್ರಾರ್ ಎನ್.ಕರಿಯಪ್ಪ, ಸದಸ್ಯ ಸಂಚಾಲಕ ಸಂತೋಷ್ ತಮ್ಮಯ್ಯ ಭಾಗವಹಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ವಾಮಿ ವಿವೇಕಾ ನಂದ ಯೂತ್ ಮೂವ್‍ಮೆಂಟ್ ಪ್ರಾಂಶುಪಾಲ ಡಾ. ಕುಮಾರ್, ನಿರ್ದೇಶಕಿ ಡಾ.ರೇಖಾ ಷಣ್ಮುಖ, ಸದಸ್ಯ ಸಂಚಾಲಕ ಎಂ.ಪಿ.ಕುಮಾರ್ ಉಪಸ್ಥಿತರಿದ್ದರು.

Translate »